33 ಸೆಕೆಂಡ್‌ಗಳಲ್ಲಿ ಪ್ರಪಂಚದ ಅತ್ಯಂತ ಖಾರದ 10ಮೆಣಸಿನಕಾಯಿಗಳನ್ನು ತಿಂದು ಗಿನ್ನಿಸ್ ದಾಖಲೆ ನಿರ್ಮಿಸಿದ ವ್ಯಕ್ತಿ!

Views: 27
ಆದರೆ ಇಲ್ಲೊಬ್ಬ ವ್ಯಕ್ತಿ 33 ಸೆಕೆಂಡ್‌ಗಳಲ್ಲಿ ವಿಶ್ವದ 10 ಖಾರದ ಮೆಣಸಿನಕಾಯಿಗಳನ್ನು ತಿಂದು ಗಿನ್ನಿಸ್ ದಾಖಲೆ ನಿರ್ಮಿಸಿದ್ದಾರೆ.ಖಾರವಾದ ಮೆಣಸಿನಕಾಯಿಯನ್ನು ಇಲ್ಲೊಬ್ಬ ವ್ಯಕ್ತಿ ಬಾಯಿಚಪ್ಪರಿಸಿ ಮೇಲಿಂದ ಮೇಲೆ ತಿಂದಿದ್ದಾರೆ.
ಮೆಣಸಿನಕಾಯಿಯಲ್ಲಿ ಹಲವು ವಿಧಗಳಿವೆ. ಭೂತ್ ಜೊಲೊಕಿಯಾ ಮೆಣಸಿನಕಾಯ ಪ್ರಪಂಚದ ಅತ್ಯಂತ ಖಾರದ ಮೆಣಸಿನಕಾಯಿಗಳಲ್ಲಿ ಒಂದಾಗಿದೆ. ಅಮೆರಿಕದ ವ್ಯಕ್ತಿಯೊಬ್ಬರು ಇಂತಹ ಹೆಚ್ಚು ಖಾರವಾದ ಭೂತ್ ಜೊಲೊಕಿಯಾ ಮೆಣಸಿನಕಾಯಿಯನ್ನು ಅತ್ಯಂತ ಕಡಿಮೆ ಸಮಯದಲ್ಲಿ ಸೇವಿಸುವ ಮೂಲಕ ವಿಶ್ವದಾಖಲೆ ಮಾಡಿದ್ದಾರೆ.
ಅಂದರೆ 30.01 ಸೆಕೆಂಡ್‌ಗಳಲ್ಲಿ ಸುಮಾರು 10 ಜೊಲೊಕಿಯಾ ಮೆಣಸಿನಕಾಯಿಯನ್ನು ತಿಂದು ಗ್ರೆಗರಿ ಪೋಸ್ಟರ್ ಅವರು ಗಿನ್ನೆಸ್ ದಾಖಲೆ ಬರೆದಿದ್ದಾರೆ. ನಂತರ ಗ್ರೆಗರಿ ಅವರಿಗೆ ಗಿನ್ನೆಸ್ ವಿಶ್ವ ದಾಖಲೆಯ ಪ್ರಮಾಣಪತ್ರವನ್ನು ನೀಡಲಾಯಿತು.
ಗ್ರೆಗರಿ ಫೋಸ್ಟರ್ ಅವರು ಈ ರೀತಿ ಮೆಣಸಿನಕಾಯಿ ತಿನ್ನುವ ದಾಖಲೆ ಮಾಡಿರುವುದು ಇದೇ ಮೊದಲಲ್ಲ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಪ್ರಕಟಿಸಿದ ವರದಿಯ ಪ್ರಕಾರ, ಅವರು ಈಗಾಗಲೇ ಡಿಸೆಂಬರ್ 2021 ರಲ್ಲಿ 8.72 ಸೆಕೆಂಡುಗಳಲ್ಲಿ 3 ಕೆರೊಲಿನಾ ರೀಪರ್ ಮೆಣಸುಗಳನ್ನು ತಿನ್ನುವ ಮೂಲಕ ದಾಖಲೆಯನ್ನು ಮಾಡಿದ್ದರು. ಅದಕ್ಕೂ ಮೊದಲು 2017 ರಲ್ಲಿ ಅವರು ಒಂದು ನಿಮಿಷದಲ್ಲಿ 120 ಗ್ರಾಂ ಕೆರೊಲಿನಾ ರೀಪರ್ ಮೆಣಸಿನಕಾಯಿಯನ್ನು ತಿಂದು ಗಿನ್ನೆಸ್ ವಿಶ್ವ ದಾಖಲೆಯನ್ನು ಸ್ಥಾಪಿಸಿದರು.
ಚಿಕ್ಕ ವಯಸ್ಸಿನಿಂದಲೂ ಗ್ರೆಗರಿ ಹೆಚ್ಚು ಖಾರದ ಆಹಾರವನ್ನು ತಿನ್ನಲು ಪ್ರೀತಿಸುತ್ತಿದ್ದರು. ಮನೆಯಲ್ಲಿ ಮೆಣಸಿನ ಗಿಡಗಳನ್ನು ಬೆಳಸುತ್ತಿದ್ದರು. ದಶಕಗಳ ಕಾಲ ಖಾರದ ಆಹಾರವನ್ನು ಸೇವಿಸಿ ಅದನ್ನು ಸಹಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದರು. ಈಗ ಅವರು ವಿಶ್ವದ ಅತ್ಯಂತ ಖಾರದ ಮೆಣಸಿನಕಾಯಿಯನ್ನು ತಿನ್ನುವ ಮೂಲಕ ದಾಖಲೆ ಬರೆದಿದ್ದಾರೆ.