ಶಿಕ್ಷಣ

ನಕಲಿ ಪಿಎಚ್‌ಡಿ ಸಲ್ಲಿಸಿದ 452 ಅತಿಥಿ ಉಪನ್ಯಾಸಕರಿಗೆ ಕಾಲೇಜು ಶಿಕ್ಷಣ ಇಲಾಖೆ ನೋಟಿಸ್ ಜಾರಿ

Views: 27

ಕನ್ನಡ ಕರಾವಳಿ ಸುದ್ದಿ: ಕಾಲೇಜು ಶಿಕ್ಷಣ ಇಲಾಖೆಯ ಇದೀಗ 452 ಅತಿಥಿ ಉಪನ್ಯಾಸಕರಿಗೆ ನೋಟಿಸ್ ಜಾರಿಗೊಳಿಸಿದೆ. ಇತ್ತೀಚೆಗಷ್ಟೆ ಸುಮಾರು 240 ನಕಲಿ ಪಿಎಚ್‌ಡಿ ಸಲ್ಲಿಸಿದ್ದ ಅತಿಥಿ ಉಪನ್ಯಾಸಕರನ್ನು ಪತ್ತೆ ಹಚ್ಚಿದ್ದ ಕಾಲೇಜು ಶಿಕ್ಷಣ ಇಲಾಖೆ ಅವರ ಮೇಲೆ ಕ್ರಿಮಿನಲ್‌ ಮೊಕದ್ದಮೆ ಸಲ್ಲಿಸಲು ಸೂಚಿಸಿತ್ತು.

ಕಾಲೇಜು ಶಿಕ್ಷಣ ಇಲಾಖೆಯು ಪ್ರತಿವರ್ಷ ಸುಮಾರು 11,000 ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳುತ್ತಿದೆ. ಅದರಂತೆ 2025-26ನೇ ಸಾಲಿನಲ್ಲಿ ಅತಿಥಿ ಉಪನ್ಯಾಸಕ ಹುದ್ದೆಗೆ ಅರ್ಜಿ ಸಲ್ಲಿಸುವಾಗ ಪಿಎಚ್‌ಡಿ ಅರ್ಹತೆಯನ್ನು ನಮೂದಿಸಿದ್ದ 452 ಅತಿಥಿ ಉಪನ್ಯಾಸಕರು ಈ ವರ್ಷ (2026-27) ಅತಿಥಿ ಉಪನ್ಯಾಸಕ ಹುದ್ದೆಗೆ ಅರ್ಜಿ ಸಲ್ಲಿಸುವಾಗ ತಮ್ಮ ಪಿಎಚ್‌ಡಿ ಅರ್ಹತೆಯನ್ನು ನಮೂದಿಸಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕಾಲೇಜು ಶಿಕ್ಷಣ ಇಲಾಖೆಯು ಇಂತಹ ಅತಿಥಿ ಉಪನ್ಯಾಸಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಅತಿಥಿ ಉಪನ್ಯಾಸಕರಿಗೆ ನೋಟಿಸ್‌ ನೀಡಿ ಅವರಿಂದ ಲಿಖಿತ ಹೇಳಿಕೆ ಅಥವಾ ವಿವರಣೆಯನ್ನು ವಾರದೊಳಗೆ ಪಡೆದು ಆಯುಕ್ತರಿಗೆ ಸಲ್ಲಿಸಬೇಕು. ದಾಖಲೆ ಸಲ್ಲಿಸದಿದ್ದಲ್ಲಿ ಅಂತಹ ಅತಿಥಿ ಉಪನ್ಯಾಸಕರ ವಿರುದ್ಧ ನಿಯಮಾನುಸಾರ ಅಗತ್ಯ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ಹೇಳಿದ್ದಾರೆ.

ಕಾಲೇಜು ಶಿಕ್ಷಣ ಇಲಾಖೆಯ ಒಂದು ವೇಳೆ ಸಂಬಂಧ ಪಟ್ಟ ಅತಿಥಿ ಉಪನ್ಯಾಸಕರು ನಿಗದಿತ ಅವಧಿಯೊಳಗೆ ವಿವರಣೆ, ಅಗತ್ಯ ಈ ಹಿಂದೆ ಪಿ.ಎಚ್ ಡಿ ಅರ್ಹತೆಯನ್ನು ಕ್ರೈಮ್ ಮಾಡಿ ಈ ಬಾರಿ ಅರ್ಜಿ ಸಲ್ಲಿಸುವಾಗ ಪಿ.ಎಚ್ ಡಿ ಅರ್ಹತೆಯನ್ನು ನಮೂದಿಸದಿರುವವರಿಗೆ ಲಿಖಿತ ಸ್ಪಷ್ಟನೆ ಕೋರಿ ನೋಟಿಸ್ ಜಾರಿಗೊಳಿಸುವುಂತೆ ಕಾಲೇಜು ಪ್ರಾಂಶುಪಾಲರಿಗೆ ಸೂಚಿಸಿದೆ.

Related Articles

Back to top button
error: Content is protected !!