ಸೃಜನಶೀಲತೆ

ಹಾಲಾಡಿಯಲ್ಲಿ ಸೀರೆ ಕುಚ್ಚು ಮತ್ತು ಸೀರೆ ಬಾಕ್ಸ್ ಪೊಲ್ಡಿಂಗ್ ತರಬೇತಿ ಸಮಾರೋಪ

Views: 0

ಕನ್ನಡ ಕರಾವಳಿ ಸುದ್ದಿ: ಟಿ.ಎಂ.ಜಿ ಸುನಿಧಿ ಫೌಂಡೇಶನ್ ಟ್ರಸ್ಟ್ ಮಣಿಪಾಲ ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಪ್ರಾಯೋಜಕತ್ವದಲ್ಲಿ ಗ್ರಾಮ ಪಂಚಾಯತ್ ಹಾಲಾಡಿ ಸಂಜೀವಿನಿ ಒಕ್ಕೂಟ ಹಾಲಾಡಿ ಇವರ ಆಯೋಜನೆಯಲ್ಲಿ 10 ದಿನಗಳ ಕಾಲ ಸೀರೆ ಕುಚ್ಚು ತರಬೇತಿ ಮತ್ತು ಸೀರೆ ಬಾಕ್ಸ್ ಪೊಲ್ಡಿಂಗ್ ಕೌಶಲ್ಯ ತರಬೇತಿ ಗ್ರಾಮ ಪಂಚಾಯತ್ ಸಭಾಂಗಣ ಹಾಲಾಡಿ ಯಲ್ಲಿ ಸಮಾರೋಪ ಗೊಂಡಿತು.

ಜ್ಯೋತಿ ಆಚಾರ್ಯ ,ಕುಸುಮ, ದೀಪಾ , ಸುಶ್ಮಾ ನಾಗರತ್ನ, ದ್ರಾಕ್ಷಾಯಿಣಿ, ಮಾಲಿನಿ, ನಸ್ರಿನ್, ವಿನೋದ, ಸುಮಾ ತಮ್ಮ ತಮ್ಮ ಅನಿಸಿಕೆ ಹಂಚಿಕೊಂಡರು.

ಮುಖ್ಯ ಅತಿಥಿಗಳಾಗಿ ತಾಲೂಕು ಪಂಚಾಯತ್ ಸಹಾಯಕ ಯೋಜನಾಧಿಕಾರಿ ದೀಪಾರವರು ತರಬೇತಿಯ ಯಶಸ್ಸಿನ ಬಗ್ಗೆ ಮಾತಾಡುತ್ತಾ ಮಹಿಳೆಯರು ನಿರಂತರವಾಗಿ ಇದರಿಂದ ಆದಾಯ ಗಳಿಸಿ ತಾನೇ ದುಡಿದು ತನ್ನ ಸ್ವಂತ ಜೀವನಕ್ಕೆ ಅಗತ್ಯತೆಯನ್ನು ಪೂರೈಸಿಕೊಳ್ಳಲು ಸಾಧ್ಯ ಎಂದು ಶುಭ ಹಾರೈಸಿದರು. ಹಾಲಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ವೇತಲತಾ ಶುಭಹಾರೈಸಿದರು .10 ದಿನಗಳ ತರಬೇತಿಯ ಸದುಪಯೋಗ ಪಡಿಸಿಕೊಳ್ಳಿ ಎಂದು ಬಿವಿಟಿ ಮಣಿಪಾಲದ ರಾಘವೇಂದ್ರ ಆಚಾರ್ಯ ಕೆದೂರು ಕಿವಿಮಾತು ಹೇಳಿದರು. ಜೆಸಿಐ ಹಾಲಾಡಿ ಇದರ ಪದಾಧಿಕಾರಿಗಳು ಆದ ಕೃಷ್ಣ ಭಟ್, ಸೀರೆ ಕುಚ್ಚು ತರಬೇತುದಾರೆ ವೀಣಾ, ಸೀರೆ ಬಾಕ್ಸ್ ಪೊಲ್ಡಿಂಗ್ ತರಬೇತುದಾರೆ ಸಬಿನಾ ಬಾನು, ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ಜಯಲಕ್ಷ್ಮಿ, ಸಂಜೀವಿನಿ ಎಂಬಿಕೆ ಜ್ಯೋತಿ, ಕೃಷಿ ಸಖಿ ಶಾರದ, ಗ್ರಂಥಾಲಯ ಪಾಲಕಿ ಶಾರದ ಶುಭಹಾರೈಸಿದರು. ಒಟ್ಟು 33 ಜನ ಫಲಾನುಭವಿಗಳು ತರಬೇತಿ ಪ್ರಯೋಜನ ಪಡಕೊಂಡರು.

ದೀಪಾ, ಕುಸುಮ, ವಿನೋದ, ಸುಜಾತಾ, ಲಲಿತಾ,ಆಶಾ, ಗೀತಾ, ಪ್ರಾರ್ಥಿಸಿ, ಶಿಬಿರಾರ್ಥಿ ಸುಶ್ಮಾ ಸ್ವಾಗತಿಸಿ, ಶಿಬಿರಾರ್ಥಿ ಸರಸ್ವತಿ ಶಂಕರನಾರಾಯಣ ನಿರೂಪಿಸಿದರು. ಸರಸ್ವತಿ ರಟ್ಟಾಡಿ ವಂದಿಸಿದರು.

Related Articles

Back to top button
error: Content is protected !!