ಸಾಮಾಜಿಕ

ಅತ್ತೆ ಸೊಸೆ ನಡುವೆ ಜಗಳ: ತಾಯಿ-ಮಗ ಕೆರೆಗೆ ಹಾರಿ ಆತ್ಮಹತ್ಯೆ

Views: 150

ಕನ್ನಡ ಕರಾವಳಿ ಸುದ್ದಿ: ಅತ್ತೆ ಸೊಸೆ ನಡುವೆ ಜಗಳದಿಂದಾಗಿ  ತಾಯಿ ಹಾಗೂ ಮಗ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯ ಪಟ್ಟಣದ ಕಬ್ಬಳಿ ಗ್ರಾಮದ ಬಳಿ ನಡೆದಿದೆ.

ಜಯಂತಿ (60) ಹಾಗೂ ಭರತ್ (35) ಆತ್ಮಹತ್ಯೆಗೆ ಶರಣದಾವರು. ಭರತ್ 8 ತಿಂಗಳ ಹಿಂದಷ್ಟೇ ಅರಸಿಕೆರೆ ತಾಲೂಕಿನ ಬಾಗೂರನ ಗ್ರಾಮದ ಯುವತಿಯೊಂದಿಗೆ ವಿವಾಹವಾಗಿದ್ದರು. ಅತ್ತೆ-ಸೊಸೆ ನಡುವೆ ಹೊಂದಾಣಿಕೆಯಾಗದೇ ಪದೇ ಪದೇ ಜಗಳ ನಡೆಯುತ್ತಿತ್ತು.

ಇದರಿಂದ ಮನನೊಂದ ಭರತ್ ಪತ್ನಿ ಮನೆ ಬಿಟ್ಟು ತವರು ಸೇರಿದ್ದಳು. ಕುಟುಂಬದವರು, ಗ್ರಾಮದವರು ಎರಡು ಬಾರಿ ರಾಜಿ ಪಂಚಾಯ್ತಿ ಮಾಡಿದ್ದರು. ಆದಾಗ್ಯೂ ಭರತ್ ಪತ್ನಿ ತವರು ಮನೆಗೆ ಹೋದವಳು ವಾಪಾಸ್ ಆಗಿಲ್ಲ. ಇದರಿಂದ ಭರತ್ ಹಾಗೂ ಆತನ ತಾಯಿ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಹಿರಿಸಾವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related Articles

Back to top button