ಆರೋಗ್ಯ

ನೆರೆ ರಾಜ್ಯಗಳಲ್ಲಿ ಹಕ್ಕಿ ಜ್ವರ ಹಾವಳಿ: ರಾಜ್ಯದ ಗಡಿ ಜಿಲ್ಲೆಗಳಲ್ಲಿ  ಕಟ್ಟೆಚ್ಚರ! 

Views: 50

ಕನ್ನಡ ಕರಾವಳಿ ಸುದ್ದಿ: ನೆರೆ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ H5N1 (ಹಕ್ಕಿ ಜ್ವರ) ವೈರಸ್ ವೇಗವಾಗಿ ಹರಡುತ್ತಿದ್ದು, ಈಗ ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಆತಂಕದ ಛಾಯೆ ಆವರಿಸಿದೆ. ತಮಿಳುನಾಡಿನಲ್ಲಿ ಈಗಾಗಲೇ 1,500ಕ್ಕೂ ಹೆಚ್ಚು ಕಾಗೆಗಳು ಬಲಿಯಾಗಿರುವುದು ಪರಿಸ್ಥಿತಿಯ ಗಂಭೀರತೆಗೆ ಕೈಗನ್ನಡಿಯಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಪಶುಸಂಗೋಪನಾ ಇಲಾಖೆಯು ಗಡಿ ಭಾಗದ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ನಿಗಾ ವಹಿಸುವಂತೆ ಸೂಚನೆ ನೀಡಿದೆ.

ಇದು ಪಕ್ಷಿಗಳಲ್ಲಿ ಕಾಣಿಸಿಕೊಳ್ಳುವ ತೀವ್ರ ಸ್ವರೂಪದ ಸಾಂಕ್ರಾಮಿಕ ರೋಗ, ಸೋಂಕಿತ ಪಕ್ಷಿಗಳ ಲಾಲಾರಸ, ಮಲ ಅಥವಾ ನೇರ ಸಂಪರ್ಕದಿಂದ ಇದು ಮನುಷ್ಯರಿಗೂ ಹರಡಬಲ್ಲದು. ವಿಶೇಷವಾಗಿ ಪೌಲ್ಟ್ರಿ ಫಾರಂ ಹಾಗೂ ವೆಟರ್ನರಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಈ ಸೋಂಕು ತಗುಲುವ ಅಪಾಯ ಹೆಚ್ಚಿದೆ.

ಸೋಂಕಿನ ಲಕ್ಷಣಗಳೇನು?

ಸೋಂಕಿತ ಹಕ್ಕಿಯ ಸಂಪರ್ಕಕ್ಕೆ ಬಂದ 4 ರಿಂದ 6 ದಿನಗಳಲ್ಲಿ ಈ ಕೆಳಗಿನ ಲಕ್ಷಣಗಳು ಕಾಣಿಸಿಕೊಳ್ಳಬಹುದು:

ತೀವ್ರ ಜ್ವರ, ಕೆಮ್ಮು ಮತ್ತು ಗಂಟಲು ನೋವು.

ಉಸಿರಾಟದ ತೊಂದರೆ ಮತ್ತು ನ್ಯೂಮೋನಿಯಾ.

ಕಣ್ಣು ಕೆಂಪಾಗುವುದು ಹಾಗೂ ಕಿರಿಕಿರಿ.

ತಲೆನೋವು, ಸ್ನಾಯು ನೋವು ಮತ್ತು ವಿಪರೀತ ಆಯಾಸ.

Related Articles

Back to top button
error: Content is protected !!