ಶಿಕ್ಷಣ

ಶಾಲಾ ಕೊಠಡಿಯಲ್ಲೇ ನಿದ್ದೆಗೆ ಜಾರಿದ ಶಿಕ್ಷಕ! 

Views: 104

ಶಾಲೆಯಲ್ಲಿ ಗುಣ ಮಟ್ಟದ ಶಿಕ್ಷಣ ಸಿಗುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿರುತ್ತವೆ. ಇದೀಗ ರಾಜಸ್ಥಾನದ ರೌಲಿ ಜಿಲ್ಲೆಯ ತೊಡಾ ಭೀಮ್ ವ್ಯಾಪ್ತಿಯ ಭಂಡಾರಿ ಅಂಧ್ರೂನಿಯ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರೊಬ್ಬರು ಶಾಲಾ ಸಮಯದಲ್ಲೆ ನಿದ್ರೆಗೆ ಜಾರಿರುವ ದೃಶ್ಯ ವೈರಲ್ ಆಗಿದೆ. ಶಾಲಾ ಕೆಲಸದ ಅವಧಿಯಲ್ಲಿಯೇ ಶಿಕ್ಷಕರೊಬ್ಬರು ಕೊಠಡಿಯೊಳಗೆ ಗಾಢ ನಿದ್ರೆಯಲ್ಲಿರುವುದು ಕಂಡುಬರುತ್ತದೆ. ಈ ವ್ಯಕ್ತಿಯನ್ನು ಆ ಶಾಲೆಯ ಮುಖ್ಯ ಶಿಕ್ಷಕ ಡ್ಯೋದಿರಾಮ್ ಮೀನಾ ಎಂದು ಗುರುತಿಸಲಾಗಿದೆ.

ಸದ್ಯ ಸರ್ಕಾರಿ ಶಾಲೆಗಳ ಆಡಳಿತ ವ್ಯವಸ್ಥೆಯ ಬಗ್ಗೆ ಆನ್‌ಲೈನ್‌ ನಲ್ಲಿ ಚರ್ಚೆಗೆ ಕಾರಣವಾಗಿದೆ. ಪೋಷಕರು ಮಕ್ಕಳ ಮುಂದಿನ ಭವಿಷ್ಯದ ಬಗ್ಗೆ ಆತಂಕವನ್ನು ವ್ಯಕ್ತಪಡಿಸಿದ್ದಾರೆ.

ಪೋಷಕರು ಮತ್ತು ಆನ್‌ಲೈನ್ ಬಳಕೆದಾರರಿಂದ ತೀವ್ರ ಟೀಕೆ ವ್ಯಕ್ತವಾಗಿದೆ.

Related Articles

Back to top button
error: Content is protected !!