ಶಿಕ್ಷಣ

ಗುರುಕುಲ ವಿದ್ಯಾಸಂಸ್ಥೆಯಲ್ಲಿ ಆಷಾಡ ದೇಸಿ ಆಹಾರ ಪದ್ಧತಿಯ ಸತ್ಯಾಮೃತದ ಸವಿ

Views: 20

ಕನ್ನಡ ಕರಾವಳಿ ಸುದ್ದಿ: ಕೋಟೇಶ್ವರದ ವಕ್ವಾಡಿ ಗುರುಕುಲ ವಿದ್ಯಾಸಂಸ್ಥೆಯಲ್ಲಿ ಆಷಾಡ ಮಾಸದ ದೇಸಿ ಆಹಾರ ಪದ್ಧತಿಯ ಸಸ್ಯಾಮೃತ ಎಂಬ ಪರಿಕಲ್ಪನೆಯ ವಿಶಿಷ್ಟ ಆಹಾರಗಳನ್ನು ಪರಿಚಯಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಆಧುನಿಕ ಜೀವನಶೈಲಿಯಲ್ಲಿ ಋತುಮಾನಕ್ಕೆ ಅನುಗುಣವಾದ ಆಹಾರಗಳನ್ನು ಸೇವಿಸದೆ ಆರೋಗ್ಯದ ಸಮಸ್ಯೆಗಳಿಗೆ ಒಳಗಾಗುತ್ತಿರುವ ಸಂದರ್ಭದಲ್ಲಿ ಈ ಕಾರ್ಯಕ್ರಮವು ಅತಿ ಮಹತ್ವದ್ದಾಗಿತ್ತು. ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಮಣಿಪಾಲದ ತಪೋವನ ಲೈಫ್ ಸ್ಪೇಸ್ ಪ್ರೈವೇಟ್ ಲಿಮಿಟೆಡ್ ಇದರ ಮುಖ್ಯ ವೈದ್ಯಕೀಯ ಸಲಹೆಗಾರರಾದ ಡಾ.ವಾಣಿಶ್ರೀ ಐತಾಳ್ ರವರು ಮಾತನಾಡುತ್ತಾ – ಪ್ರಕೃತಿಯನ್ನು ನಾವು ಕಾಪಾಡಿದರೆ, ಪ್ರಕೃತಿ ನಮ್ಮನ್ನು ಕಾಯುತ್ತದೆ. ಮಾನವನ ದೇಹ ಪ್ರಕೃತಿ ಸುಸ್ಥಿತಿಯಲ್ಲಿರಲು ಸುತ್ತಮುತ್ತಲಿನ ಪ್ರಕೃತಿಯೇ ಮೂಲ ಆಧಾರವಾಗಿದೆ. ರೋಗ ಬರುವುದಕ್ಕಿಂತ ಮೊದಲೇ ಬರದೇ ಇರುವ ಹಾಗೆ ನಮ್ಮ ದೈನಂದಿನ ಆಹಾರ ಪದ್ಧತಿಯನ್ನು ಋತುಮಾನಕ್ಕೆ ಹೊಂದಿಕೆಯಾಗುವಂತೆ ರೂಪಿಸಿಕೊಳ್ಳಬೇಕು. ಆರೋಗ್ಯಕರ ಆಹಾರ ಸೇವನೆಗೆ ನುರಿತ ವೈದ್ಯರ ಸಲಹೆ ಸೂಚನೆ ಅತಿ ಅಗತ್ಯ ಮನುಷ್ಯನಿಗೆ ಆಹಾರವೇ ಔಷಧವೆನ್ನುವುದನ್ನು ಅರಿತು ನಾವು ಹೆಜ್ಜೆ ಹಾಕಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬಾಂಡ್ಯಾ ಎಜುಕೇಶನಲ್ ಟ್ರಸ್ಟ್ ನ ಜಂಟಿ ಕಾರ್ಯನಿರ್ವಾಹಕರಾದ ಶ್ರೀ ಕೆ. ಸುಭಾಶ್ಚಂದ್ರ ಶೆಟ್ಟಿಯವರು ಮಾತನಾಡಿ – ಕಲಬೆರಕೆ ಆಹಾರ ಸೇವನೆಯಿಂದ ನಾವು ದೂರವಿದ್ದು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಆರೋಗ್ಯಕ್ಕೆ ಹಾನಿಕರವಾದ ರಾಸಾಯನಿಕ ಯುಕ್ತ ಆಹಾರ ಸೇವನೆಯಿಂದ ಹೊರಬರಬೇಕಾದರೆ ಔಷಧೀಯ ಗುಣವುಳ್ಳ ಸತ್ಯಜನ್ಯ ಆಹಾರಗಳ ಪರಿಚಯದೊಂದಿಗೆ ಅದರ ಬಳಕೆ ಅಗತ್ಯವೆಂದರು. ಈ ಕಾರ್ಯಕ್ರಮವನ್ನು ಸಂಘಟಿಸಿದ ಬಾಂಡ್ಯ ಎಜುಕೇಶನಲ್ ಟ್ರಸ್ಟ್ ನ ಜಂಟಿ ಕಾರ್ಯನಿರ್ವಾಹಕರಾದ ಶ್ರೀಮತಿ ಅನುಪಮಾ ಯಶ್ ಶೆಟ್ಟಿ ಯವರು ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನು ಸ್ವಾಗತಿಸಿದರು. ಊರ ಗಣ್ಯರು ಈ ಕಾರ್ಯಕ್ರಮಕ್ಕೆ ಆಗಮಿಸಿ, ಮೂವತ್ತೊಂದು ಬಗೆಯ ಸಾಂಪ್ರದಾಯಿಕ ಸಸ್ಯ ಪದಾರ್ಥಗಳ ಸಸ್ಯಾಮೃತದ ಭೋಜನಕೂಟದಲ್ಲಿ ಭಾಗಿಯಾದರು. ಶಿಕ್ಷಕಿ ಶ್ರೀಮತಿ ನಾಗರತ್ನ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಶ್ರೀ ಗುರು ಎಂ.ಪಿ. ಪ್ರಾರ್ಥಿಸಿದರು. ಶಿಕ್ಷಕಿ ಶ್ರೀಮತಿ ಸುಷ್ಮಾ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ಪ್ರಾಂಶುಪಾಲೆ ಡಾ.ರೂಪಾ ಶೆಣೈ ವಂದಿಸಿದರು.

Related Articles

Back to top button
error: Content is protected !!