ಯುವಜನ

ಕುಂದಾಪುರ: ಮೂಡ್ಲಕಟ್ಟೆಯ ಯುವಕ ಆತ್ಮಹತ್ಯೆ

Views: 338

ಕನ್ನಡ ಕರಾವಳಿ ಸುದ್ದಿ: ಕಂದಾವರ ಗ್ರಾಮದ ಮೂಡ್ಡಕಟ್ಟೆಯ ಕಾಲನಿಯ ಅಂಬೇಡ್ಕರ್ ಭವನ ಬಳಿಯ ನಿವಾಸಿ ನಿಖಿಲ್ ಕುಮಾರ (26) ಅವರು ಆ. 20ರ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಯಾವುದೋ ವೈಯಕ್ತಿಕ ಸಮಸ್ಯೆಯಿಂದ ಖಿನ್ನತೆಗೊಳಗಾಗಿ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಮೃತರು ತಂದೆ, ತಾಯಿ, ಪತ್ನಿ ಮತ್ತು ಪುತ್ರಿಯನ್ನು ಅಗಲಿದ್ದಾರೆ.

ನಿಖಿಲ್ ಮೀನಿನ ವಾಹನದ ಚಾಲಕರಾಗಿದ್ದರು. ಪತ್ನಿ ಹಾಗೂ ಪುತ್ರಿ ಕೆಲಸದ ನಿಮಿತ್ತ ಅಗಸ್ಟ್. 19ರಂದು ರಾಣೆಬೆನ್ನೂರಿಗೆ ತೆರಳಿದ್ದು ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ನಿಖಿಲ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರ ತಂದೆ ವೆಂಕಟೇಶ್ ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button