ಸ್ಕಿನ್ ಕೇರ್ ಪ್ರಾಡಕ್ಟ್ ತರಬೇತಿಯ ಸಮಾರೋಪ ಸಮಾರಂಭ

Views: 135
ಕನ್ನಡ ಕರಾವಳಿ ಸುದ್ದಿ: ವಿಜಯ ಗ್ರಾಮೀಣ ಪ್ರತಿಷ್ಠಾನ ಮತ್ತು ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಗ್ರಾಮ ಪಂಚಾಯತ್ ವಾರಂಬಳ್ಳಿ ಓಂಕಾರ ಗ್ರಾಮ ಮಟ್ಟದ ಸಂಜೀವಿನಿ ಒಕ್ಕೂಟ ವಾರಂಬಳ್ಳಿ ಇವರ ಆಯೋಜನೆಯಲ್ಲಿ ಗ್ರಾಮ ಪಂಚಾಯತ್ ಸಭಾಂಗಣ ವಾರಂಬಳ್ಳಿಯಲ್ಲಿ 6 ದಿನಗಳ ಸ್ಕಿನ್ ಕೇರ್ ಪ್ರಾಡಕ್ಟ್ ತರಬೇತಿಯ ಸಮಾರೋಪ ನಡೆಯಿತು.
ಕಾರ್ಯಕ್ರಮದಲ್ಲಿ ಹಿರಿಯರು ವಿಜಯ ಗ್ರಾಮೀಣ ಪ್ರತಿಷ್ಠಾನದ ಆಡಳಿತ ಮಂಡಳಿ ಸದಸ್ಯರು ಸುರೇಂದ್ರ ಹೆಗ್ಡೆ, ವಿಜಯ ಗ್ರಾಮೀಣ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಯೋತಿ ರಾಜ್, ಪಂಚಾಯತ್ ಉಪಾಧ್ಯಕ್ಷರಾದ ಉಮಾ ಬಾಯಿ , ಸಂಜೀವಿನಿ ಒಕ್ಕೂಟದ ಅಧ್ಯಕ್ಷರು ಹೇಮಾ ತರಬೇತುದಾರರಾದ ಪೃಥ್ವಿನಿ, ಮಹಾಲಕ್ಷ್ಮಿ,ಬಿವಿಟಿಯ ರಾಘವೇಂದ್ರ ಆಚಾರ್ಯ, ಉಪಸ್ಥಿತರಿದ್ದು ಶುಭಹಾರೈಸಿದರು.
ಶಿಬಿರಾರ್ಥಿಗಳ ಪರವಾಗಿ ಮುಬಿನಾ ಬಾನು, ಸುಶ್ಮಿತಾ, ಹೇಮಾ , ವಿಜಯಲಕ್ಷ್ಮಿ, ಅನಿಸಿಕೆ ಹಂಚಿಕೊಂಡರು. ದಿವ್ಯಾ ಲಕ್ಷ್ಮೀ ಪ್ರಾರ್ಥಿಸಿದರು, ವಿಮಲ ಸ್ವಾಗತಿಸಿದರು, ಫರ್ಜಾನ ವಂದಿಸಿದರು, ವಿಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು. ಒಟ್ಟು 36 ಜನ ಸಂಜೀವಿನಿ ಸ್ವ ಸಹಾಯ ಸಂಘಗಳ ಸದಸ್ಯರು ಉಪಸ್ಥಿತರಿದ್ದರು.