ರಾಮನಗರ ಬೆಂಗಳೂರು ದಕ್ಷಿಣ ಎಂದು ನಾಮಕರಣ; ಎಚ್ಡಿಕೆಗೆ ಡಿಕೆಶಿ ಸವಾಲು!

Views: 53
ಬೆಂಗಳೂರು:ಬೆಂಗಳೂರು ದಕ್ಷಿಣ ಜಿಲ್ಲೆಯ ಹೆಸರನ್ನು ಮತ್ತೆ ಬದಲಾಯಿಸುವುದು ಎಚ್.ಡಿ ಕುಮಾರಸ್ವಾಮಿ ಅವರ ಹಣೆಯಲ್ಲೂ ಬರೆದಿಲ್ಲ ಎಂದು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಬೆಂಗಳೂರಿನವರು, ರಾಮನಗರ,ಮಾಗಡಿ, ಕನಕಪುರ, ಚನ್ನಪಟ್ಟಣ ಎಲ್ಲರೂ ಬೆಂಗಳೂರಿಗೆ ಸೇರಿದವರು. ನಮ್ಮ ಪೂರ್ವಜರು ಇಟ್ಟಂತಹ ಹೆಸರು ಅದನ್ನು ಬದಲಿಸಲು ಸಾಧ್ಯವಿಲ್ಲ. ಈ ಹಿಂದೆ ಸಹ ನಾನು ಬೆಂಗಳೂರು ಹೆಸರನ್ನು ಬದಲಾಯಿಸದಂತೆ ಸಲಹೆ ಮಾಡಿದ್ದೆ. ಬೆಂಗಳೂರಿಗೆ ವಿಶ್ವಮಾನ್ಯತೆ ಇದೆ. ನಾವೆಲ್ಲ ಬೆಂಗಳೂರಿಗೆ ಸೇರಿದವರು. ಹಾಗಾಗಿಯೇ ರಾಮನಗರಕ್ಕೆ ಬಾಧಕವಾಗದಂತೆ ರಾಮನಗರವನ್ನೇ ಜಿಲ್ಲಾ ಕೇಂದ್ರವನ್ನಾಗಿಸಿ ಬೆಂಗಳೂರು ದಕ್ಷಿಣ ಜಿಲ್ಲೆಯ ಹೆಸರನ್ನು ನಾಮಕರಣ ಮಾಡಲಾಗಿದೆ ಎಂದರು.ಬೆಂಗಳೂರು ದಕ್ಷಿಣ ಜಿಲ್ಲೆಯ ಹೆಸರನ್ನು ಮತ್ತೆ ರಾಮನಗರ ಮಾಡಲು ಅವರಿಂದ ಆಗಲ್ಲ,2028ರ ಚುನಾವಣೆಯಲ್ಲೂ ಕಾಂಗ್ರೆಸ್ಸೇ ಅಧಿಕಾರಕ್ಕೆ ಬರುವುದು ನಿಶ್ಚಿತ. ಹೆಸರು ಬದಲಿಸಲು ಅವರ ಹಣೆಯಲ್ಲೂ ಬರೆದಿಲ್ಲ ಎಂದು ಅವರು ಹರಿಹಾಯ್ದರು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾಜಿ ಪ್ರಧಾನಿ ದೇವೇಗೌಡ ಇವರೆಲ್ಲ ಹಾಸನದಿಂದ ಬಂದವರು. ಅವರು ಹಾಸನದಿಂದ ಬಂದಿದ್ದೇ ನಮ್ಮನ್ನು ವಿಭಜಿಸಲು. ಅವರು ರಾಮನಗರ ಎಂದು ಹೆಸರು ಕೊಟ್ಟಿರಬಹುದು. ರಾಜಕೀಯ ಮಾಡಲು ಅವರು ಇಲ್ಲಿಗೆ ಬಂದು ರಾಜಕೀಯವಾಗಿ ಅವರುಗಳು ಯಶಸ್ವಿಯಾಗಿರಬಹುದು. ಹಾಗೆಂದು ನಾವು ಬೆಂಗಳೂರಿನವರು ಎಂದು ಹೇಳಲು ಅವರಿಂದಾಗದು ಎಂದರು.ನಾನು ಬೆಂಗಳೂರಿನವನು ಎಂದು ಹೇಳುವುದು ನನ್ನ ಹಕ್ಕು, ಅಭಿವೃದ್ಧಿಯ ದೃಷ್ಟಿಯಿಂದ, ಜನರ ಭವಿಷ್ಯದ ದೃಷ್ಟಿಯಿಂದ ಹೊಸ ದಿಕ್ಕು ನೀಡಲು ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಬದಲಾಯಿಸಿದ್ದೇವೆ. ಬೆಂಗಳೂರನ್ನು ಕೆಂಪೇಗೌಡರು ಕಟ್ಟಿದರು ಎಂದರು.ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಯಾವಾಗಲೂ ನನ್ನನ್ನು ಸರ್ವನಾಶ ಮಾಡಲಿಕ್ಕೆ ಪ್ರತಿಯೊಂದು ದಿನ ಅವರ ರಾಜಕಾರಣ, ನಾವು ಒಳೆಯ್ಳದು ಮಾಡಿದರೂ ಅವರು ನನ್ನನ್ನು ಸರ್ವನಾಶ ಮಾಡುವುದನ್ನೇ ಬಯಸಿಕೊಂಡು ಬಂದಿದ್ದಾರೆ ಎಂದರು.ಅವರ ನಡೆ, ಹೆಜ್ಜೆ,ಭಾವನೆ, ಚಿಂತನೆ,ಆಚಾರ-ವಿಚಾರ ಎಲ್ಲದರ ಬಗ್ಗೆಯೂ ನನಗೆ ಅರಿವಿದೆ. ರಾಮನಗರದಲ್ಲಿ ಅಕ್ರಮ ಮಾಡಲು ಇವರು ಬಂದಿದ್ದಾರೆ. ಎಲ್ಲರೂ ನಮ್ಮವರೇ. ಕೆಂಗಲ್ ಹನುಮಂತಯ್ಯ ಅವರು, ರಾಮಕೃಷ್ಣ ಹೆಗಡೆಯವರು, ದೇವೇಗೌಡರು, ಕುಮಾರಸ್ವಾಮಿ ಅವರು ಎಲ್ಲರೂ ಬೆಂಗಳೂರಿನಿಂದಲೇ ಮುಖ್ಯಮಂತ್ರಿ ಪ್ರಧಾನಿಯಾದವರು. ಬೆಂಗಳೂರಿಗೆ ದೊಡ್ಡ ಹೆಸರಿದೆ. ಹಾಗಾಗಿ. ರಾಮನಗರವನ್ನು ಜಿಲ್ಲಾ ಕೇಂದ್ರವನ್ನಾಗಿಸಿ ನಮ್ಮ ಪೂರ್ವಜರು ಇಟ್ಟಿದ್ದ ಬೆಂಗಳೂರು ದಕ್ಷಿಣ ಜಿಲ್ಲೆಯ ಹೆಸರನ್ನು ಇಟ್ಟಿದ್ದೇವೆ ಎಂದರು.ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಬದಲಿಸಿದ್ದೇವೆ ಅಷ್ಟೇ ಎಂದರು.






