ಕನ್ನಡ ಕರಾವಳಿ ಸುದ್ದಿ: ಕುಂದಾಪುರದ ಆರ್ ಎನ್ ಶೆಟ್ಟಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಸಂಭ್ರಮದ ಗಣರಾಜ್ಯೋತ್ಸವ ಆಚರಣೆ ನಡೆಯಿತು.
‘ಕಾಲ ಕಾಲಕ್ಕೆ ಸಂದರ್ಭಾನುಸಾರವಾಗಿ ಹಲವು ತಿದ್ದುಪಡಿಗಳನ್ನು ಕಂಡ ಭಾರತದ ಸಂವಿಧಾನ ವಿಶಿಷ್ಟವಾದುದು. ನಮ್ಮ ಪ್ರದೇಶದವರೇ ಆದ ಬೆನಗಲ್ ನರಸಿಂಗ್ ರಾಯ್ ಮತ್ತು ಹಲವು ಶ್ರೇಷ್ಠ ವ್ಯಕ್ತಿತ್ವಗಳು ಮುಂಚೂಣಿಯಲ್ಲಿದ್ದು ಸಿದ್ಧಗೊಳಿಸಿದ ಸಂವಿಧಾನದಲ್ಲಿರುವ ಸೂಕ್ತ ತಿದ್ದುಪಡಿಗಳನ್ನು ನಾಗರೀಕರ ಒಳಿತಿಗೆ ಬಳಸಿಕೊಳ್ಳಬೇಕು ‘ ಎಂದು ಕುಂದಾಪುರದ ಆರ್.ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ನವೀನ ಕುಮಾರ ಶೆಟ್ಟಿಯವರು ಕಾಲೇಜಿನಲ್ಲಿ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣಗೈದು ಕರೆ ನೀಡಿದರು.
ಕಂಪ್ಯೂಟರ್ ವಿಭಾಗದ ಮುಖ್ಯಸ್ಥರಾದ ಸಂದೀಪ್ ಪೂಜಾರಿಯವರು ಧ್ವಜಾರೋಹಣದ ವಿಧಿಗಳನ್ನು ನಿರ್ದೇಶಿಸಿದರು. ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕರಾದ ರಾಮ್ ಶೆಟ್ಟಿಯವರು ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಕೃಷ್ಣಮೂರ್ತಿ ಡಿ.ಬಿ ಯವರು ಗಣರಾಜ್ಯೋತ್ಸವದ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರಮ ನಿರ್ವಹಿಸಿದರು.