ಜನಮನ

ಇಂದು ಚಂದ್ರಗ್ರಹಣ, ಎಲ್ಲೆಲ್ಲಿ ಗೋಚರ.. ಯಾವಾಗ ಶುರು?

Views: 104

ಕನ್ನಡ ಕರಾವಳಿ ಸುದ್ದಿ: ಇಂದು ನಡೆಯಲಿರುವ ಚಂದ್ರಗ್ರಹಣ ಭಾರತದ ಈಶಾನ್ಯ ರಾಜ್ಯಗಳಲ್ಲಿ ಸಂಪೂರ್ಣ ಕಾಣಿಸಲಿದ್ದು, ಕರ್ನಾಟಕದಲ್ಲಿ ಸಂಜೆ ಭಾಗಶಃ ಗೋಚರವಾಗಲಿದೆ. ಇಂದು (ಮಾ.3) ಮಧ್ಯಾಹ್ನ 3.20ಕ್ಕೆ ಪ್ರಾರಂಭವಾಗಿ 6.47 ಕೊನೆಗೊಳ್ಳಲಿದೆ

ಇದು 2026 ಏಕೈಕ ಚಂದ್ರಗಹಣ. ಹುಣ್ಣಿಮೆಯಂದು ನಡೆಯುವುದರಿಂದ ಭಾರತೀಯರಿಗೆ ಇದು ಗ್ರಹಣವೆಂದು ಅನಿಸದು. ಕಾರಣ ಗ್ರಹಣ ಸಂಪೂರ್ಣ ಮುಗಿಯುವ ಹಂತದಲ್ಲಿ ಚಂದ್ರೋದಯವಾಗುವುದರಿಂದ ನಮಗೆ ಗ್ರಹಣದ ಚಂದ್ರ ಕಾಣುವುದೇ 9 ನಿಮಿಷ ಮಾತ್ರ. ಅದೂ ಪಾರ್ಶ್ವ ಚಂದ್ರಗ್ರಹಣ. ಬರೀ ಚಂದ್ರನ ಶೇ.8 ಭಾಗ ಮಾತ್ರ ಗ್ರಹಣ ಆವರಿಸಲಿದೆ.

ಸಂಜೆ 6.47ಕ್ಕೆ ಗ್ರಹಣ ಮುಗಿಯುವುದರಿಂದ ಗ್ರಹಣದ ಚಂದ್ರ ಕಾಣ ಸಿಗುವುದು ಕಷ್ಟ. ಈ ಗ್ರಹಣದ ಕಡೆಯ ಶೇ.8 ಅಂಶ ಅಂದರೆ ಬರೇ 9 ನಿಮಿಷ ಗ್ರಹಣ ಗೋಚರಿಸುವುದು ಹೌದಾದರೂ ನೋಡಲು ಕಷ್ಟ ಎಂದಿದ್ದಾರೆ ಡಾ.ಎ.ಪಿ.ಭಟ್ ಖಗೋಳತಜ್ಞ.

ಭೂಮಿಯ ನೆರಳು ಚಂದ್ರನ ಮೇಲೆ ಭಾಗಶಃ ಬೀಳುವುದರಿಂದ ನೆರಳಿನ ಸ್ವಲ್ಪ ಭಾಗವನ್ನು ನೋಡಬಹುದಾಗಿದೆ. ಇದಕ್ಕಾಗಿ ದೇವಸ್ಥಾನಗಳ ಬಾಗಿಲು ಹಾಕುವ ಅವಶ್ಯಕತೆಯೂ ಇಲ್ಲ. ಎಲ್ಲರೂ ಬರಿಗಣ್ಣಿನಿಂದಲೇ ಗ್ರಹಣ ವೀಕ್ಷಿಸಬಹುದು ಎನ್ನುತ್ತಾರೆ ಎಚ್.ಎಸ್.ಟಿ.ಸ್ವಾಮಿ ಹವ್ಯಾಸಿ ಖಗೋಳ ವೀಕ್ಷಕ.

ಸುದೀರ್ಘ ಅವಧಿಯ ಚಂದ್ರಗ್ರಹಣ ಪೂರ್ವ ಏಷ್ಯಾ, ಆಸ್ಪ್ರೇಲಿಯಾ, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಗೋಚರವಾಗುತ್ತದೆ. ಭಾರತದಲ್ಲೂ ಗ್ರಹಣ ಸಂಭವಿಸುತ್ತದೆಯಾದರೂ ಕೇವಲ 10ರಿಂದ 20 ನಿಮಿಷ ಮಾತ್ರ ಇರುತ್ತದೆ.

ಚಂದ್ರ ಕೆಂಪಾಗುವುದೇಕೆ?

ಸೂರ್ಯನ ಬೆಳಕು ಭೂಮಿಯ ವಾತಾವರಣವನ್ನು ಹಾದು ಭೂಮಿಗೆ ತಲುಪುವಾಗ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಭೂಮಿ ಮೇಲಿನ ಧೂಳು ಹೆಚ್ಚಾದಷ್ಟು ಕೆಂಪು ಬಣ್ಣ ವೃದ್ಧಿಯಾಗುತ್ತದೆ. ಭೂಮಿ ನೆರಳು ಚಂದ್ರನ ಮೇಲೆ ಬಿದ್ದು ಚಂದ್ರ ಸಹ ಕೆಂಪಾಗಿ ಗೋಚರಿಸುತ್ತಾನೆ. ಹೀಗಾಗಿ ಅದನ್ನು ಬ್ಲಡ್‌ ಮೂನ್‌ ಎಂದು ಕರೆಯುತ್ತಾರೆ. ವಾಸ್ತವದಲ್ಲಿ ಚಂದ್ರನಿಗೆ ಬಣ್ಣವಿಲ್ಲ. ಭೂಮಿಯ ನೆರಳಿನಿಂದಾಗಿ ಹಾಗೆ ಗೋಚರವಾಗುತ್ತದೆ. ಯಾವುದೇ ರೀತಿಯ ಚಂದ್ರಗ್ರಹಣವನ್ನು ಯಾವುದೇ ಉಪಕರಣಗಳಿಲ್ಲದೆ ಬರಿಗಣ್ಣಿನಲ್ಲೇ ನೋಡಬಹುದಾಗಿದೆ. ಅಲ್ಲದೆ ಬೈನಾಕುಲರ್‌ ಮತ್ತು ಟೆಲಿಸ್ಕೋಪ್‌ಗಳ ಮೂಲಕವೂ ವೀಕ್ಷಿಸಬಹುದು. ನೆರಳು ಬೆಳಕಿನ ಆಟದ ವೀಕ್ಷಣೆಯಿಂದ ಯಾವುದೇ ಸಮಸ್ಯೆ ಇರದು.

ಮಂಗಳವಾರ ಈ ವರ್ಷದ ಮೊದಲ ಚಂದ್ರ ಗ್ರಹಣವಾಗಿದೆ. ಮತ್ತೊಂದು ಚಂದ್ರಗ್ರಹಣ ವೀಕ್ಷಣೆಗೆ ಎರಡೂವರೆ ವರ್ಷ ಕಾಯಬೇಕಾಗುತ್ತದೆ. 2028ನೇ ಜುಲೈ 6 ಮತ್ತು 7ರಂದು ಪಾಶ್ರ್ವ ಚಂದ್ರಗ್ರಹಣ ಮತ್ತು 2028ನೇ ಡಿಸೆಂಬರ್‌ 31ರಂದು ಸಂಪೂರ್ಣ ಚಂದ್ರ ಗ್ರಹಣ ಸಂಭವಿಸಲಿದ್ದು ಭಾರತದೆಲ್ಲೆಡೆ ನೋಡಬಹುದಾಗಿದೆ.

ಗ್ರಹಣ ಯಾವಾಗ ಶುರು?

ಮಂಗಳವಾರ ಮಧ್ಯಾಹ್ನ 3 ಗಂಟೆಯಿಂದಲೇ ಗ್ರಹಣ ಪ್ರಕ್ರಿಯೆ ಆರಂಭವಾಗಲಿದ್ದರೂ, ಚಂದ್ರೋದಯ: ಸಂಜೆ 6.26ಕ್ಕೆ ಆಗುವುದರಿಂದ ಗ್ರಹಣವು ಆಗಲೇ ಗೋಚರಿಸಲಿದೆ.ಸಂಜೆ 6.47ಕ್ಕೆ ಗ್ರಹಣ ಮೋಕ್ಷ ಕಾಲ (ಮುಕ್ತಾಯ) ಇರಲಿದೆ.

ಹೀಗಾಗಿ ಬಹುತೇಕ ದೇಗುಲಗಳಲ್ಲಿ ಸಂಜೆ 7 ಗಂಟೆಯ ನಂತರವೇ ಪೂಜೆ-ಪುನಸ್ಕಾರಗಳು ಜರುಗಲಿವೆ.

Related Articles

Back to top button
error: Content is protected !!