ಸಾಂಸ್ಕೃತಿಕ

ಏಕಕಾಲದಲ್ಲಿ ನೃತ್ಯ, ಹಾಡುತ್ತಾ ಅಪರೂಪದ ದಾಖಲೆ ಬರೆದ ಉಡುಪಿಯ ದೀಕ್ಷಾ ರಾಮಕೃಷ್ಣ

Views: 67

ಕನ್ನಡ ಕರಾವಳಿ ಸುದ್ದಿ: ಏಕಕಾಲದಲ್ಲಿ ನೃತ್ಯ ಮಾಡುತ್ತಾ ಹಾಡುತ್ತಾ ಗಮನ ಸೆಳೆಯುವ ಅಪರೂಪದ ದಾಖಲೆ ಬರೆದ ಉಡುಪಿಯ ದೀಕ್ಷಾ ರಾಮಕೃಷ್ಣ ಪುರಂದರ ದಾಸರ ಕೀರ್ತನೆಗಳನ್ನು ಲಯಬದ್ಧವಾಗಿ ಶಾಸ್ತ್ರೀಯವಾಗಿ ಹಾಡುತ್ತಾ, ಭರತನಾಟ್ಯದ ಸರಳ ಹೆಜ್ಜೆಗಳೊಂದಿಗೆ, ಈ ದಾಖಲೆಯನ್ನು ಪೂರ್ಣಗೊಳಿಸಿದ್ದಾರೆ.

ಸತತ ಆರು ಗಂಟೆ 13 ನಿಮಿಷಗಳ ಕಾಲ ಪ್ರದರ್ಶನ ನೀಡಿದ್ದಾರೆ. ಸದ್ಯ ಇವರ ಈ ಸಾಧನೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸೇರ್ಪಡೆಯಾಗಿದೆ. ಉಡುಪಿಯ ಎಂಜಿಎಂ ಕಾಲೇಜಿನ ಆವರಣದಲ್ಲಿ, ಬೆಳಿಗ್ಗೆ 10 ಗಂಟೆಯಿಂದ ಆರಂಭಿಸಿ 6 ಗಂಟೆ 13 ನಿಮಿಷಗಳ ಕಾಲ ಕ್ರಮಬದ್ಧವಾಗಿ ಪ್ರದರ್ಶನ ನೀಡಿದರು.

ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಪ್ರತಿನಿಧಿಗಳು ಸ್ಥಳದಲ್ಲಿ ಹಾಜರಿದ್ದು, ಪ್ರಮಾಣ ಪತ್ರ ಹಸ್ತಾಂತರಿಸಿದರು. ಕರಾವಳಿಯ ಈ ಯುವ ಪ್ರತಿಭೆ ಖಾಸಗಿ ವಾಹಿನಿಗಳ ರಿಯಾಲಿಟಿ ಶೋಗಳ ಮೂಲಕ ಹೆಸರು ಮಾಡಿದ್ದಾರೆ. ಈ ಟಿವಿ ಕನ್ನಡ ವಾಹಿನಿಯಲ್ಲಿ ಎಸ್ .ಪಿ.ಬಾಲಸುಬ್ರಹ್ಮಣ್ಯಂ ನಡೆಸುತ್ತಿದ್ದ ‘ಎದೆ ತುಂಬಿ ಹಾಡುವೆನು’ ಶೋನಲ್ಲಿ 2 ಬಾರಿ ವಿಜೇತರಾಗಿದ್ದಾರೆ. ಝೀ ಕನ್ನಡ ವಾಹಿನಿಯ ಸರಿಗಮಪ ಸೀಜನ್ 13ರಲ್ಲಿ ಫೈನಲ್ ಹಂತ ತಲುಪಿದ್ದರು.

Related Articles

Back to top button
error: Content is protected !!