ಆರೋಗ್ಯ

ಶುದ್ಧ ಗಾಳಿ, ಮನೋಲ್ಲಾಸಕ್ಕಾಗಿ : ತುಳಸಿ ಪ್ರಾಣಾಯಾಮ

Views: 3

ಕುಂದಾಪುರ: ಮನೆಯ ಮುಂದೆ ತುಳಸಿ ಗಿಡ ಇದ್ದರೆ, ಅದೊಂದು ದೈವಿಕ ಚಿಹ್ನೆ. ಹಾಗೆಯೇ ಆರೋಗ್ಯದ ಭರವಸೆ ಕೂಡ. ಪುರಾತನ ಕಾಲದಿಂದಲೂ ಪವಿತ್ರ ಸಸ್ಯಗಳಲ್ಲಿ ಒಂದಾದ ಆರೋಗ್ಯ ಸಂರಕ್ಷಕ ರೋಗ ನಿವಾರಕ ಗುಣಗಳನ್ನು ಪಡೆದ ಈ ಸಸ್ಯದಿಂದ ಬೀಸುವ ಗಾಳಿ ನೇರವಾಗಿ ಮನೆ ಪ್ರವೇಶಿಸಿದರೆ ಸ್ವಚ್ಚ ಆರೋಗ್ಯದಾಯಕ. ಆದ್ದರಿಂದ ಮನೆಯ ಮುಂದೆ ತುಳಸಿಗಿಡ ಇರಬೇಕೆಂಬುದು ಇದೇ ಕಾರಣ.ವಾಯು ಮಾಲಿನ್ಯದಿಂದ ಆಮ್ಲಜನಕದ ಕೊರತೆ ಎದುರಿಸುತ್ತಿರುವ ಇಂದಿನ ವ್ಯವಸ್ಥೆಯಲ್ಲಿ ಕೃತಕ ಆಮ್ಲಜನಕಕ್ಕೆ ಮೊರೆ ಹೋಗಿರುವ ಜನರಿಗಾಗಿ ಇದೊಂದು ನೂತನ ಪ್ರಯೋಗ ಎಂಬAತೆ ಕುಂದಾಪುರ ತಾಲೂಕಿನ ಹೂವಿನಕೆರೆ ವಾದಿರಾಜ ಮಠದ ರಸ್ತೆಯ ಪಕ್ಕದಲ್ಲಿರುವ ಶಮಿತ್ ಶೆಟ್ಟಿಗಾರ ಎಂಬುವವರ ಮನೆಯ ಎದುರುಗಡೆ ಮರದ ಕಟ್ಟೆಯನ್ನು ಕಟ್ಟಿ ಅದರ ಕೆಳಗೆ ೩ ಅಡಿ ಆಗಲ ಸುತ್ತಳತೆ ಜಾಗವನ್ನು ಬಿಟ್ಟು ೧೨೦ ಕೃಷ್ಣ ತುಳಸಿ ಗಿಡವನ್ನು ಬೆಳೆಸಿ ಪ್ರತಿದಿನ ಬೆಳಿಗ್ಗೆ ಬ್ರಾಹ್ಮೀ ಮಹೂರ್ತದಲ್ಲಿ ಒಂದು ಗಂಟೆಯ ಕಾಲ ಪ್ರಾಣಾಯಾಮವನ್ನು ಕಳೆದ ೧೨ ವರ್ಷಗಳಿಂದ ದೊಡ್ಡವರಿಂದ ಹಿಡಿದು ಮಕ್ಕಳು ಕೂಡ ಈ ಕಟ್ಟೆಯಲ್ಲಿ ಕುಳಿತುಕೊಂಡು ಪ್ರಾಣಾಯಾಮದಿಂದ ಶುದ್ಧ ಗಾಳಿ ಪಡೆಯುತ್ತಿದ್ದಾರೆ. ಪ್ರಾಣಾಯಾಮದಲ್ಲಿ ಸಾಕಷ್ಟು ವಿಧಗಳಿದ್ದು, ಈಗದಕ್ಕೆ ಹೊಸ ಸೇರ್ಪಡೆ ತುಳಸಿ ಪ್ರಾಣಾಯಾಮ.
ಆಮ್ಲಜನಕವನ್ನು ಒಝೊನ್ ಆಗಿ ಪರಿವರ್ತನೆಯಾಗುವ ಗಿಡಗಳು ಬೆಳಿಗ್ಗೆ ಕಾರ್ಬನ್ ಡೈ ಆಕ್ಸೆöÊಡ್ ತೆಗೆದುಕೊಂಡು ಆಕ್ಸಿಜನ್ ಬಿಡುಗಡೆಮಾಡುವ ಸಂದರ್ಭದಲ್ಲಿ ಈ ತುಳಸಿಯಿಂದ ಹೊರಡುವ ಎಲ್ಲಾ ಔಷದಿಯ ಅಂಶಗಳು ಮನುಷ್ಯನ ಶರೀರವನ್ನು ಪ್ರವೇಶಿಸಿ ಬೇರೆ ಬೇರೆ ಅವಯವಗಳಿಂದ ಉತ್ವನ್ನವಾಗುವ ಕಾಬೋನಿಕ್ ಗ್ಯಾಸ್‌ನ್ನು ಹೊರಹಾಕುತ್ತದೆ. ಆಗ ಸುಲಭವಾಗಿ ದೇಹದಲ್ಲಿ ರಕ್ತ ಪರಿಚಲನಾ ಕಾರ್ಯ ಸುಗಮವಾಗಿ ಆಗುವುದರಿಂದ ಪ್ರಾಣಾಯಾಮದಲ್ಲಿ ಉಸಿರಿನ ಮೇಲೆ ಹೆಚ್ಚಿನ ಗಮನ ನೀಡಿದರೆ ಚೇತನ,ಕಂಪನ, ಸ್ಪಂದನಾ ಶಕ್ತಿ ಶರೀರದಲ್ಲಿ ಚೈತನ್ಯ ಉಂಟುಮಾಡುವ ಸಪ್ತ ಚಕ್ರಗಳ ಮೂಲಕ ಭಾವನೆ, ಭಾವೋದ್ವೇಗ, ಆಲೋಚನೆ ನಾಡಿಗಳ ಮೂಲಕ ಹರಿದಾಗ ಶರೀರ ರೋಮಾಂಚನವಾಗುತ್ತದೆ.ಆರ್ಯುರ್ವೇದಲ್ಲಿ ಹೇಳಿರುವ ಪ್ರಕಾರ ಎಲ್ಲಾ ರೋಗಗಳಿಗೆ ಕಾರಣವಾಗಿರುವ ವಾತ ,ಪಿತ್ತ, ಕಫ ನಿವಾರಣೆ ಯಾಗುತ್ತದೆ ಶರೀರ, ಮನಸ್ಸು, ಇಂದ್ರಿಯದ ಕಲ್ಮಶಗಳು ಮಾಯವಾಗಿ ಚಿಂತೆ, ಕ್ರೋಧ,ನಿರಾಶೆ, ಖಿನ್ನತೆ ಭಯ ಮುಂತಾದ ಮನೋವಿಕಾರಗಳಿಗೆ ಸಮಧಾನ ನೀಡುತ್ತದೆ.ಅಂತರAಗ ಶುದ್ಧಿಯಾಗಿ ಬಹಿರಂಗದಲ್ಲಿ ನಲಿವು ಮತ್ತು ಗೆಲುವು ಜಾಸ್ತಿಯಾಗುತ್ತದೆ. ಆಗ ನಮ್ಮ ಕಡೆ ಕೊಂಡೊಯ್ಯುವ ಗುರುತ್ವಾ ಜಾಗೃತೆಗೊಂಡು ಮನೋಬಲ ವೃದ್ಧಿಯಿಂದ ನಾವು ಬಯಸಿದ್ದನ್ನು ಪಡೆಯ ಬಹುದು ಎಂಬುವುದು ಇವರು ಕಂಡು ಕೊಂಡ ವಿಚಾರವಾಗಿದೆ.
ತುಳಸಿ ಪುರಾಣ
ಸಮುದ್ರ ಮಥನ ಕಾಲದಲ್ಲಿ ಅಮೃತವನ್ನು ಪಡೆಯಲು ದೇವತೆಗಳಿಗೆ ಮತ್ತು ದಾನವರ ನಡುವೆ ಯುದ್ಧ ನಡೆಯಿತು. ಆಗ ಹೊರಗೆ ಬಿದ್ದ ಅಮೃತ ಬಿಂದುಗಳಿAದ ತುಳುಸಿ ವೃಕ್ಷ ಜನಿಸಿತೆಂಬ ಪ್ರತೀತಿ ಇದೆ.ಯಾವ ಮನೆಯಲ್ಲಿ ತುಳುಸಿ ಇದೆಯೋ ಅಲ್ಲಿ ಅನಿಷ್ಟ ಆಗಮಿಸಲು ಹೆದರುತ್ತದೆ. ಭೂತ, ಪ್ರೇತ, ದುಷ್ಟ ಶಕ್ತಿಗಳು ಮನೆಬಾಗಿಲಿಗೆ ಸುಳಿಯುದಿಲ್ಲ.

ತುಳಸಿ ಓಸಿಯಂ ಸ್ಯಾಂಕ್ಟA ಎಂಬ ಸಸ್ಯನಾಮ ಹೊಂದಿದ್ದು, ಲ್ಯಾಮಿಯೇಸಿಯ ಕುಟುಂಬದಲ್ಲಿ ಬರುತ್ತದೆ. ಸೇಕ್ರೆಡ್ ಬೆಸಿಲ್, ಹೋಲಿಬೆಸಿಲ್ ಎಂದು ಇಂಗ್ಲೀಷಿನಲ್ಲಿ ಕರೆದರೆ, ಸಂಸ್ಕೃತದಲ್ಲಿ ದೇವದುಂದುಬಿ, ಗ್ರಾಮ್ಯ, ಸುರಸಾ, ಭೂತಘ್ನಿ, ಬಹುಮಂಜರಿ ಎಂದು ಕರೆಯುತ್ತಾರೆ.
ಆರೋಗ್ಯ ತುಳಸಿ:
*ಎಲ್ಲಾ ರೋಗಗಳಿಗೆ ಮೂಲ ಕಾರಣವಾಗಿರುವ ವಾತ,ಪಿತ್ತ, ಕಫ,ಕೆಮ್ಮುಗಳಿಗೆ ರಾಮಭಾಣವಾಗಿ ಕೆಲಸಮಾಡುತ್ತದೆ.
*ತುಳಸಿಯ ಎಲೆ, ಬೇರು, ಬೀಜಗಳಿಂದ ಔಷಧವಾಗಿ ಬಳಸುವ ಇದರಲ್ಲಿ ಖಾರ,ಕಹಿ,ರಸ, ಉಷ್ಣಗುಣಗಳಿರುವುದರಿಂದ ಕಾಮಾಲೆ, ದಮ್ಮು, ನೋವು. ಊತ, ಮಲೇರಿಯಜ್ವರ, ಚರ್ಮರೋಗ, ಹೊಟ್ಟೆ ಸಂಬAಧಿ ಸಮಸ್ಯೆಗೆ ಶೀಘ್ರ ಪರಿಹಾರ ನೀಡುವುದಲ್ಲದೆ ದೇಹದಲ್ಲಿರುವ ವಿಷಾಣುಗಳನ್ನು ಹೊರಹಾಕುತ್ತದೆ.
ಮುಖದ ಕಾಂತಿ, ನವ ಚೈತನ್ಯಕ್ಕಾಗಿ:
ಡಾ. ಮೋಲ್ಡಿಂಗ್ ಮತ್ತು ಪೊಲೋನಾ ಎಂಬುವವರ ಪ್ರಕಾರ ಸುತ್ತ ಮುತ್ತಲಿನ ಗಾಳಿಯನ್ನು ಶದ್ಧೀಕರಿಸಿ ಆಮ್ಲಜನಕವನ್ನು ಓಝೋನ್‌ಆಗಿ ಪರಿವರ್ತಿಸುತ್ತದೆ. ಇದರ ಗಾಳಿ ಸದಾ ಮನೆಯೊಳಗೆ ಬೀಸುತ್ತಿದ್ದರೆ ಮನಕ್ಕೆ ಶಾಂತಿ, ಚೈತನ್ಯ ನೀಡಿ ಆಯಾಸ ಕಡಿಮೆ ಮಾಡುತ್ತದೆ.
* ಸ್ನಾನದ ನೀರಿಗೆ ತುಳಸಿ ಎಲೆಯನ್ನು ಸೇರಿಸಿ ಸ್ನಾನ ಮಾಡುವುದರಿಂದ ಚರ್ಮಕ್ಕೆ ಹಿತವಾಗಿ ದೇಹ ಮನಸ್ಸು ಉಲ್ಲಾಸ ನೀಡುತ್ತದೆ.
*ಮುಖಕ್ಕೆ ತುಳಸಿ ರಸವನ್ನು ಲೇಪಿಸಿಕೊಂಡು ನಂತರ ಸ್ನಾನ ಮಾಡಿದರೆ ಮೊಡವೆ ನಿವಾರಣೆಯಾಗಿ ಮುಖದ ಕಾಂತಿ ವೃದ್ಧಿಸುತ್ತದೆ. ಶಾಸ್ತಿçÃಯ ಉಲ್ಲೇಖ: ಸ್ಕಂದ ಪದ್ಮ ಪುರಾಣದಲ್ಲಿರುವ `ತುಳಸಿ ಕವಚೆಂ’ ಸ್ತೋತ್ರದಲ್ಲಿ ತುಳಸಿ ವನದಲ್ಲಿ ದ್ಯಾನ ಮಾಡಿದರೆ ಆರೋಗ್ಯವು ಸೇರಿದಂತೆ ಎಲ್ಲಾ ಬಗೆಯ ಇಷ್ಟಾರ್ಥಗಳು ಫಲಪ್ರದವಾಗುತ್ತದೆ ಎಂದಿದೆ.

-ಸುಧಾಕರ ವಕ್ವಾಡಿ

Related Articles

Back to top button