ಧಾರ್ಮಿಕ

ಮಣೂರು ಮಹಾಲಿಂಗೇಶ್ವರ ದೇವಸ್ಥಾನ: ಮಹಾ ಶಿವರಾತ್ರಿ ಆಚರಣೆ

Views: 25

ಕೋಟ: ಮಣೂರು ಮಹಾಲಿಂಗೇಶ್ವರ ದೇವಸ್ಥಾನ ಇಲ್ಲಿ ಮಹಾ ಶಿವರಾತ್ರಿ ಆಚರಣೆ ಅಂಗವಾಗಿ ದೇವಸ್ಥಾನದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಮಹಾಶಿವನಿಗೆ ಸಾರ್ವಜನಿಕ ಶತ ರುದ್ರಾಭಿಷೇಕ 9:30 ರಿಂದ 12:30 ರ ತನಕ ರುದ್ರಾಭಿಷೇಕ ,ಹೆರಂಬ,ಮಹಾಗಣಪತಿ ಸನ್ನಿಧಾನದಲ್ಲಿ ರಂಗಪೂಜೆ, ಶ್ರೀ ಮಹಾಲಿಂಗೇಶ್ವರನ ಸನ್ನಿಧಾನದಲ್ಲಿ ಅಗಲು ರಂಗಪೂಜೆ ವಿಶೇಷ ಕಾರ್ಯಕ್ರಮಗಳು ದೇಗುಲದ ಅಧ್ಯಕ್ಷ ಸತೀಶ್ ಹೆಚ್ ಕುಂದರ್ ನೇತೃತ್ವದಲ್ಲಿ ಜರಗಿದವು.

ಶ್ರೀ ದೇಗುಲದ ವತಿಯಿಂದ ಪನ್ಯಾರ ಪ್ರಸಾದ,ವಿಶೇಷ ಭಜನೆ ಭಾಗವಾಗಿ ಶ್ರೀ ರಾಮ ಮಹಿಳಾ ಭಜನಾ ಮಂಡಳಿ ಮಣೂರು ಇವರಿಂದ ಭಜನಾ ಕಾರ್ಯಕ್ರಮ ಜರಗಿತು.ನೂರಾರು ಭಕ್ತರು ಶ್ರೀ ದೇವರ ವಿವಿಧ ಧಾರ್ಮಿಕ ಪೂಜಾ ಕಾರ್ಯದಲ್ಲಿ ಭಾಗಿಯಾಗಿ ತಮ್ಮ ಹರಕೆ ಸೇವೆಯನ್ನು ಸಲ್ಲಿಸಿದರು. ಧಾರ್ಮಿಕ ಕಾರ್ಯಕ್ರಮದಲ್ಲಿ ಅರ್ಚಕರಾದ ರವಿ ಐತಾಳ್,ರಘುಪತಿ ಭಟ್ ,ಟ್ರಸ್ಟ್ ಸದಸ್ಯರಾದ ಅಶೋಕ್ ಶೆಟ್ಟಿ, ದಿನೇಶ್ ಆಚಾರ್,ಬಾಬು,ಅಚ್ಯುತ ಹಂದೆ,ಕೃಷ್ಣ ದೇವಾಡಿಗ,ಸುಫಲ ಶೆಟ್ಟಿ, ದಿವ್ಯ ಪ್ರಭು,ಜೀರ್ಣೋದ್ಧಾರ ಸಮಿತಿಯ ಅರುಣಾಚಲ ಮಯ್ಯ,ಶಿವರಾಮ ಶೆಟ್ಟಿ, ಎಂ.ಎನ್ ಮಧ್ಯಸ್ಥ, ಎಂ.ವಿ ಮಯ್ಯ,ನಾಗರಾಜ್ ಅಮೀನ್,ಜಯರಾಮ್ ಆಚಾರ್, ವ್ಯವಸ್ಥಾಪಕಿ ಸುಶ್ಮಿತಾ ಉಪಸ್ಥಿತರಿದ್ದರು

 

Related Articles

Back to top button