ಮಾಹಿತಿ ತಂತ್ರಜ್ಞಾನ

ಕುಂದಾಪುರ: “ಪಾರ್ಟ್ ಟೈಮ್ ಕೆಲಸ ಮಾಡಿ ಹಣ ಗಳಿಸಿ” ಜಾಹೀರಾತಿನಿಂದ 2,21,900 ಲ.ರೂ ಕಳೆದುಕೊಂಡ ಮಹಿಳೆ 

Views: 321

ಕನ್ನಡ ಕರಾವಳಿ ಸುದ್ದಿ: ಇಲ್ಲಿನ ಪ್ರತಿಮಾ ಅವರು ಇನ್‌ಸ್ಟಾಗ್ರಾಮ್ ಖಾತೆ ಬಳಕೆ ಮಾಡುವ ಸಂದರ್ಭ’ಮನೆಯಿಂದಲೇ ಕೆಲಸ ಮಾಡಿ’ ಎಂಬ ಪಾರ್ಟ್ ಟೈಮ್ ಕೆಲಸದ ಜಾಹೀರಾತಿನಿಂದ ಸೈಬ‌ರ್ ವಂಚನೆಗೆ ಒಳಗಾಗಿ ದೂರು ನೀಡಿದ್ದಾರೆ.

ಪಾರ್ಟ್‌ಟೈಂ ಕೆಲಸ ಕ್ಯಾಪ್ಟಾ ಟೈಪಿಂಗ್ ಲಿಂಕ್ ಇದ್ದು ಅದನ್ನು ಒತ್ತಿದಾಗ ವಾಟ್ಸ್ಆ್ಯಪ್ ಖಾತೆ ಆಗಿತ್ತು. ಮೊಬೈಲ್ ನಂಬರಿನ ವ್ಯಕ್ತಿ ತಾನು ಫಾಕ್ಸ್‌ಬಿಟ್‌ ಎಕ್ಸ್‌ಚೇಂಜ್ ಕಂಪೆನಿಯ ಎಚ್‌ಆರ್ ಮ್ಯಾನೇಜ‌ರ್ ಆಗಿದ್ದು ಮನೆಯಲ್ಲಿಯೇ ಟೆಲಿಗ್ರಾಮ್ ಆ್ಯಪ್ ಇನ್ ಸ್ಟಾಲ್ ಮಾಡಿ ಅದರ ಮೂಲಕ ಪಾರ್ಟ್ ಟೈಮ್ ಕೆಲಸ ಮಾಡಿ ಹಣ ಗಳಿಸಬಹುದೆಂದು ಸಂದೇಶದ ಮೂಲಕ ತಿಳಿಸಿದ್ದ. ಅನಂತರ ಪ್ರತಿಮಾ ಅವರಿಗೆ 1,000 ರೂ. ಹಾಕಲು ತಿಳಿಸಿದ್ದು ಹಣ ಹಾಕಿದ್ದರು. ಅನಂತರ ಹಂತಹಂತವಾಗಿ ಒಟ್ಟು 2,21,900 ರೂ.ಗಳನ್ನು ವರ್ಗಾಯಿಸಿಕೊಂಡು ಮೋಸ ಮಾಡಿದ್ದಾನೆ.

ಬಳಿಕ ಪ್ರತಿಮಾ ಅವರು 1930ಗೆ ಕರೆ ಮಾಡಿ ಸೈಬ‌ರ್ ವಂಚನೆ ಬಗ್ಗೆ ದೂರು ಸಲ್ಲಿಸಿದ್ದಾರೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!