ಆರೋಗ್ಯ

ಥಾಣೆಯಲ್ಲಿ ಪದ್ಮಶಾಲಿ ಸಮಾಜ ಸೇವಾ ಸಂಘದ ವತಿಯಿಂದ ವಿಶ್ವ ಯೋಗ ದಿನಾಚರಣೆ

Views: 92

ಕನ್ನಡ ಕರಾವಳಿ ಸುದ್ದಿ: ಪದ್ಮಶಾಲಿ ಸಮಾಜದ ಮಹಿಳಾ ಬಳಗದವರು ಜೂನ್ 21ರದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಪದ್ಮಶಾಲಿ ಕಲಾಭವನ, ವಾಕ್ಸಿಲ್ ರೋಡ್, ಘೋಡ್ ಬಂದರ್ ಥಾಣೆಯಲ್ಲಿ ಆಚರಿಸಿದರು.

ಕಾರ್ಯಕ್ರಮವು ಬೆಳಿಗ್ಗೆಯಿಂದ ಶ್ರೀ ಗಣರಾಯರಿಗೆ ವಂದಿಸಿ, ಕುಲದೇವರಾದ ಶ್ರೀ ವೀರಭದ್ರ, ಮಹಮ್ಮಾಯಿ ಹಾಗೂ ಶ್ರೀ ದುರ್ಗಾಪರಮೇಶ್ವರಿ ದೇವರಿಗೆ ಪ್ರಾರ್ಥನೆ ಸಲ್ಲಿಸಿ ಭಜನೆಯ ಮೂಲಕ ಪ್ರಾರಂಭಗೊಂಡಿತು.

ವೇದಿಕೆಯಲ್ಲಿ ಸಂಘದ ಅಧ್ಯಕ್ಷ ಕೃಷ್ಣಾನಂದ ಎಮ್. ಶೆಟ್ಟಿಗಾರ್, ಸೊಸ್ಕಾಟಿಯ ಸಭಾಪತಿಯವರಾದ ಶಿವಾನಂದ ಆ‌ರ್. ಶೆಟ್ಟಿಗಾರ್, ಮಹಿಳಾ ಬಳಗದ ಪ್ರಮುಖರಾದ ಪ್ರಮೀಳಾ ಎಂ. ಶೆಟ್ಟಿಗಾರ್, ಯುವ ಸಮಿತಿಯ ಅಧ್ಯಕ್ಷೆ ದಿವ್ಯಾ ಜೆ. ಶೆಟ್ಟಿಗಾರ್, ಪದ್ಮಶಾಲಿ ಕಲಾ ಭವನದ ಕಾರ್ಯಾಧ್ಯಕ್ಷ ಉತ್ತಮ್ ಎ. ಶೆಟ್ಟಿಗಾರ್ ಮತ್ತು ಯೋಗ ತಜ್ಞೆ ಜಯಶ್ರೀ ಎ. ಶೆಟ್ಟಿಗಾರ್ ಉಪಸ್ಥಿತರಿದ್ದರು.

ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪ್ರಾರ್ಥನೆ ಗೀತೆಯನ್ನು ಮಹಿಳಾ ಬಳಗದ ಉಮಾ, ರೇಖಾ ಮತ್ತು ಇಂದಿರಾ ಹಾಡಿದರು. ಮಹಿಳಾ ಬಳಗದ ಕಾರ್ಯದರ್ಶಿ ತಾರಾ ಶೆಟ್ಟಿಗಾರ್ ಸ್ವಾಗತಿಸಿದರು. ಯೋಗ ತಜ್ಞೆ ಜಯಶ್ರೀ ಶೆಟ್ಟಿಗಾರ್ ಪರಿಚಯವನ್ನು ಶಶಿತಾ ನೀಡಿದರು. ಈ ಸಂದರ್ಭದಲ್ಲಿ ಪದ್ಮಶಾಲಿ ಸಮಾಜದ ಸದಸ್ಯರು ಹಾಗೂ ಅವರ ಕುಟುಂಬದವರು ಸೇರಿ ಸುಮಾರು 70 ಮಂದಿ ಪಾಲ್ಗೊಂಡು ಜಯಶ್ರೀ ಶೆಟ್ಟಿಗಾ‌ರ್ ಮಾರ್ಗದರ್ಶನದಲ್ಲಿ ವಿವಿಧ ರೀತಿಯ ಯೋಗಾಭ್ಯಾಸ ಮಾಡಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರೂ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಮೀಳಾ ಎಂ. ಶೆಟ್ಟಿಗಾರ್ ಕಾರ್ಯಕ್ರಮವನ್ನು ನಿರೂಪಿಸಿ, ಕಾರ್ಯಕ್ರಮಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿ, ಮುಂದಕ್ಕೂ ಹೀಗೆ ಸಹಕಾರ, ಪ್ರೋತ್ಸಾಹ ನೀಡುವಂತೆ ಆಶಿಸಿದರು.

ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಯುವ ಸಮಿತಿಯ ಮೈನಾ, ಅಭಿಲಾಷ್, ವಿಶಾಲ್, ದೀಪಕ್ ಎಸ್., ವಿದ್ಯಾ ಎಚ್., ಹರ್ಷ್, ಪ್ರಕೃತಿ, ಮನೀಷ್ ಹಾಗೂ ಮಾನಸಿ ಸಹಕರಿಸಿದರು. ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಚರಿಸಿದ್ದಕ್ಕಾಗಿ ಮಹಿಳಾ ಬಳಗ ಮತ್ತು ಯುವ ಸಮಿತಿಯವರಿಗೆ ಸಂಘದ ಅಧ್ಯಕ್ಷ ಕೃಷ್ಣಾನಂದ ಎಮ್. ಶೆಟ್ಟಿಗಾರ್ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಎರಡೂ ಕಾರ್ಯಕ್ರಮಗಳ ನಂತರ ಚಹಾ-ತಿಂಡಿಯ ವ್ಯವಸ್ಥೆಯನ್ನು ಮಾಡಲಾಗಿತ್ತು.

Related Articles

Back to top button
error: Content is protected !!