ಮಾಹಿತಿ ತಂತ್ರಜ್ಞಾನ
ಪ್ರೀತಿಸಿದ ಯುವಕ ಕೈಕೊಟ್ಟ ಕಾರಣಕ್ಕೆ ತಾನೇ ಸೃಷ್ಟಿಸಿದ AI ಸಂಗಾತಿ ಜೊತೆ ಮದುವೆಯಾದ ಮಹಿಳೆ!
Views: 75
ಕನ್ನಡ ಕರಾವಳಿ ಸುದ್ದಿ: ಪ್ರೀತಿಸಿದ ಯುವಕ ಕೈಕೊಟ್ಟ ಕಾರಣಕ್ಕೆ ಚಾಟ್ ಜಿಪಿಟಿ ಬಳಸಿ ತಾವೇ ಸೃಷ್ಟಸಿದ್ದ ಕೃತಕ ಬುದ್ದಿಮತ್ತೆ (AI) ಸಂಗಾತಿಯನ್ನು ಮಹಿಳೆ ಮದುವೆಯಾಗಿರುವ ವಿಚಿತ್ರಕಾರಿ ಘಟನೆ ಜಪಾನ್‌ನಲ್ಲಿ ನಡೆದಿದೆ.
32 ವರ್ಷದ ಕಾನೊ ಎಂಬ ಮಹಿಳೆ ಚಾಟ್ ಜಿಪಿಟಿ ಬಳಸಿ ಸೃಷ್ಟಿಸಿರುವ Lune Klaus ಜೊತೆ ರಿಂಗ್ ಬದಲಾಯಿಸಿಕೊಂಡು ಜಪಾನ್ ಮದುವೆಯ ಸಾಂಪ್ರದಾಯಿಕ ಉಡುಗೆ ಧರಿಸಿ ಮದುವೆಯಾಗಿದ್ದಾರೆ. ಕಾನೊ ಅವರು ‘ನೀನು ಮದುವೆಯಾಗುತ್ತೀಯಾ’ ಎಂದು ಕೇಳಿದಾಗ ಅದು ಯೆಸ್ ಎಂದಿದೆ.
ಮಹಿಳೆ ಕಳೆದ ಮೂರು ವರ್ಷದಿಂದ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದರು. ಆ ವ್ಯಕ್ತಿ ನಂತರ ಕೈ ಕೊಟ್ಟ ಕಾರಣ ನಂತರ ಮಹಿಳೆ ನೊಂದಿದ್ದರು ಎನ್ನಲಾಗಿದೆ.






