ಮಂದಾರ್ತಿಯಲ್ಲಿ ಸೀರೆ ಕುಚ್ಚು ತರಬೇತಿ ಉದ್ಘಾಟನೆ

Views: 28
ಕನ್ನಡ ಕರಾವಳಿ ಸುದ್ದಿ: ವಿಜಯ ಗ್ರಾಮೀಣ ಪ್ರತಿಷ್ಠಾನ ಮತ್ತು ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಗ್ರಾಮ ಪಂಚಾಯತ್ ಮಂದಾರ್ತಿ ಸಂಜೀವಿನಿ ಒಕ್ಕೂಟ ಇವರ ಆಯೋಜನೆಯಲ್ಲಿ ಗ್ರಾಮ ಪಂಚಾಯತ್ ಸಭಾಂಗಣ ಮಂದಾರ್ತಿಯಲ್ಲಿ 6 ದಿನಗಳ ಸೀರೆ ಕುಚ್ಚು ತರಬೇತಿಯ ಉದ್ಘಾಟನೆ ನೆರವೇರಿತು.
ಕಾರ್ಯಕ್ರಮದಲ್ಲಿ ಹಿರಿಯರು ವಿಜಯ ಗ್ರಾಮೀಣ ಪ್ರತಿಷ್ಠಾನದ ಸಕ್ರಿಯ ಸದಸ್ಯರು ಮಂದಾರ್ತಿ ಶಂಭು ಶಂಕರ್ ರಾವ್, ವಿಜಯ ಗ್ರಾಮೀಣ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಯೋತಿ ರಾಜ್, ಪಂಚಾಯತ್ ಅಧ್ಯಕ್ಷರು ರಾಮಕೃಷ್ಣ , ಬ್ಯಾಂಕ್ ಆಫ್ ಬರೋಡಾ ಮಂದಾರ್ತಿ ಶಾಖೆಯ ವ್ಯವಸ್ಥಾಪಕರು ಸನತ್, ಬಿವಿಟಿಯ ರಾಘವೇಂದ್ರ ಆಚಾರ್ಯ ಕೆದೂರು ಸಂಜೀವಿನಿ ಒಕ್ಕೂಟದ ಅಧ್ಯಕ್ಷರು ದಿವ್ಯ ತರಬೇತುದಾರರಾದ ನಾಗರತ್ನ, ಉಪಸ್ಥಿತರಿದ್ದು ಶುಭಹಾರೈಸಿದರು.
ಒಟ್ಟು 30 ಜನ ಸಂಜೀವಿನಿ ಸ್ವ ಸಹಾಯ ಸಂಘಗಳ ಸದಸ್ಯರು ಉಪಸ್ಥಿತರಿದ್ದರು.ವಿಷಯ ಪ್ರಾರ್ಥಿಸಿದರು.ಉಷಾ ಸ್ವಾಗತಿಸಿದರು.ಗೀತಾ ವಂದಿಸಿದರು.ಲತಾ ನಿರೂಪಿಸಿದರು. ವಿಜಯ ಗ್ರಾಮೀಣ ಪ್ರತಿಷ್ಠಾನದ ಸಿಬ್ಬಂದಿ ಪಂಡರಿನಾಥ್ ಸಹಕರಿಸಿದರು.