ಯುವಜನ

ಮಹಿಳೆಯರು ಸ್ನಾನ ಮಾಡುವಾಗ ವಿಡಿಯೋ ಮಾಡುತ್ತಿದ್ದ ಯುವಕ ಸೆರೆ

Views: 188

ಕನ್ನಡ ಕರಾವಳಿ ಸುದ್ದಿ:ಮಹಿಳೆಯರು ಸ್ನಾನ ಮಾಡುವಾಗ ಕದ್ದುಮುಚ್ಚಿ ವಿಡಿಯೋ ಮಾಡುತ್ತಿದ್ದ ವಿಕೃತ ಕಾಮುಕನನ್ನು ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೇರಳ ಮೂಲದ ಹಾಜ ಮೊಯಿದ್ದೀನ್‌ (24) ಬಂಧಿತ ಆರೋಪಿ. ಈತ ವೃತ್ತಿಯಲ್ಲಿ ಎಲೆಕ್ಟ್ರೀಷಿಯನ್‌ ಆಗಿದ್ದು, ನಗರದ ಚನ್ನಸಂದ್ರದಲ್ಲಿ ವಾಸವಾಗಿದ್ದನು.ಕೆಟ್ಟ ಚಾಳಿ ಹೊಂದಿದ್ದ ಈತ ಕಳೆದ ನಾಲ್ಕು ದಿನಗಳ ಹಿಂದೆ ಮನೆಯೊಂದರ ಬಾತ್‌ರೂಂಗೆ ತಾಯಿ -ಮಗಳು ಸ್ನಾನಕ್ಕೆ ಹೋಗಿದ್ದನ್ನು ಗಮನಿಸಿ, ನಂತರ ಕಿಟಕಿ ಮೂಲಕ ಕದ್ದುಮುಚ್ಚಿ ಮೊಬೈಲ್‌ನಲ್ಲಿ ವಿಡಿಯೋ ಮಾಡುತ್ತಿದ್ದನು.ಆ ವೇಳೆ ಮಗಳು ಮೊಬೈಲ್‌ನಲ್ಲಿ ವಿಡಿಯೋ ಮಾಡುತ್ತಿದ್ದುದ್ದನ್ನು ಗಮನಿಸಿದ್ದಾಳೆ. ಬಳಿಕ ಹೊರ ಬಂದು ತಂದೆಗೆ ವಿಷಯ ತಿಳಿಸಿದ್ದಾಳೆ.

ಬಾಲಕಿಯ ತಂದೆ ಹೊರಗೆ ಬಂದು ನೋಡುವಷ್ಟರಲ್ಲಿ ಆರೋಪಿ ಪರಾರಿಯಾಗಿದ್ದನು. ಘಟನೆಯಿಂದ ಆತಂಕಗೊಂಡ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ.ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿ ಆತನ ಮೊಬೈಲ್‌ನನ್ನು ವಶಕ್ಕೆ ಪಡೆದು ಸೆರೆ ಹಿಡಿದಿದ್ದ ವಿಡಿಯೋವನ್ನು ಡಿಲೀಟ್‌ ಮಾಡಿದ್ದಾರೆ.

Related Articles

Back to top button