ಆರೋಗ್ಯ
ಬೈಂದೂರು: ಅನ್ನಭಾಗ್ಯ ಅಕ್ಕಿ ಅಕ್ರಮ ದಾಸ್ತಾನು ಪ್ರಕರಣ ದಾಖಲು
Views: 63
ಕನ್ನಡ ಕರಾವಳಿ ಸುದ್ದಿ: ವಿನಯಕುಮಾರ್ ಆಹಾರ ನಿರೀಕ್ಷಕರು ಬೈಂದೂರು ತಾಲೂಕು ಇವರಿಗೆ ಬಿಜೂರು ಗ್ರಾಮದ ಹರಕೇರಿ ಎಂಬಲ್ಲಿ ಆರೋಪಿಗಳಾದ ಅಬ್ದುಲ್ ಮಜೀದ ಮತ್ತು ಐಶಾ ವಾಸೀಂ ಇವರು KA-15-8917 ಮೂರು ಚಕ್ರದ ಗೂಡ್ಸ್ ಗಾಡಿಯಲ್ಲಿ ಅಕ್ರಮವಾಗಿ ಉಚಿತ ಅನ್ನ ಭಾಗ್ಯ ಯೋಜನಗೆ ಸಂಬಂಧಿಸಿದ ಅಕ್ಕಿಯನ್ನು ದಾಸ್ತಾನು ಇರಿಸಿರುವ ಬಗ್ಗೆ ಮಾಹಿತಿ ದೊರೆತ ಮೇರೆಗೆ ದಿನಾಂಕ 07/03/2026 ರಂದು ಬೆಳಿಗ್ಗೆ 9:30 ಗಂಟೆಗೆ ದಾಳಿ ನಡೆಸಿ ಆರೋಪಿಗಳು ಉಚಿತ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಅಕ್ಕಿಯನ್ನು ಯಾರಿಂದಲೋ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ದಾಸ್ತಾನು ಇರಿಸಿಕೊಂಡಿದ್ದ ಒಟ್ಟು 400 ಕೆ ಜಿ ತೂಕದ ರೂಪಾಯಿ 9200/- ಮೌಲ್ಯದ 15 ಪಾಲಿಥಿನ ಚೀಲ ಅಕ್ಕಿ ತುಂಬಿರುವ ಚೀಲಗಳನ್ನು ಸ್ವಾದೀನಪಡಿಸಿಕೊಂಡು ತಲ್ಲೂರು TAMPMC ಗೋಡಾಮಿಗೆ ಇರಿಸಿರುವುದಾಗಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 23/2026 ಕಲಂ: 3, 6, 7 ರಂತೆ ಪ್ರಕರಣ ದಾಖಲಾಗಿರುತ್ತದೆ






