ರಾಜಕೀಯ

ಮೋದಿ ಕಾರ್ಯಕ್ರಮ ವೇಳೆ ನಕಲಿ ಗುರುತಿನ ಚೀಟಿಯೊಂದಿಗೆ ಬಂದೂಕು ಹಿಡಿದು ಬಂದಿದ್ದ ಇಬ್ಬರ ಬಂಧನ

Views: 154

ಕನ್ನಡ ಕರಾವಳಿ ಸುದ್ದಿ: ಪ್ರಧಾನಿ ಮೋದಿ ಅವರು ಭಾಗವಹಿಸಿದ ಗ್ಲೋಬಲ್ ಫಿನ್‌ಟೆಕ್ ಫೆಸ್ಟ್ ನಡೆಯಲಿರುವ ಮುಂಬಯಿಯ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಭದ್ರತ ಲೋಪ ಎದುರಾಗಿದೆ. ಪ್ರಧಾನಿ ಕಚೇರಿಯ ನಕಲಿ ಗುರುತಿನ ಚೀಟಿ ಬಳಸಿ ವ್ಯಕ್ತಿ ಆತನ ಅಂಗರಕ್ಷನೊಬ್ಬ ಸೆಂಟರ್ ನೊಳಗೆ ಪ್ರವೇಶಿಸಲು ಪ್ರಯತ್ನಿಸಿದ್ದು, ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಸೆ.7ರಂದು ರೋಹನ್ ಪರೇಖ್ ಎಂಬಾತ ಪ್ರಧಾನಿ ಕಚೇರಿ ಅಧಿಕಾರಿ ಎಂದು ಹೇಳಿ ಪ್ರವೇಶಿಸಿದ್ದಾನೆ. ಬಳಿಕ ಈತನ ಅಂಗರಕ್ಷಕ ಎಂದು ಹೇಳಿಕೊಂಡು ದಿಲೀಪ್ ಎಂಬಾತನೂ ಪ್ರವೇಶಕ್ಕೆ ಮುಂದಾಗಿದ್ದು, ತಪಾಸಣೆ ವೇಳೆ ಆತನ ಬಳಿ ಬಂದೂಕು ಇರುವುದು ಕಂಡು ಬಂದಿದೆ. ಭದ್ರತ ಸಿಬಂದಿ ಈತನನ್ನು ತಡೆದ ಕಾರಣ ದಿಲೀಪ್ ರೋಹನ್‌ಗೆ ಕರೆ ಮಾಡಿದ್ದು, ಈತ ಭದ್ರತ ಸಿಬಂದಿಗೆ ಪ್ರಧಾನಿ ಕಚೇರಿಯ ನಕಲಿ ಗುರುತಿನ ಚೀಟಿ ತೋರಿಸಿದ್ದಾನೆ. ಅದರಲ್ಲಿ ರೋಹನ್ ‘ಗ್ರೇಡ್ ಸಿ ಅಧಿಕಾರಿ’ ಎಂದು ಉಲ್ಲೇಖಿಸಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. ಬಳಿಕ ಅನುಮಾನದಿಂದಾಗಿ ಪೊಲೀಸರು ಇಬ್ಬರನ್ನೂ ಬಂಧಿಸಿದ್ದು, ಕೋರ್ಟ್‌ಗೆ ಹಾಜರುಪಡಿಸಲಾಗಿದೆ. ಇದೀಗ ರೋಹನ್ ಪರೇಖ್ ನನ್ನು ಸೆ.11ರವರೆಗೆ ಪೊಲೀಸ್ ವಶದಲ್ಲಿರಿಸಲು ಕೋರ್ಟ್ ಸೂಚನೆ ನೀಡಿದೆ.

 

Related Articles

Back to top button
error: Content is protected !!