ರಾಜಕೀಯ

ರಾಜ್ಯ ಸಚಿವ ಸಂಪುಟ ವಿಸ್ತರಣೆ :ಸಚಿವರ ಪಟ್ಟಿ ಫೈನಲ್!

Views: 73

ಕನ್ನಡ ಕರಾವಳಿ ಸುದ್ದಿ:ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಸಂಭವನೀಯರ ಪಟ್ಟಿ ಬಹುತೇಕ ಅಂತಿಮಗೊಂಡಿದೆ. ಮುಂದಿನ ವಾರ ವರಿಷ್ಠ ನಾಯಕರ ಅನುಮೋದನೆ ಪಡೆದು ಸಂಪುಟ ವಿಸ್ತರಣೆಯಾಗುವುದು ಬಹುತೇಕ ಖಚಿತವಾಗಿದೆ.

ಸಂಭವನೀಯ ಸಚಿವರ ಪಟ್ಟಿಯ ಕುರಿತು ರಾಹುಲ್‌ ಗಾಂಧಿಯವರು ಸೂಚಿಸಿರುವ ಮಾನದಂಡಕ್ಕೆ ಹೋಲಿಕೆಯಾಗುವವರ ಹೆಸರನ್ನು ರಾಜ್ಯ ನಾಯಕರು ಹೈಕಮಾಂಡ್‌ ಮುಂದಿಟ್ಟಿದ್ದಾರೆ.

ಆಗಸ್ಟ್‌ ಮೊದಲ ವಾರದಿಂದ ವಿಧಾನ ಮಂಡಲ ಅಧಿವೇಶನ ನಿಗದಿಯಾಗಬೇಕಿತ್ತು. ಸಂಪುಟ ವಿಸ್ತರಣೆ ವಿಳಂಬವಾಗಿರುವುದರಿಂದ ಅಧಿವೇಶನ ಕೂಡ ಎರಡು ಅಥವಾ ಮೂರನೇ ವಾರಕ್ಕೆ ಮುಂದೂಡಿಕೆಯಾಗಲಿದೆ ಎಂದು ಹೇಳಲಾಗಿದೆ.

ಸಂಭವನೀಯರ ಪಟ್ಟಿ:

ಆರ್‌.ವಿ.ದೇಶಪಾಂಡೆ ಸಭಾಧ್ಯಕ್ಷರಾಗಲು ಒಪ್ಪಿದರೆ, ಮತ್ತೊಬ್ಬ ಹಿರಿಯರಾದ ಹೆಚ್‌.ಕೆ.ಪಾಟೀಲ್‌ ಸಚಿವರಾಗಲಿದ್ದಾರೆ. ಇಲ್ಲವಾದರೆ ಸಭಾಧ್ಯಕ್ಷ ಸ್ಥಾನಕ್ಕೆ ಸಿದ್ದರಾಗಿದ್ದಾರೆ. ಟಿ.ಬಿ.ಜಯಚಂದ್ರ ಅವರಿಗೆ ಸಾಮಾಜಿಕ ನ್ಯಾಯದ ಆಧಾರದ ಮೇಲೆ ಅವಕಾಶ ಸಿಗುವ ಸಾಧ್ಯತೆ ಇದೆ.

ದಿನೇಶ್‌ ಗುಂಡೂರಾವ್‌ ಅವರನ್ನು ದೆಹಲಿ ವಿಶೇಷ ಪ್ರತಿನಿಧಿ ಸ್ಥಾನಕ್ಕೆ ಪರಿಗಣಿಸುವ ಚಿಂತನೆ ನಡೆದಿದೆ.

ಒಕ್ಕಲಿಗ ಸಮುದಾಯದಲ್ಲಿ ಹೆಚ್‌.ಸಿ.ಬಾಲಕೃಷ್ಣ, ಎಸ್‌‍.ಆರ್‌.ಶ್ರೀನಿವಾಸ್‌‍, ಚಲುವರಾಯಸ್ವಾಮಿ, ರಮೇಶ್‌ ಬಂಡಿಸಿದ್ದೇಗೌಡ, ನಂಜೇಗೌಡ, ಟಿ.ಡಿ.ರಾಜೇಗೌಡ, ಡಾ.ಎಂ.ಸಿ.ಸುಧಾಕರ್‌ ನಡುವೆ ಪೈಪೋಟಿ ಇದೆ. ಅರಕಲಗೂಡು ಶಾಸಕ ಕೆ.ಎಂ.ಶಿವಲಿಂಗೇಗೌಡ ಸಂಪುಟ ಸೇರುವುದು ಬಹುತೇಕ ಖಚಿತವಾಗಿದೆ.

ಎಂ.ಕೃಷ್ಣಪ್ಪ ಅಥವಾ ಅವರ ಪುತ್ರ ಪ್ರಿಯಕೃಷ್ಣ ಅವರಿಗೆ ಅವಕಾಶ ಸಿಗಲಿದೆ. ಐದು ಬಾರಿ ಗೆಲುವು ಕಂಡಿರುವ ಹಾಗೂ ಜೆಡಿಎಸ್‌‍ ನಾಯಕರಿಗೆ ಪ್ರತ್ಯುತ್ತರಿಸುವ ನಿಟ್ಟಿನಲ್ಲಿ ಪ್ರಬಲರಾಗಿ ನಿಂತಿರುವ ಮಾಗಡಿಯ ಹೆಚ್‌.ಸಿ.ಬಾಲಕೃಷ್ಣ ಅವರಿಗೆ ಅವಕಾಶ ನೀಡಬೇಕು ಎಂಬ ಚರ್ಚೆಗಳಾಗಿವೆ. ಶರತ್‌ ಬಚ್ಚೆಗೌಡ ಅವರಿಗೆ ಹೈಕಮಾಂಡ್‌ ಕೃಪಾಕಟಾಕ್ಷ ಇದೆ ಎನ್ನಲಾಗುತ್ತಿದೆ.

ಅಪ್ಪಾಜಿ ನಾಡಗೌಡ, ಹಂಪನಗೌಡ ಬಾದರ್ಲಿ, ಎನ್‌.ಎ.ಹ್ಯಾರಿಸ್‌‍, ಮಹಂತೇಶ್‌ ಶಿವಾನಂದ ಕೌಜಲಗಿ, ಜಿ.ಟಿ.ಪಾಟೀಲ್‌, ಎಂ.ವೈ.ಪಾಟೀಲ್‌, ಪುಟ್ಟರಂಗಶೆಟ್ಟಿ, ಸಂತೋಷ್‌ ಲಾಡ್‌, ಬಿ.ಕೆ.ಸಂಗಮೇಶ್ವರ್‌, ಬಿ.ನಾಗೇಂದ್ರ, ಅಜಯ್‌ ಧರ್ಮಸಿಂಗ್‌, ಪಿ.ಎಂ.ಅಶೋಕ್‌, ಲಕ್ಷ್ಮೀ ಹೆಬ್ಬಾಳ್ಕರ್‌, ಎ.ಆರ್‌.ಕೃಷ್ಣಮೂರ್ತಿ, ಬಿ.ಶಿವಣ್ಣ, ಕೆ.ಷಡಾಕ್ಷರಿ, ಟಿ.ರಘುಮೂರ್ತಿ ಹೆಸರುಗಳು ಪಟ್ಟಿಯಲ್ಲಿವೆ.

ಮಾಜಿ ಸಚಿವ ಮಧು ಬಂಗಾರಪ್ಪ ಅವರಿಗೆ ಬೇಳೂರು ಗೋಪಾಲಕೃಷ್ಣ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಕೋಲಾರ ಜಿಲ್ಲೆಯಲ್ಲಿ ಕೊತ್ತೂರ್‌ ಮಂಜುನಾಥ್‌ ಗೆ ಎಸ್‌‍.ಎನ್‌.ನಾರಾಯಣಸ್ವಾಮಿ, ನಂಜೇಗೌಡ ಎದುರಾಳಿಗಳಾಗಿ ನಿಂತಿದ್ದಾರೆ. ಅಲ್ಪಸಂಖ್ಯಾತರ ಪೈಕಿ ವಿಧಾನಪರಿಷತ್‌ ಸದಸ್ಯ ಸಲೀಂ ಅಹಮದ್‌ ಹೆಸರು ಪರಿಗಣನೆಯಲ್ಲಿದೆ, ರಿಜ್ವಾನ್‌ ಅರ್ಷದ್‌, ಎನ್‌.ಎ.ಹ್ಯಾರೀಶ್‌ ಜೊತೆಗೆ ತನ್ವೀರ್‌ ಸೆಠ್‌ ಅವಕಾಶ ಕೇಳುತ್ತಿದ್ದಾರೆ.

ಮಹಿಳಾ ಹಾಗೂ ಮುಸ್ಲಿಂ ಕೋಟಾ ಎರಡರಲ್ಲೂ ಖನೀಜ್‌ ಫಾತಿಮಾ ಹೆಸರು ಚಾಲ್ತಿಯಲ್ಲಿದೆ. ಮೊದಲ ಬಾರಿ ಗೆದ್ದಿರುವವರ ಪೈಕಿ ಎ.ಎಸ್‌‍.ಪೊನ್ನಣ್ಣ, ಪ್ರದೀಪ್‌ ಈಶ್ವರ್‌ ಹೆಸರು ಮುಂಚೂಣಿಯಲ್ಲಿದೆ. ಉಳಿದಂತೆ ಬಸವರಾಜ್‌ ಶಿವಗಂಗಾ, ಅಶೋಕ್‌ ಕುಮಾರ್‌ ರೈ , ಆನಂದ ಕೆ.ಎಸ್‌‍. ಪೈಪೋಟಿಯಲ್ಲಿದ್ದಾರೆ.

 

 

Related Articles

Back to top button
error: Content is protected !!