ಪತಿಯೊಂದಿಗೆ ಜಗಳವಾಡಿ ಹಾಲಾಡಿ ಹೊಳೆಗೆ ಹಾರಲು ಯತ್ನಿಸಿದ ಮಹಿಳೆಯನ್ನು ರಕ್ಷಿಸಿದ ಪೊಲೀಸರು!
Views: 123
ಕನ್ನಡ ಕರಾವಳಿ ಸುದ್ದಿ: ಪತಿಯೊಂದಿಗೆ ಜಗಳವಾಡಿಕೊಂಡು ಹಾಲಾಡಿ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ ಪತ್ನಿಯನ್ನು ಪೊಲೀಸ್ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದಾಗಿ ಪ್ರಾಣ ಉಳಿಸಿದ ಘಟನೆ ನಡೆದಿದೆ.
ತಕ್ಷಣ ಪತಿರಾಯ ತುರ್ತು ಸಹಾಯವಾಣಿ 112 ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.ಪೊಲೀಸ್ ಸಿಬ್ಬಂದಿಯ ಸಮಯ ಪ್ರಜ್ಞೆ ಮತ್ತು ಪ್ರಾಮಾಣಿಕ ಕರ್ತವ್ಯದಿಂದ ಸದ್ರಿ ಮಾಹಿತಿಯ ಆಧಾರದ ಮೇಲೆ ತಕ್ಷಣ ಕಾರ್ಯಪ್ರವೃತ್ತರಾಗಿ ತುರ್ತು ಸ್ಪಂದನಾ ವಾಹನದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪತ್ನಿಯನ್ನು ಹಾಲಾಡಿ ಹೊಳೆಯ ಸೇತುವೆಯ ಮೇಲೆ ಪತ್ತೆಮಾಡಿ ತಡೆದು ಸಮಾಧಾನಪಡಿಸಿ ಪ್ರಾಣ ಉಳಿಸಿದ್ದಾರೆ
ತದನಂತರ ಅವರ ಪತಿಯನ್ನು ಸ್ಥಳಕ್ಕೆ ಕರೆಸಿ, ಇಬ್ಬರಿಗೂ ಸೂಕ್ತ ಸಮಾಲೋಚನೆ ಮತ್ತು ಬುದ್ದಿ ಮಾತು ಹೇಳಿ ಹೆಚ್ಚಿನ ಮಾಹಿತಿ ಪಡೆದು ಮನೆಗೆ ಮರಳಿ ಕಳಿಸಿಕೊಡಲಾಗಿದೆ ಪೊಲೀಸರ ಸಮಯ ಪ್ರಜ್ಞೆ ಹಾಗೂ ಪ್ರಾಮಾಣಿಕ ಕರ್ತವ್ಯದಿಂದ ಆಗಬಹುದಾದ ದೊಡ್ಡ ಅನಾಹುತ ತಪ್ಪಿಸಿ ಅಮೂಲ್ಯ ಪ್ರಾಣ ಉಳಿಸಿ ಕೊಟ್ಟಿರುವ 112 ಪೊಲೀಸ್ ಸಿಬ್ಬಂದಿಯ ಕರ್ತವ್ಯಕ್ಕೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ.






