ಯುವಜನ

ಬಿಎಂಟಿಸಿ ಬಸ್ ಪುಟ್ ಪಾತ್ ಮೇಲೆ ನುಗ್ಗಿ ಹೊಟೇಲ್ ಗೆ ಅಪ್ಪಳಿಸಿ ಯುವತಿ ಸಾವು 

Views: 115

ಕನ್ನಡ ಕರಾವಳಿ ಸುದ್ದಿ: ವೇಗವಾಗಿ ಬಂದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ನಿಯಂತ್ರಣ ತಪ್ಪಿ ಪುಟ್ ಪಾತ್ ಮೇಲೆ ನುಗ್ಗಿ ಹೊಟೇಲ್ ಗೆ ಅಪ್ಪಳಿಸಿ ಯುವತಿಯೊಬ್ಬರು ಸಾವನ್ನಪ್ಪಿ ಮೂವರು ಗಾಯಗೊಂಡಿರುವ ದುರ್ಘಟನೆ ಇಂದು ಬೆಳಿಗ್ಗೆ ಪೀಣ್ಯದ 2ನೇ ಹಂತದಲ್ಲಿ ನಡೆದಿದೆ.

ಮಂಡ್ಯ ಮೂಲದ ಸುಂಕದಕಟ್ಟೆಯಲ್ಲಿ ಬಾಡಿಗೆಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದ ಸುಮಾ (20) ಮೃತಪಟ್ಟವರು,

ಕೆಲಸಕ್ಕೆ ಹೋಗಲು ಪೀಣ್ಯ 2ನೇ ಹಂತದ ಬಳಿ ಬೆಳಿಗ್ಗೆ 8ರ ವೇಳೆ ಪುಟ್ ಪಾತ್ ಮೇಲೆ ಸುಮಾ ನಿಂತಿದ್ದರು.

ಈ ವೇಳೆ ಮೆಜೆಸ್ಟಿಕ್‌ನಿಂದ ಪೀಣ್ಯ 2ನೇ ಹಂತದ ಕಡೆಗೆ ಹೋಗುತ್ತಿದ್ದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಚಾಲಕನ ನಿಯಂತ್ರಣ ತಪ್ಪಿ ಪುಟ್ ಪಾತ್ ಮೇಲೆ ನುಗ್ಗಿ ಹೊಟೇಲ್ ಗೆ ಅಪ್ಪಳಿಸಿದೆ.

ಬಸ್ ಗೆ ಸಿಲುಕಿದ ಸುಮಾ ಕಾಲು ಮುರಿದು ಗಂಭೀರವಾಗಿ ಗಾಯಗೊಂಡಿದ್ದು,ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ.

ಈ ವೇಳೆ ಪುಟ್ ಪಾತ್ ನಲ್ಲಿ ನಿಂತಿದ್ದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಹೋಟೆಲ್‌ಗೆ ಬಸ್ ಅಪ್ಪಳಿಸಿದ್ದರಿಂದ ಕೂಡಲೇ ಸಿಲಿಂಡರ್‌ನಿಂದ ಬೆಂಕಿ ಬಿದ್ದಿದೆ. ಕೂಡಲೇ ಸ್ಥಳೀಯರು ನಂದಿಸಿದ್ದಾರೆ.

ಪ್ರಕರಣ ದಾಖಲಿಸಿರುವ ಪೀಣ್ಯ ಸಂಚಾರ ಪೊಲೀಸರು ಬಸ್ ಚಾಲಕನನ್ನು ಬಂಧಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

Related Articles

Back to top button