ಯುವಜನ
ಉಡುಪಿ ಪುತ್ತೂರಿನಲ್ಲಿ ಮನೆಗೆ ನುಗ್ಗಿ ಸ್ನೇಹಿತನನ್ನೇ ಬರ್ಬರವಾಗಿ ಕೊಲೆಗೈದ ಗೆಳೆಯರು

Views: 185
ಕನ್ನಡ ಕರಾವಳಿ ಸುದ್ದಿ: ಉಡುಪಿಯಲ್ಲಿ ಗೆಳೆಯರ ಗುಂಪೇ ಸ್ನೇಹಿತನನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ ನಡೆದಿದೆ.
ಉಡುಪಿ ಜಿಲ್ಲೆಯ ಪುತ್ತೂರು ಗ್ರಾಮದ ಸುಬ್ರಹ್ಮಣ್ಯನಗರದಲ್ಲಿ ಈ ಘಟನೆ ನಡೆದಿದೆ. ವಿನಯ್ ದೇವಾಡಿಗ (40) ಕೊಲೆಯಾದ ವ್ಯಕ್ತಿ. ಪೇಂಟಿಂಗ್ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಬ್ರಹ್ಮಾವರದ ಕೊಕ್ಕರ್ಣಿಯ ಅಜಿತ್ (28), ಅಕ್ಷೇಂದ್ರ (34) ಹಾಗೂ ಪ್ರದೀಪ್ ಆಚಾರ್ಯ ಬಂಧಿತ ಆರೋಪಿಗಳು.
ತಡರಾತ್ರಿ ಮನೆಗೆ ಬಂದ ಮೂವರು ವಿನಯ್ ಮನೆಯಲ್ಲಿ ಇದ್ದಾನಾ ಎಂದು ಕೇಳಿದ್ದಾರೆ. ರೂಮಿನಲ್ಲಿ ಪತ್ನಿ, ಮಗುವಿನೊಂದಿಗೆ ನಿದ್ದೆಗೆ ಜಾರಿದ್ದ ವಿನಯನನ್ನು ಏಕಾಏಕಿ ಕೋಣೆಗೆ ನುಗ್ಗಿ ಬರ್ಬರವಾಗಿ ಹತ್ಯೆಗೈದಿದ್ದಾರೆ.
ಸದ್ಯ ಪ್ರಕರಣ ಸಂಬಂಧ ಉಡುಪಿ ನಗರ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.






