ಸಾಮಾಜಿಕ

ಮದುವೆಯಾಗಿ ಐದೇ ದಿನಕ್ಕೆ ಗಂಡನ ಮನೆಯಿಂದ 3.15 ಲಕ್ಷ ರೂ.ನಗದು ಮತ್ತು ಆಭರಣಗಳೊಂದಿಗೆ ಪರಾರಿಯಾದ ಹೆಂಡತಿ 

Views: 102

ಕನ್ನಡ ಕರಾವಳಿ ಸುದ್ದಿ: ಉತ್ತರ ಪ್ರದೇಶದ ಗೊಂಡಾದ ಬಸೋಲಿ ಗ್ರಾಮದಲ್ಲಿ ನವವಿವಾಹಿತ ಮಹಿಳೆಯೊಬ್ಬಳು ಮದುವೆಯಾಗಿ ಐದೇ ದಿನಗಳಲ್ಲಿ ತನ್ನ ಗಂಡನ ಮನೆಯಿಂದ 3.15 ಲಕ್ಷ ರೂ. ನಗದು ಮತ್ತು ಆಭರಣಗಳೊಂದಿಗೆ ಪರಾರಿಯಾದ ಘಟನೆ ನಡೆದಿದೆ.

ಬಸೋಲಿ ಗ್ರಾಮದಲ್ಲಿ ನಡೆದ ಈ ಘಟನೆಯಲ್ಲಿ, ದರೋಡೆ ನಡೆದ ರಾತ್ರಿ ಮಹಿಳೆ ತನ್ನ ಅತ್ತೆ ಮಾವನಿಗೆ ಚಹಾ ನೀಡಿದ್ದಾಳೆ. ಮರುದಿನ ಬೆಳಿಗ್ಗೆ ಮನೆಯಿಂದ 3.15 ಲಕ್ಷ ರೂ. ನಗದು ಮತ್ತು ಚಿನ್ನ ಮತ್ತು ಬೆಳ್ಳಿ ಆಭರಣಗಳು ಕಾಣೆಯಾಗಿರುವುದು ಬೆಳಕಿಗೆ ಬಂದಿದೆ. ಅದೂ ಅಲ್ಲದೇ ಯಾವುದೇ ಕಾರಣ ಇಲ್ಲದೆ ಮನೆಯಿಂದ ಎಸ್ಕೇಪ್‌ ಆಗಿದ್ದ ವಧುವಿನ ಮೇಲೆ ಮನೆಯವರಿಗೆ ಅನುಮಾನ ಮೂಡಿದೆ. ಹೀಗಾಗಿ ವರನ ಕುಟುಂಬವು ಪೊಲೀಸರಿಗೆ ಲಿಖಿತ ದೂರು ನೀಡಿದ್ದು, ಮದುವೆಯ ಸೋಗಿನಲ್ಲಿ ಮಹಿಳೆ ಕಳ್ಳತನ ಮಾಡಿದ್ದಾಳೆ ಎಂದು ತಿಳಿಸಿದ್ದಾರೆ.

ಅಧಿಕಾರಿಗಳು ಈ ಘಟನೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಓಡಿ ಹೋದ ವಧು ಮತ್ತು ಅವಳಿಗೆ ಸಹಾಯ ಮಾಡಿದ್ದ ಸಹಚರರನ್ನು ಪತ್ತೆಹಚ್ಚಲು ತನಿಖೆ ನಡೆಸುತ್ತಿದ್ದಾರೆ.

 

Related Articles

Back to top button