ಹೊಸ ಆಧಾರ್ ಆ್ಯಪ್ ಬಿಡುಗಡೆ: ಆಧಾರ್ ಕಾರ್ಡ್ ಬೇಕಿಲ್ಲ, ಫೋನ್ ನಂಬರ್, ವಿಳಾಸ ನೀವೇ ಅಪ್ಡೇಟ್ ಮಾಡಿ, ಆ್ಯಪ್ ಬಳಸುವುದು ಹೇಗೆ?
Views: 35
ಕನ್ನಡ ಕರಾವಳಿ ಸುದ್ದಿ: ಆಧಾರ್ ಸೇವೆಗಳು ಹೆಚ್ಚು ಬಳಕೆದಾರ ಸ್ನೇಹಿಯಾಗಿಸಲು ಯುಐಡಿಎಐ ಸಂಸ್ಥೆ ಹೊಸ ಆಧಾರ್ ಆ್ಯಪ್ ಬಿಡುಗಡೆ ಮಾಡಿದೆ. ಈ ಆ್ಯಪ್ನ ಹೊಸ ವೈಶಿಷ್ಟ್ಯಗಳ ವಿವರ ಇಲ್ಲಿದೆ.
ಪ್ರಸ್ತುತ ಆಧಾರ್ ಕಾರ್ಡ್ ಎಲ್ಲರಿಗೂ ಅತ್ಯವಶ್ಯಕವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳನ್ನು ಮತ್ತು ವಿವಿಧ ರೀತಿಯ ಸೇವೆಗಳನ್ನು ಪಡೆಯಲು ಆಧಾರ್ ಬೇಕೇಬೇಕು. ಇದೀಗ ದೇಶದಲ್ಲಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸಲು ಕೇಂದ್ರ ನಿರ್ಧರಿಸಿದೆ. ಇದರ ಭಾಗವಾಗಿ, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಈ ವರ್ಷದ ಜನವರಿ 28 ರಂದು ಹೊಸ ಆಧಾರ್ ಆ್ಯಪ್ (ಅಪ್ಲಿಕೇಶನ್) ಅನ್ನು ಬಿಡುಗಡೆ ಮಾಡಿದೆ. ಇದರೊಂದಿಗೆ, ಆಧಾರ್ ಸೇವೆಗಳು ಹೆಚ್ಚು ಬಳಕೆದಾರ ಸ್ನೇಹಿಯಾಗಲಿವೆ. ಈ ಆ್ಯಪ್ನಲ್ಲಿ ಹೊಸ ವೈಶಿಷ್ಟ್ಯಗಳ ಬಗ್ಗೆ ಮತ್ತು ಅವುಗಳನ್ನು ಹಂತ ಹಂತವಾಗಿ ಹೇಗೆ ಬಳಸುವುದು ಎಂಬುದರ ಕುರಿತು ಇಲ್ಲಿ ತಿಳಿದುಕೊಳ್ಳೋಣ?
ಆ್ಯಪ್ ಬಳಸುವುದು ಹೇಗೆ?:
ಮೊದಲು, ನಿಮ್ಮ ಫೋನ್‌ನಲ್ಲಿ ಗೂಗಲ್ ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್ ತೆರೆದು ಆಧಾರ್ ಅಪ್ಲಿಕೇಶನ್ ಮೇಲೆ ಕ್ಲಿಕ್ ಮಾಡಿ ಡೌನ್‌ಲೋಡ್ ಮಾಡಿಕೊಳ್ಳಿ.
ಫೋಟೋ, ವಿಡಿಯೋಗಳನ್ನು ರೆಕಾರ್ಡ್ ಮಾಡಲು ಪರ್ಮಿಷನ್ ಆಪ್ಷನ್
ನಂತರ ಮೊಬೈಲ್ ಮೆನುಗೆ ಹೋಗಿ ಅಪ್ಲಿಕೇಶನ್ ಮೇಲೆ ಕ್ಲಿಕ್ ಮಾಡಿ. ಇದರಲ್ಲಿ, ನೀವು ಕ್ಯಾಮರಾ, ಎಸ್ಎಂಎಸ್ ಮತ್ತು ಕರೆಗಳ ಅನುಮತಿ ಆಯ್ಕೆಗಳು ಕಾಣುತ್ತವೆ. ನೀವು ಅವುಗಳ ಮೇಲೆ ಕ್ಲಿಕ್ ಮಾಡಿದರೆ, ಕಂಟಿನ್ಯೂ ಆಯ್ಕೆ ಕಾಣಿಸುತ್ತದೆ.
ಮೆಸೇಜ್, ಫೋನ್ ಕರೆಗಳಿಗೆ ಅನುಮತಿ ನೀಡಬೇಕು
ಆಧಾರ್ ಆ್ಯಪ್ ಮೂಲಕ ಫೋಟೋಗಳನ್ನು ತೆಗೆದುಕೊಳ್ಳಲು ಮತ್ತು ವಿಡಿಯೋಗಳನ್ನು ರೆಕಾರ್ಡ್ ಮಾಡಲು ಮತ್ತು ನೋಟಿಫಿಕೇಷನ್ಸ್ಗೆ ಅನುಮತಿಸಬೇಕು.
ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು
ಅದೇ ರೀತಿ, ನೀವು ಆ್ಯಪ್ ಮೂಲಕ ಕರೆಗಳು ಮತ್ತು ಸಂದೇಶಗಳನ್ನು ಅನುಮತಿಸಬೇಕಾಗುತ್ತದೆ. ಅದರ ನಂತರ, ಅಪ್ಲಿಕೇಶನ್‌ನ ಪ್ರಮುಖ ವೈಶಿಷ್ಟ್ಯಗಳು ಸ್ಲೈಡ್‌ಗಳ ರೂಪದಲ್ಲಿ ಗೋಚರಿಸುತ್ತವೆ.
ಅನಂತರ ಆ್ಯಪ್ನಲ್ಲಿ ನಿಮ್ಮ ಆಧಾರ್ ಸಂಖ್ಯೆ ನಮೂದಿಸಲು ಕೇಳುತ್ತದೆ. ಈ ಪ್ರಕ್ರಿಯೆಯು ಮೂರು ಹಂತಗಳಲ್ಲಿ ನಡೆಯುತ್ತದೆ.
ಬಳಿಕ ನೀವು ನಿಮ್ಮ 12 ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದಿಸಿ, ಅದನ್ನು ದೃಢೀಕರಿಸಬೇಕು.
ಆಧಾರ ಲಿಂಕ್ ಇರುವ ಸಿಮ್ ನಂಬರ್ ಮೇಲೆ ಕ್ಲಿಕ್ ಮಾಡಬೇಕು
ಒಂದು ವೇಳೆ ನಿಮ್ಮ ಫೋನ್‌ನಲ್ಲಿ ಎರಡು ಸಿಮ್‌ಗಳಿದ್ದರೆ, ಯಾವ ಸಂಖ್ಯೆಯೊಂದಿಗೆ ನೋಂದಾಯಿಸಬೇಕೆಂದು ಅದು ನಿಮ್ಮನ್ನು ಕೇಳುತ್ತದೆ. ನಿಮ್ಮ ಆಧಾರ್‌ಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ ಮತ್ತು ಸ್ವಯಂಚಾಲಿತವಾಗಿ ಒಟಿಪಿ ಸ್ವೀಕರಿಸುವ ಮೂಲಕ ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆ.
ಆ್ಯಪ್ನಲ್ಲಿ ಆಧಾರ್ ಪ್ರೊಫೈಲ್ ಅನ್ನು ರಚಿಸುವುದು
ಎರಡನೇ ಪ್ರಕ್ರಿಯೆಯಲ್ಲಿ, ಫೇಸ್ ಅಥೆಂಟಿಕೇಷನ್ (ಮುಖಚಹರೆ ದೃಢೀಕರಣ) ಪ್ರಾರಂಭವಾಗುತ್ತದೆ. ಈ ವೇಳೆ ಉತ್ತಮ ಬೆಳಕು ಇರುವಂತೆ ನೋಡಿಕೊಳ್ಳಬೇಕು. ಅಲ್ಲದೆ, ನೀವು ಕನ್ನಡಕವನ್ನು ಬಳಸದೆ ಸೆಲ್ಫಿ ತೆಗೆದುಕೊಳ್ಳಬೇಕು.
ಆರು ಅಂಕಿಯ ಸೆಕ್ಯೂರಿಟಿ ಪಿನ್ ನಮೂದಿಸಿ
ಮೂರನೇ ಪ್ರಕ್ರಿಯೆಯಲ್ಲಿ ಸೆಟ್ ಯುವರ್ ಆ್ಯಪ್ ಪಿನ್ ಎಂಬ ಆಪ್ಷನ್ನಲ್ಲಿ ಆರು ಅಂಕಿಗಳ ಪಿನ್ ಅನ್ನು ಎರಡು ಬಾರಿ ನಮೂದಿಸಿ ಪಾಸ್ವರ್ಡ್ ಸೆಟ್ ಮಾಡಿಕೊಳ್ಳಿ. ಇದರೊಂದಿಗೆ ಆ್ಯಪ್ನಲ್ಲಿ ಆಧಾರ್ ಪ್ರೊಫೈಲ್ ಜನರೇಟ್ ಆಗುತ್ತದೆ.
ನೋಂದಣಿಗಾಗಿ ಫೋಟೋ ತೆಗೆದುಕೊಳ್ಳಿ
ಆ್ಯಪ್‌ನಲ್ಲಿರುವ ಆಡ್ ಫ್ರೋಫೈಲ್ ಬಟನ್ ಕ್ಲಿಕ್ ಮಾಡಿ ನಿಮ್ಮ ಕುಟುಂಬದ ಸದಸ್ಯರ ಆಧಾರ್ ಕಾರ್ಡ್ ಅನ್ನು ಸಹ ಇದರಲ್ಲಿ ಆಡ್ ಮಾಡಬಹುದು. ಈ ಆ್ಯಪ್ ಮೂಲಕ ಐದು ಮಂದಿ ವರೆಗೂ ಪ್ರೊಫೈಲ್ ವಿವರಗಳನ್ನು ಕ್ರಿಯೇಟ್ ಮಾಡಬಹುದು.
ಸೆಲಕ್ಟಿವ್ ಶೇರ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಆಧಾರ್ ಮಾಹಿತಿಯಲ್ಲಿ ಬೇಕಾಗಿರುವುದನ್ನು ಮಾತ್ರ ಹಂಚಿಕೊಳ್ಳಬಹುದು. ಶೇರ್ ಡಿಟೆಲ್ಸ್ ಕ್ಲಿಕ್ ಮಾಡಿ ಎಲ್ಲಾ ಡೇಟಾವನ್ನು ಶೇರ್ ಮಾಡಬಹುದು.
ಆಧಾರ್ ಕಾರ್ಡ್ ಡೌನ್‌ಲೋಡ್ ಪ್ರಕ್ರಿಯೆ
ಆ್ಯಪ್‌ನಲ್ಲಿ ಆಧಾರ್ ಬಟನ್ ಕ್ಲಿಕ್ ಮಾಡಿ ಮಾಸ್ಕ್ಡ್ ಅಥವಾ ಆನ್ ಮಾಸ್ಕ್ಡ್ ಆಧಾರ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಬಯೋಮೆಟ್ರಿಕ್ಸ್ ಬಟನ್ ಕ್ಲಿಕ್ ಮಾಡಿ ಲಾಕ್ ಅಥವಾ ಅನ್ಲಾಕ್ ಮಾಡಬಹುದು.
ಮೇಲಿನ ಸೆಕ್ಯೂರಿಟಿ ಬಟನ್ ಅನ್ನು ಕ್ಲಿಕ್ ಮಾಡುವ ಮೂಲಕ ನೀವು ಬಯೋಮೆಟ್ರಿಕ್ ಲಾಕ್ ಮತ್ತು ಆ್ಯಪ್ ಪಿನ್ ಅನ್ನು ಬದಲಾಯಿಸಬಹುದು. ನಿಮ್ಮ ಆಧಾರ್ ವಿವರಗಳನ್ನು ಕೊನೆಯದಾಗಿ ಎಲ್ಲಿ ಬಳಸಲಾಗಿದೆ ಎಂಬುದನ್ನು ಸಹ ನೀವು ಕಂಡುಹಿಡಿಯಬಹುದು.
ಫೋನ್ ಸಂಖ್ಯೆ ಮತ್ತು ವಿಳಾಸ ನವೀಕರಣ ಆಯ್ಕೆ
ಹಾಗೆಯೇ ಸರ್ವಿಸಸ್ಗೆ ಹೋಗಿ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ವಿಳಾಸವನ್ನು ಆಧಾರ್‌ನಲ್ಲಿ ನವೀಕರಿಸಬಹುದು.
ಆ್ಯಪ್ನಲ್ಲಿ ವಿವಿಧ ಭಾಷೆಗಳ ಆಯ್ಕೆ
ಈ ಆ್ಯಪ್ ಇಂಗ್ಲಿಷ್, ಕನ್ನಡ ಜೊತೆಗೆ ಒಟ್ಟು 14 ಭಾಷೆಗಳಲ್ಲಿ ಲಭ್ಯವಿದೆ. ಮೇಲ್ಭಾಗದ ಬಲಗಡೆ ಇರುವ ಮೆನು ಬಟನ್ ಕ್ಲಿಕ್ ಮಾಡಿ ಪ್ರೊಫೈಲ್‌ನಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬಹುದು.
ಇನ್ಮುಂದೆ ನೀವು ನಿಮ್ಮ ಆಧಾರ್ ಕಾರ್ಡ್ ಅನ್ನು ನಿಮ್ಮೊಂದಿಗೆ ಕೊಂಡೊಯ್ಯಬೇಕಾದ ಅವಶ್ಯಕತೆಯಿಲ್ಲದೇ ಈ ಹೊಸ ಆಧಾರ್ ಆ್ಯಪ್ನಲ್ಲಿ ಡಿಜಿಟಲ್ ಇರುತ್ತದೆ. ನಿಮಗೆ ಅಗತ್ಯವಿದ್ದಾಗ ಇದನ್ನು ಬಳಸಬಹುದು.






