ಕರಾವಳಿ

ಬ್ರಹ್ಮಾವರದಲ್ಲಿ ಅಕ್ರಮ ಮರಳುಗಾರಿಕೆ: 17 ದೋಣಿಗಳ ವಶಕ್ಕೆ

Views: 71

ಕನ್ನಡ ಕರಾವಳಿ ಸುದ್ದಿ : ಬ್ರಹ್ಮಾವರ ನದಿ ತೀರದ ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಸ್ವರ್ಣ ನದಿಗಳಲ್ಲಿ ದೋಣಿಗಳನ್ನು ಉಪಯೋಗಿಸಿ ಆಕ್ರಮ ಮರಳುಗಾರಿಕೆ ನಡೆಸಿರುವ ಬಗ್ಗೆ ಮಾಹಿತಿ ಆಧಾರದಲ್ಲಿ ಬ್ರಹ್ಮಾವರ ಪೊಲೀಸರು ಹಾವಂಜೆ ಗ್ರಾಮದ ಮುಗ್ಗೇರಿ ಹಾಗೂ ಉಳ್ಳೂರು ಗ್ರಾಮದ ಅಮ್ಮುಂಜೆ ಪರಿಸರದಲ್ಲಿ 17 ದೋಣಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಪೊಲೀಸ್ ವೃತ್ತ ನಿರೀಕ್ಷಕ ಗೋಪಿಕೃಷ್ಣ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಬ್ರಹ್ಮಾವರ ಪೊಲೀಸ್ ರಾಣಾ ಉಪ ನಿರೀಕ್ಷಕ ಆಶೋಕ ಮಾಳಾಬಗಿ, ಸುದರ್ಶನ್ ದೊಡಮನಿ ಹಾಗೂ ಠಾಣಾ ಸಿಬ್ಬಂದಿ ಭಾಗವಹಿಸಿದ್ದು ತನಿಖೆ ಮುಂದುವರೆದಿದೆ.

Related Articles

Back to top button
error: Content is protected !!