ಯುವಜನ

ಚಲಿಸುವ ಬೈಕ್ ಮೇಲೆಯೇ ರೊಮ್ಯಾನ್ಸ್: ಪ್ರೇಮಿಗಳ ಹುಚ್ಚಾಟದ ವಿಡಿಯೋ ವೈರಲ್

Views: 189

ಕನ್ನಡ ಕರಾವಳಿ ಸುದ್ದಿ: ಯುವ ಜೋಡಿಯೊಂದು ರೊಮ್ಯಾಂಟಿಕ್ ಚಿತ್ರದ ದೃಶ್ಯವನ್ನು ಅನುಕರಿಸುತ್ತಾ, ಯುವತಿ ಪೆಟ್ರೋಲ್ ಟ್ಯಾಂಕ್ ಮೇಲೆ ಕುಳಿತು ಯುವಕನ್ನು ತಬ್ಬಿಕೊಂಡಿದ್ದು ರಸ್ತೆಯಲ್ಲಿ ಬೈಕ್ ಚಲಾಯಿಸುತ್ತಿರುವುದು ಕಾಣಬಹುದು. ಆದರೆ, ಟ್ರಾಫಿಕ್ ಪೊಲೀಸರು ಈ ಜೋಡಿಗೆ 53,500 ರೂ. ಭಾರೀ ದಂಡ ವಿಧಿಸಿದ್ದಾರೆ.

ಎಕ್ಸ್‌ನಲ್ಲಿ ವಿಡಿಯೊ ಹಂಚಿಕೊಂಡ ಉತ್ತರ ಪ್ರದೇಶ ಪೊಲೀಸರು, “ನೋಯ್ಡಾದಲ್ಲಿ ರೋಮಿಯೋ ಅ್ಯಂಡ್ ಜೂಲಿಯೆಟ್ ಬೈಕ್ ಸೀಕ್ವೆಲ್ ಪ್ರಯತ್ನ. ಈ ಬಾರಿ ಕ್ಲೈಮ್ಯಾಕ್ಸ್ ಲವ್ ಸಾಂಗ್ ಅಲ್ಲ, ಭಾರೀ ದಂಡ! ಸುರಕ್ಷಿತವಾಗಿ ಚಲಾಯಿಸಿ, ನಿಯಮಗಳನ್ನು ಪಾಲಿಸಿ, ನಿಮ್ಮ ಪ್ರೇಮಕಥೆ ದೀರ್ಘಕಾಲ ಬಾಳಲಿ” ಎಂದು ಬರೆದಿದ್ದಾರೆ.

ಈ ಪೋಸ್ಟ್ ತಮಾಷೆಯ ಶೈಲಿಯ ಜೊತೆಗೆ ಗಂಭೀರ ಸಂದೇಶವನ್ನು ಮುಟ್ಟಿಸಿದ್ದಕ್ಕಾಗಿ ನೆಟಿಜನ್‌ಗಳಲ್ಲಿ ಸಂಚಲನ ಮೂಡಿಸಿದೆ. ಬಳಕೆದಾರರೊಬ್ಬರು, “ಈಗ ಪ್ರಶ್ನೆ ಏನೆಂದರೆ ಯಾರು ದಂಡ ತುಂಬುತ್ತಾರೆ! ರೋಮಿಯೋನಾ, ಜೂಲಿಯೆಟ್‌ನಾ, ಅಥವಾ ಇವರ ಪೋಷಕರಾ? ಇವರಿಗೆ ಎರಡು ಸಮಸ್ಯೆಇದೆ. ಒಂದು ದಂಡ ತುಂಬುವುದು, ಇನ್ನೊಂದು ಪೋಷಕರಿಗೆ ತಿಳಿದರೆ ಸಂಬಂಧ ಬಯಲಾಗುತ್ತದೆ. ಆದ್ದರಿಂದ ಎಚ್ಚರಿಕೆಯಿಂದಿರಿ!” ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ, “ಉತ್ತರ ಪ್ರದೇಶ ಪೊಲೀಸರ ಸಂದೇಶ ಜನರ ಒಳಿತಿಗಾಗಿದೆ. ಎಲ್ಲರೂ ನಿಯಮ ಪಾಲಿಸಬೇಕು. ಪೊಲೀಸರು ನಮಗೆ ಸಹಾಯಕ್ಕಾಗಿ ಇಂತಹ ಸಂದೇಶಗಳನ್ನು ನೀಡುತ್ತಾರೆ. ಜೈ ಹಿಂದ್,” ಎಂದು ಬರೆದಿದ್ದಾರೆ.

ಈ ಪೋಸ್ಟ್ ಯುವ ಜನರನ್ನು ಗುರಿಯಾಗಿಟ್ಟುಕೊಂಡು ಉತ್ತರ ಪ್ರದೇಶ ಪೊಲೀಸರು ನಡೆಯುತ್ತಿರುವ ರಸ್ತೆ ಸುರಕ್ಷತಾ ಅಭಿಯಾನದ ಭಾಗವಾಗಿದೆ. ಹೆಲ್ಮೆಟ್ ಬಳಕೆಯನ್ನು ಉತ್ತೇಜಿಸುವುದು, ಅಜಾಗರೂಕ ಚಾಲನೆಯನ್ನು ತಡೆಗಟ್ಟುವುದು ಮತ್ತು ಟ್ರಾಫಿಕ್ ನಿಯಮ ಉಲ್ಲಂಘನೆಯ ಪರಿಣಾಮಗಳನ್ನು ತೋರಿಸುವುದು ಇದರ ಉದ್ದೇಶವಾಗಿದೆ. ಸಾಮಾಜಿಕ ಜಾಲತಾಣದ ಮೂಲಕ ಈ ರೀತಿಯ ಸಂದೇಶಗಳು ಯುವ ಜನರಿಗೆ ತಲುಪಿ, ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ನಿರೀಕ್ಷೆಯಿದೆ.

Related Articles

Back to top button