ಧಾರ್ಮಿಕ

ಕುಂದಾಪುರ: ಕೊಲ್ಲೂರಮ್ಮನ ದರ್ಶನ ಮಾಡಿದ  ನಟ ಜೂ.ಎನ್‌ಟಿಆರ್ ಕುಟುಂಬ

Views: 109

ಉಡುಪಿ: ಕೊಲ್ಲೂರು ಮೂಕಾಂಬಿಕೆ ದೇವಿಯ ದರ್ಶನಕ್ಕೆ ನಟ ಜೂ.ಎನ್‌ಟಿಆರ್ ಕುಟುಂಬ ಆಗಮಿಸಿದೆ. ಕರಾವಳಿ ಜಿಲ್ಲೆ ಉಡುಪಿ ಎರಡನೇ ದಿನದ ಪ್ರವಾಸದಲ್ಲಿರುವ ತಾರಕ್ ರಾಮ್ ಮಧ್ಯಾಹ್ನ ಮಹಾಪೂಜೆ ಸಂದರ್ಭಗಳಲ್ಲಿ ದೇವಸ್ಥಾನಕ್ಕೆ ಆಗಮಿಸಿ ತಾಯಿ ಕೊಲ್ಲೂರಮ್ಮನ ದರ್ಶನ ಮಾಡಿದ್ದಾರೆ.

ನಟ, ನಿರ್ದೇಶಕ ರಿಷಬ್ ಶೆಟ್ಟಿ, ಕೆಜಿಎಫ್ ಖ್ಯಾತಿಯ ಡೈರೆಕ್ಟರ್ ಪ್ರಶಾಂತ್ ನೀಲ್ ಕುಟುಂಬವೂ ಜೊತೆಯಾಯಿತು. ಲಾಫಿಂಗ್ ಬುದ್ಧ ನಟ ಪ್ರಮೋದ್ ಶೆಟ್ಟಿ ಸಹ ಜೊತೆಗೆ ಬಂದು ದೇವರ ದರ್ಶನ ಮಾಡಿದರು. ನಾಲ್ಕು ಕುಟುಂಬಗಳು ಕೊಲ್ಲೂರಿನಲ್ಲಿ ಜೊತೆಯಾಗಿ ಬಂದು ದರ್ಶನ ಪಡೆದು ಪ್ರಸಾದ ಸ್ವೀಕಾರ ಮಾಡಿದರು‌

 

Related Articles

Back to top button
error: Content is protected !!