ಸಾಂಸ್ಕೃತಿಕ

‘ಚಂದ್ರಮುಖಿ ಪ್ರಾಣಸಖಿ’ ಕನ್ನಡದ ನಟಿ ಭಾವನಾ ತಾಯಿಯಾಗುತ್ತಿದ್ದಾರೆ!

Views: 131

ಕನ್ನಡ ಕರಾವಳಿ ಸುದ್ದಿ: ಕನ್ನಡ ನಟಿ, ರಾಜಕೀಯದಲ್ಲೂ ಗುರುತಿಸಿಕೊಂಡಿರುವ ಭಾವನಾ ತಾಯಿಯಾಗುತ್ತಿದ್ದಾರೆ. ಐವಿಎಫ್ ಮೂಲಕ ಅವರು ಮಗುವನ್ನು ಪಡೆಯುತ್ತಿದ್ದಾರೆ. ಗರ್ಭಿಣಿ ಆಗಿರುವ ಕುರಿತು ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.

ನಟಿಯಾಗಿ, ಕಾಂಗ್ರೆಸ್ ಪಕ್ಷದ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿರುವ ಭಾವನಾ ಅವರಿಗೆ ಸುಮಾರು 40 ವರ್ಷ ವಯಸ್ಸು. ಅವಿವಾಹಿತರಾಗಿರುವ ಅವರು ಅತ್ಯಾಧುನಿಕ ಐವಿಎಫ್ ತಂತ್ರಜ್ಞಾನದ ಮೂಲಕ ಮಗುವನ್ನು ಪಡೆಯುತ್ತಿದ್ದಾರೆ.

ಭಾರತ ನಾಟ್ಯ ಕಲಾವಿದೆಯಾಗಿರುವ ಭಾವನಾ  ಕನ್ನಡದ ‘ಚಂದ್ರಮುಖಿ ಪ್ರಾಣಸಖಿ’ ಸಿನಿಮಾ ಮೂಲಕ ಖ್ಯಾತಿಗಳಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿರುವ ಅವರು ಬಾಲಭವನದ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ.

ಭಾವನಾ ಮೊದಲು ಕಾಂಗ್ರೆಸ್ ಪಕ್ಷದಲ್ಲಿದ್ದರು. 2018ರ ವಿಧಾನಸಭೆ ಚುನಾವಣೆಗೆ ಎರಡು ದಿನಗಳು ಇರುವಾಗ ಬಿಜೆಪಿಯನ್ನು ಸೇರಿದ್ದರು. 2021ರ ನವೆಂಬರ್‌ನಲ್ಲಿ ಪುನಃ ಅವರು ಕಾಂಗ್ರೆಸ್‌ಗೆ ಮರಳಿದ್ದರು.

ಕಾಂಗ್ರೆಸ್ ಪಕ್ಷದದಲ್ಲಿ ಸಕ್ರಿಯರಾಗಿದ್ದ ಭಾವನಾ ರಾಮಣ್ಣ 2018ರ ವಿಧಾನಸಭೆ ಚುನಾವಣೆಯಲ್ಲಿ ಚಿತ್ರದುರ್ಗದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಟಿಕೆಟ್ ಸಿಗದ ಕಾರಣ ಚುನಾವಣೆಗೆ ಎರಡು ದಿನಗಳು ಇರುವಾಗ ಬಿಜೆಪಿ ಸೇರಿದ್ದರು. 2023ರ ವಿಧಾನಸಭೆ ಚುನಾವಣೆಗೂ ಮೊದಲು ಹಲವು ನಾಯಕರು ಕಾಂಗ್ರೆಸ್‌ ಸೇರಿದ್ದರು. ಭಾವನಾ ಸಹ ಆಗ ಕಾಂಗ್ರೆಸ್ ಪಕ್ಷಕ್ಕೆ ವಾಪಸ್ ಆಗಿದ್ದರು.

Related Articles

Back to top button