ಸಾಂಸ್ಕೃತಿಕ

ರಾಧಾ ರಮಣ ಖ್ಯಾತಿಯ ಅನುಷಾ ಹೆಗಡೆ ದಾಂಪತ್ಯ ಜೀವನಕ್ಕೆ ವಿದಾಯ

Views: 26

ಕನ್ನಡ ಕರಾವಳಿ ಸುದ್ದಿ: ರಾಧಾ ರಮಣದಲ್ಲಿ ವಿಲನ್ ಆಗಿ ದೀಪಿಕಾ ಪಾತ್ರದಲ್ಲಿ ಮಿಂಚಿದ ಅನುಷಾ ಹೆಗಡೆ, ಇದೀಗ ಅವರು ತಮ್ಮ ದಾಂಪತ್ಯ ಜೀವನಕ್ಕೆ ವಿದಾಯ ಹೇಳಿದ್ದಾರೆ.

ಬಹಳಷ್ಟು ಜನಪ್ರಿಯತೆ ಗಳಿಸಿದ್ದ ಧಾರಾವಾಹಿ ರಾಧಾ ರಮಣ. ಧಾರಾವಾಹಿಯ ಪಾತ್ರಗಳು, ಕಲಾವಿದರು ಎಲ್ಲವೂ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಸ್ಕಂದ ಅಶೋಕ್‌, ಶ್ವೇತಾ ಪ್ರಸಾದ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಈ ಧಾರಾವಾಹಿ ಸುಖಾಂತ್ಯ ಕಂಡಿತ್ತು.ದಾಂಪತ್ಯ ಜೀವನಕ್ಕೆ ವಿದಾಯ ಹೇಳಿರುವ ಬಗ್ಗೆ ತಿಳಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.

ತಮ್ಮ ವಿಚ್ಛೇದನದ ಬಗ್ಗೆ ನಟಿ ಅನುಷಾ ಹೆಗಡೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ನಿಮಗೆ ಈಗಾಗಲೇ ತಿಳಿದಿರುವಂತೆ, 2023 ರಿಂದ ನನ್ನ ಮದುವೆ, ದಾಂಪತ್ಯ ಜೀವನದಲ್ಲಿ ಬದಲಾವಣೆಗಳು ನಡೆಯುತ್ತಿದ್ದವು. 2025 ರಲ್ಲಿ ನಾವು ಕಾನೂನುಬದ್ಧವಾಗಿ ಬೇರೆಯಾಗಿದ್ದೇವೆ. ನಿಮ್ಮ ಬೆಂಬಲಕ್ಕೆ ಧನ್ಯವಾದಗಳು. ಈ ಬಗ್ಗೆ ಹೆಚ್ಚಿನ ಚರ್ಚೆ ಅಥವಾ ಪ್ರಶ್ನೆಗಳನ್ನು ಮಾಡಬೇಡಿ ಎಂದು ವಿನಂತಿಸುತ್ತೇನೆ ಎಂದು ತಿಳಿಸಿದ್ದಾರೆ.

ನನ್ನ ಜೀವನದ ಈ ಅಧ್ಯಾಯವು ಪರಸ್ಪರ ಗೌರವ, ಸಾಮರಸ್ಯದೊಂದಿಗೆ ಮುಕ್ತಾಯಗೊಂಡಿದೆ.ನಾನು ಈಗ ನನ್ನ ವೃತ್ತಿ, ನನ್ನ ಕುಟುಂಬ ಮತ್ತು ವೈಯಕ್ತಿಕ ಬೆಳವಣಿಗೆಯ ಮೇಲೆ ಶಾಂತಿ ಮತ್ತು ಸ್ಪಷ್ಟತೆಯೊಂದಿಗೆ ಗಮನಹರಿಸಲು ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

Related Articles

Back to top button
error: Content is protected !!