ಯುವಜನ
ಉಜಿರೆಗೆ ಹನಿಮೂನಿಗೆಂದು ಬಂದ ದಂಪತಿ ಮಧ್ಯೆ ವಿರಸ: ವರದಕ್ಷಿಣೆಗಾಗಿ ಹಲ್ಲೆ ಮಾಡಿದ ಪತಿ ವಿರುದ್ಧ ಪತ್ನಿ ದೂರು

Views: 151
ಕನ್ನಡ ಕರಾವಳಿ ಸುದ್ದಿ: ಬೆಂಗಳೂರಿನ ರಾಮನಗರದ ಬಿಡದಿಯಿಂದ ಹನಿಮೂನಿಗೆಂದು ಉಜಿರೆಗೆ ಬಂದ ನವ ವಿವಾಹಿತ ಜೋಡಿ ವಿರಸಗೊಂಡಿದ್ದಾರೆ.
ಉಜಿರೆಯ ಹೋಟೆಲಿನಲ್ಲಿ ಉಳಿದುಕೊಂಡು ರಾತ್ರಿ ಪತ್ನಿಗೆ ವರದಕ್ಷಿಣೆ ಕೊಡುವಂತೆ ಕಿರುಕುಳ ನೀಡಿ ಹಲ್ಲೆ ನಡೆಸಿದ ಹಿನ್ನಲೆಯಲ್ಲಿ ಪತ್ನಿ ದೂರು ಕೊಟ್ಟ ಬಳಿಕ ಪತಿಯನ್ನು ಬಂಧಿಸಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.
ಬೆಂಗಳೂರಿನ ರಾಮನಗರದ ಬಿಡದಿ ಮೂಲದ ವಿಶ್ವನಾಥ (24) ಹಾಗೂ 22 ವರ್ಷದ ಆತನ ಪತ್ನಿ ಕಳೆದ ಮೇ 22 ರಂದು ಗುರು ಹಿರಿಯರ ಸಮ್ಮುಖದಲ್ಲಿ ವಿವಾಹವಾಗಿದ್ದರು. ಬಳಿಕ ಇವರು ಉಜಿರೆಗೆ ಹನಿಮೂನಿಗೆ ಬಂದು ಲಾಡ್ಜ್ ನಲ್ಲಿ ತಂಗಿದ್ದರು.
ಜುಲೈ 22 ರ ರಾತ್ರಿ ಆರೋಪಿ ಮದ್ಯಪಾನ ಮಾಡಿ ಪತ್ನಿಗೆ ವರದಕ್ಷಿಣೆ ನೀಡುವಂತೆ ಪೀಡಿಸಿ, ಹಲ್ಲೆ ಮಾಡಿ ಬಳಿಕ ಕೊಲೆಗೆ ಯತ್ನಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ಪತ್ನಿ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದು, ಆರೋಪಿ ವಿಶ್ವನಾಥನನ್ನು బంధిసి ಹಾಜರುಪಡಿಸಿದ್ದಾರೆ. ಇದೀಗ ನ್ಯಾಯಾಲಯಕ್ಕೆ ಆರೋಪಿಗೆ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.






