ಚೀಲದಲ್ಲಿ ತಲೆ ಇಲ್ಲದ ಯುವತಿಯ ದೇಹ ಪತ್ತೆ: ಪ್ರೀತಿ -ಪ್ರೇಮ ಜಗಳ ಯುವಕನ ಬಂಧನ!
Views: 79
ಕನ್ನಡ ಕರಾವಳಿ ಸುದ್ದಿ: ಚೀಲದಲ್ಲಿ ಯುವತಿಯ ತಲೆ ಇಲ್ಲದ ಶವ ಪತ್ತೆಯಾದ ಪ್ರಕರಣದಲ್ಲಿ ಯುವಕನೊಬ್ಬನನ್ನು ಬಂಧಿಸಿರುವ ಘಟನೆ ಆಗ್ರಾದಲ್ಲಿ ನಡೆದಿದೆ. ಮಿಂಕಿ ಶರ್ಮಾ ಕೊಲೆಯಾದ ಯುವತಿ, ವಿನಯ್ ರಜಪೂತ್ ಬಂಧಿತ ಆರೋಪಿ.
ಯುವತಿಯ ನಾಪತ್ತೆ ಕುರಿತು ಕುಟುಂಬಸ್ಥರು ದೂರು ನೀಡಿದ್ದು, ಪ್ರಮುಖ ರಸ್ತೆಗಳಲ್ಲಿ ಸಿಸಿಟಿವಿಗಳನ್ನು ಪರಿಶೀಲಿಸಿದಾಗ ಪ್ರಕರಣಕ್ಕೆ ಸುಳಿವು ಸಿಕ್ಕಿದೆ. ಸಿಸಿಟಿವಿ ದೃಶ್ಯಾವಳಿಗಳಿಂದ ಯುವತಿಯ ಸ್ಕೂಟರ್ ಅನ್ನು ಆಕೆಯ ಸಹೋದ್ಯೋಗಿ ವಿನಯ್ ಬಳಸಿದ್ದನ್ನು ಪೊಲೀಸರು ಪತ್ತೆಹಚ್ಚಿದ್ದರು.
ಇಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದರು. ಆದರೆ, ಯುವತಿ ಇನ್ಯಾರದ್ದೋ ಜತೆ ಮಾತನಾಡುತ್ತಿದ್ದಳು. ಈ ವಿಚಾರಕ್ಕೆ ಇಬ್ಬರ ಮಧ್ಯೆ ಆಗಾಗ ಜಗಳ ಆಗುತ್ತಿತ್ತು. ಬಳಿಕ ತಾಳ್ಮೆ ಕಳೆದುಕೊಂಡ ವಿನಯ್, ಮಿಂಕಿಯನ್ನು ಆಫೀಸ್‌ಗೆ ಕರೆಸಿಕೊಂಡು ಯುವತಿಗೆ ಎಂಟಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿ, ನಂತರ ತಲೆ ಕತ್ತರಿಸಿ, ತಲೆಯನ್ನು ಚರಂಡಿಗೆ ಎಸೆದಿದ್ದಾಗಿದ್ದಾಗಿ ವಿನಯ್ ರಜಪೂತ್ ಪೊಲೀಸರಿಗೆ ತಿಳಿಸಿದ್ದಾನೆ. ಯುವತಿಯ ತಲೆ ಇನ್ನೂ ಪತ್ತೆಯಾಗಿಲ್ಲ.
ಯುವತಿಗೆ ಬೇರೊಬ್ಬರೊಂದಿಗೆ ಸಂಬಂಧವಿದೆ ಎಂಬ ಅನುಮಾನದಿಂದ ಕೊಲೆ ಮಾಡಿದ್ದಾಗಿ ವಿನಯ್ ಪೊಲೀಸರಿಗೆ ತಿಳಿಸಿದ್ದಾನೆ. ಯಮುನಾ ನದಿಯಲ್ಲಿ ಶವವನ್ನು ಎಸೆಯಲಿದ್ದ ಆದರೆ, ಚೀಲದ ಭಾರ ಹೊರಲು ಸಾಧ್ಯವಾಗದೇ ಜವಾಹರ್ ನಗರದ ಸೇತುವೆಯಿಂದ ದೇಹದ ಭಾಗವನ್ನು ಎಸೆದು ಪರಾರಿಯಾಗಿದ್ದ ಎಂದು ತಿಳಿದುಬಂದಿದೆ.






