ಕರ್ನಾಟಕದಲ್ಲಿ BPL, APL ಕಾರ್ಡುದಾರರಿಗೆ ಉಚಿತ ಆರೋಗ್ಯ ಹೊಸ ಯೋಜನೆ ಮಾಹಿತಿ ಇಲ್ಲಿದೆ..

Views: 257
ಬೆಂಗಳೂರು, : ಸರ್ಕಾರ ಆರೋಗ್ಯದ ವಿಚಾರಕ್ಕೆ ಸಂಬಂಧಿಸಿದಂತೆ ಬಡಜನರಿಗೆ ಅನುಕೂಲವಾಗುವಂತೆ ಉತ್ತಮ ಕೆಂದ್ರ ಅರ್ಕಾರದ ಸಹಯೋಗದಲ್ಲಿ ಯೋಜನೆಗಳನ್ನು ಜಾರಿ ಮಾಡುತ್ತಿದೆ. ಇನ್ನು ಸರ್ಕಾರ ಪ್ರಧಾನಮಂತ್ರಿ ಆಯುಷ್ಮಾನ್ ಕಾರ್ಡ್ ಅನ್ನು ಜಾರಿಗೆ ತಂದಿದ್ದು, ಇದೀಹ ಕರ್ನಾಟಕದಲ್ಲಿ ಮುಖ್ಯಮಂತ್ರಿ ಆರೋಗ್ಯ ಕಾರ್ಡ್ ಎನ್ನುವ ಹೆಸರಿನಲ್ಲಿ ವಿತರಣೆ ಮಾಡಲಾಗುತ್ತಿದೆ.
ಈ ಒಂದು ಕಾರ್ಡ್ ಮೂಲಕ ಬಿಪಿಎಲ್ ಕಾರ್ಡ್ ಇದ್ದವರು 5 ಲಕ್ಷ ರೂಪಾಯಿ ಹಾಗೂ ಎಪಿಎಲ್ ಇದ್ದವರು 2 ಲಕ್ಷ ರೂಪಾಯಿಗಳವರೆಗೆ ಉಚಿತ ಆರೋಗ್ಯ ಪ್ರಯೋಜನಾ ಪಡೆದುಕೊಳ್ಳಲಿದ್ದಾರೆ. ಕೇವಲ ಸರ್ಕಾರಿ ಆಸ್ಪತ್ರೆಗಳಲ್ಲದೆ, ಕೆಲವು ಪ್ರಮುಖ ಗುರುತಿಸಲ್ಪಟ್ಟ ಖಾಸಗಿ ಆಸ್ಪತ್ರೆಗಳಲ್ಲಿಯೂ ಸಹ ಈ ಕಾರ್ಡ್ ಹೊಂದಿರುವವರು ಉಚಿತ ಚಿಕಿತ್ಸೆ ಪಡೆಯಬಹುದಾಗಿದೆ.
ಈ ಚಿಕಿತ್ಸೆಯ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ. ಈ ಯೋಚನೆಯ ಅಡಿಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವವರು 5 ಲಕ್ಷ ರೂಪಾಯಿಗಳ ಆರೋಗ್ಯ ನೆರವು ಪಡೆದುಕೊಳ್ಳುತ್ತಾರೆ. ಅದೇ ರೀತಿ ಎಪಿಎಲ್ ಕಾರ್ಡ್ ಹೊಂದಿರುವವರಿಗೆ 1.5 ಲಕ್ಷಗಳಿಂದ 2 ಲಕ್ಷ ರೂಪಾಯಿ ಚಿಕಿತ್ಸಾ ರಿಯಾಯಿತಿ ಪಡೆದುಕೊಳ್ಳಬಹುದು.
ಇದೀಗ ಆಯುಷ್ಮಾನ್ ಭಾರತ್ ಹೆಲ್ತ್ ಕಾರ್ಡ್ ಪಡೆದುಕೊಳ್ಳಲು ನೀವು ಆನ್‌ಲೈನ್‌ನಲ್ಲಿಯೇ ಅರ್ಜಿ ಸಲ್ಲಿಸಬಹುದು. ಹೇಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಹೆಲ್ತ್ ಕಾರ್ಡ್ ಪಡೆದುಕೊಳ್ಳಬಹುದು ಇಲ್ಲಿ ತಿಳಿಯಿರಿ. https://abdm.gov.in/ ಮೊದಲಿಗೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ, ನಂತರ ಹೆಲ್ತ್ ಯೋಜನೆಯ ಮುಖ್ಯಪುಟ ತೆರೆದುಕೊಳ್ಳುತ್ತದೆ. ABHA ಮೇಲೆ ಕ್ಲಿಕ್ ಮಾಡಿ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ. ನಂತರ ನಿಮ್ಮ ಮೊಬೈಲ್ ಒಂದು ಓಟಿಪಿ ಕಳುಹಿಸಲಾಗುತ್ತದೆ. ಅದನ್ನ ಇಲ್ಲಿ ನಮೂದಿಸಬೇಕು.
ಈಗ ಅರ್ಜಿ ಸಲ್ಲಿಸಲು ಅರ್ಜಿ ನಮೂನೆಯಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿದ ನಂತರ ಅಗತ್ಯವಿರುವ ದಾಖಲೆಗಳನ್ನು ಸಲ್ಲಿಸಬೇಕು. ಈ ರೀತಿ ಮಾಹಿತಿಯನ್ನು ನೀಡಿ ಅದನ್ನು ಸಬ್ಮಿಟ್ ಮಾಡುವುದಕ್ಕೂ ಮೊದಲು ಮತ್ತೊಮ್ಮೆ ಪರಿಶೀಲನೆ ಮಾಡಿ. ಆರೋಗ್ಯ ಇಲಾಖೆ ಈ ಅರ್ಜಿಯನ್ನು ಪರಿಶೀಲನೆ ಮಾಡಿ ಸರಿಯಾಗಿದ್ದರೆ ನಿಮಗೆ ಆಯುಷ್ಮಾನ್ ಕಾರ್ಡ್ ಅನ್ನು ಒದಗಿಸುತ್ತದೆ.