ರಾಜಕೀಯ

ಸಂಪುಟ ವಿಸ್ತರಣೆ ಇಂದು? ಸಂಭಾವ್ಯ ಸಚಿವರ ಪಟ್ಟಿ ಇಂತಿದೆ..ಹೈಕಮಾಂಡ್‌ನ ಸಚಿವರ ಪಟ್ಟಿ ಸಸ್ಪೆನ್ಸ್!

Views: 41

ಕನ್ನಡ ಕರಾವಳಿ ಸುದ್ದಿ: ರಾಜ್ಯ ಸಚಿವ ಸಂಪುಟ ವಿಸ್ತರಣೆ ಸೋಮವಾರ ಸಂಜೆ ಯಾಗುವುದು ಬಹುತೇಕ ಖಚಿತವಾಗಿದೆ. ಆದರೆ ಭಾನುವಾರ ತಡರಾತ್ರಿಯವರೆಗೆ ರಾಜ್ಯ ನಾಯಕರಿಗೆ ಅಂತಿಮ ಪಟ್ಟಿ ಸಿಕ್ಕಿರಲಿಲ್ಲ. ಹೀಗಾಗಿ ಸಚಿವಾಕಾಂಕ್ಷಿಗಳು ತೀವ್ರ ತಳಮಕ್ಕೊಳಗಾಗಿದ್ದರು.

ಕಳೆದ ವಾರವಿಡೀ ಸಚಿವ ಸಂಪುಟ ವಿಸ್ತರಣೆಗೆ ಒಪ್ಪಿಗೆ ಪಡೆಯಲು ರಾಜ್ಯ ನಾಯಕರು ದೆಹಲಿಯಲ್ಲಿ ಕಾದು ಕೂತ ಬಳಿಕ ರಾಹುಲ್ ಗಾಂಧಿ ಅವರೊಂದಿಗೆ ಸಭೆ ನಡೆದರೂ, ಅಂತಿಮ ಪಟ್ಟಿಯನ್ನು ನೀಡಿರಲಿಲ್ಲ. ನೀವು ಬೆಂಗಳೂರಿಗೆ ಹೊರಡಿ, ಮತ್ತೊಮ್ಮೆ ಚರ್ಚಿಸಿ, ಅಂತಿಮ ಪಟ್ಟಿಯನ್ನು ರವಾನಿಸುವುದಾಗಿ ಹೇಳಿದ್ದರು. ಆದರೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಕೇರಳದಲ್ಲಿರುವುದರಿಂದ ಭಾನುವಾರ ಸಂಜೆ ಸಭೆ ನಡೆದಿಲ್ಲ. ಒಂದು ವೇಳೆ ಭಾನುವಾರ ತಡರಾತ್ರಿ ಸಭೆ ನಡೆದರೆ, ಸೋಮವಾರ ಬೆಳಗ್ಗೆ 10.30ರ ಹೊತ್ತಿಗೆ ಪಟ್ಟಿಯನ್ನು ರವಾನಿಸುವ ಸಂದೇಶವನ್ನು ಪಕ್ಷದ ಹೈಕಮಾಂಡ್ ನೀಡಿದೆ.

ಭಾನುವಾರ ತಡರಾತ್ರಿ ಪಟ್ಟಿ ಅಂತಿಮ ಗೊಂಡರೂ, ಸೋಮವಾರ ಬೆಳಗ್ಗೆ ರಾಜ್ಯ ನಾಯಕರಿಗೆ ಪಟ್ಟಿಯನ್ನು ರವಾನಿಸುವುದರೊಂದಿಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಗಳಾದ ಕೆ.ಸಿ.ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲ ಅವರು ಬೆಂಗಳೂರಿಗೆ ಆಗಮಿಸಲಿದ್ದಾರೆ. ಒಂದು ವೇಳೆ ಭಾನುವಾರ ಹೈಕಮಾಂಡ್ ನಾಯಕರ ಸಭೆ ನಡೆಯದಿದ್ದರೆ ಮುಂದೇನು ಎನ್ನುವ ಆತಂಕ ಸಚಿವಾಕಾಂಕ್ಷಿಗಳಲ್ಲಿದೆ.

ಮೂಲಗಳ ಪ್ರಕಾರ, ಲೋಕಭವನದ ಅಧಿಕಾರಿಗಳಿಗೆ ರಾಜ್ಯ ಸರಕಾರದಿಂದ ಪ್ರಮಾಣವಚನ ಕಾರ್ಯಕ್ರಮಕ್ಕೆ ಅಗತ್ಯ ಸಿದ್ದತೆ ಮಾಡಿಕೊಳ್ಳಲು ಈಗಾಗಲೇ ಸೂಚನೆ ನೀಡಲಾಗಿದೆ. ಸೋಮವಾರ ಸಂಜೆ 4ರಿಂದ 5ಗಂಟೆ ಯೊಳಗೆ ಪ್ರಮಾಣ ವಚನ ಕಾರ್ಯ ಕ್ರಮ ನಡೆಸುವ ಆಲೋಚನೆಯಲ್ಲಿರುವ ರಾಜ್ಯ ಸರಕಾರ, ಈ ಸಂಬಂಧ ರಾಜ್ಯಪಾಲರ ಸಮಯವನ್ನು ಪಡೆದು ಕೊಂಡಿದೆ. ಭಾನುವಾರವೂ ಪಟ್ಟಿ ಕೈಸೇರದೇ ಇರುವುದರಿಂದ ಏನಾಗಲಿದೆ ಎನ್ನುವ ಸ್ಪಷ್ಟನೆ ಪಕ್ಷದಲ್ಲಿಲ್ಲ.

ಸಚಿವ ಸಂಪುಟಕ್ಕೆ ಸೇರ್ಪಡೆಯಾಗುವ ಸಂಭಾವ್ಯ ಸಚಿವರ ಪಟ್ಟಿ ಇಂತಿದೆ..

ಅಜಯ್ ಧರ್ಮಸಿಂಗ್ (ಕಲಬುರಗಿ)

ಯಶವಂತರಾಯಗೌಡ ಪಾಟೀಲ (ಇಂಡಿ)

ಟಿ. ರಘುಮೂರ್ತಿ (ಚಳ್ಳಕೆರೆ)

ಬಿ. ನಾಗೇಂದ್ರ (ಬಳ್ಳಾರಿ ಗ್ರಾಮೀಣ)

ಶಿವರಾಜ ತಂಗಡಗಿ (ಕನಕಗಿರಿ)

ಸಲೀಂ ಅಹ್ಮದ್ (ವಿಧಾನ ಪರಿಷತ್)

ಎನ್.ಎಸ್. ಬೋಸರಾಜು (ವಿಧಾನ ಪರಿಷತ್)

ಸಂತೋಷ್ ಲಾಡ್ (ಕಲಘಟಗಿ)

ಎಸ್.ಎಸ್. ಮಲ್ಲಿಕಾರ್ಜುನ (ದಾವಣಗೆರೆ)

ವಿಜಯಾನಂದ ಕಾಶಪ್ಪನವರ್ (ಬಾಗಲಕೋಟೆ)

ಪುಟ್ಟರಂಗ ಶೆಟ್ಟಿ (ಚಾಮರಾಜನಗರ)

ಎ.ಎಸ್. ಪೊನ್ನಣ್ಣ (ವಿರಾಜಪೇಟೆ)

ಎನ್. ಚೆಲುವರಾಯಸ್ವಾಮಿ (ನಾಗಮಂಗಲ)

ಶಿವಲಿಂಗೇಗೌಡ (ಅರಸೀಕೆರೆ)

ಬಸವರಾಜ ಶಿವಣ್ಣನವರ್ (ಬ್ಯಾಡಗಿ)

ಲಕ್ಷ್ಮಣ ಸವದಿ

ಲಕ್ಷ್ಮೀ ಹೆಬ್ಬಾಳ್ಕರ್

ಡಾ. ಆರತಿ ಕೃಷ್ಣ

ಅನ್ನಪೂರ್ಣ ಇ. ತುಕಾರಂ

ಆನೇಕಲ್ ಶಿವಣ್ಣ

ಇದರ ಜೊತೆಗೆ ಪಿ.ಎಂ. ನರೇಂದ್ರಸ್ವಾಮಿ, ಬಸವಂತಪ್ಪ, ಶರತ್ ಬಚ್ಚೇಗೌಡ, ಕನೀಜ್ ಫಾತಿಮಾ, ತನ್ವೀರ್ ಸೇಠ್ ಅವರ ಹೆಸರೂ ಸಚಿವ ಸ್ಥಾನಕ್ಕೆ ಕೇಳಿಬರುತ್ತಿವೆ.

Related Articles

Back to top button
error: Content is protected !!