ಡಿಕೆಶಿ ವಿದೇಶ ಪ್ರವಾಸ ರದ್ದು ತೀವ್ರ ಕುತೂಹಲ! ಈ ಬಾರಿ ದೆಹಲಿ ಬೇಟಿ ಸ್ಪಷ್ಟನೆ ಪಡೆದೇ ಮರಳಲು ತೀರ್ಮಾನ
Views: 20
ಕನ್ನಡ ಕರಾವಳಿ ಸುದ್ದಿ: ರಾಜ್ಯ ಕಾಂಗ್ರೆಸ್‌ನಲ್ಲಿ ಬೂದಿಮುಚ್ಚಿದ ಕೆಂಡವಾಗಿರುವ ನಾಯಕತ್ವ ಬದಲಾವಣೆಯ ಗೊಂದಲ ನಡುವೆಯೇ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವಿದೇಶ ಪ್ರವಾಸ ರದ್ದಾಗಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಡಿ.ಕೆ.ಶಿವಕುಮಾರ್ ಅವರು ಭಾನುವಾರ ದಾವೋಸ್‌ಗೆ ತೆರಳಬೇಕಿತ್ತು. ದಾವೋಸ್‌ನಲ್ಲಿ ನಡೆಯುತ್ತಿರುವ ಎಕನಾ ಮಿಕ್ ಫೋರಂನ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಧಿಕೃತ ಪ್ರವಾಸ ನಿಗದಿಯಾಗಿತ್ತು. ಆದರೆ ಇದೀಗ ನರೇಗಾ ಸಭೆ ಹಾಗೂ ಜಂಟಿ ಅಧಿವೇಶನದ ಕಾರಣ ನೀಡಿ ವಿದೇಶ ಪ್ರವಾಸ ರದ್ದುಪಡಿಸಿರುವುದು ಕಾಂಗ್ರೆಸ್‌ನಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಸ್ಪಷ್ಟನೆ ಪಡೆದೇ ಮರಳಲು ತೀರ್ಮಾನ: ಡಿಕೆಶಿ ಈ ಬಾರಿಯ ದೆಹಲಿ ಭೇಟಿಯಲ್ಲಿ ಸ್ಪಷ್ಟನೆ ಪಡೆಯಲೇಬೇಕು ಎಂದು ತೀರ್ಮಾನಿಸಿದ್ದಾರೆ. ನಾಯಕತ್ವ ಬದಲಾವಣೆ ಇದೆಯೇ? ಇಲ್ಲವೇ? ಇದ್ದರೂ ಯಾವಾಗ ಬದಲಾವಣೆಯಾಗಲಿದೆ? ಪಕ್ಷದ ಕಷ್ಟದ ಸಮಯದಲ್ಲಿ ತಾವು ಎಲ್ಲ ರೀತಿಯ ನೆರವು ನೀಡಿದ್ದು, ತಾವು ರಾಜ್ಯಾಧ್ಯಕ್ಷರಾಗಿದ್ದ ಸಮಯದಲ್ಲಿಯೇ ಐತಿಹಾಸಿಕ ಬಹುಮತದೊಂದಿಗೆ ಪಕ್ಷವನ್ನು ಅಧಿಕಾರಕ್ಕೆ ಬಂದಿದೆ. ಹೀಗಿರುವಾಗ, ನನ್ನ ಬೇಡಿಕೆಯನ್ನು ಹೈಕಮಾಂಡ್ ಈಡೇರಿಸುವುದೋ ಇಲ್ಲವೇ ಎಂದು ಸ್ಪಷ್ಟನೆ ಕೊಡಿಸಿ ಎಂದು ಖರ್ಗೆ ಅವರಿಗೆ ಆಗ್ರಹಪೂರ್ವಕ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.






