ಜನಮನ
ಎಲ್‌ಪಿಜಿ ಸಾಗಾಟ ‘ಶಿವಾಲಿಕ್’ ಹಡಗು ಶೀಘ್ರ ಮಂಗಳೂರಿನತ್ತ ಪಯಣ?
Views: 36
ಕನ್ನಡ ಕರಾವಳಿ ಸುದ್ದಿ: ಇರಾನ್ ಹಾರ್ಮುಜ್ ಜಲಮಾರ್ಗ ಬಿಕ್ಕಟ್ಟಿನ ಸಂದರ್ಭ ಭಾರೀ ಸುದ್ದಿ ಮಾಡಿದ್ದ ಎಲ್‌ಪಿಜಿ ಸಾಗಾಟದ ‘ಶಿವಾಲಿಕ್’ ಹಡಗು ಸೋಮವಾರ ಗುಜರಾತ್ ನ ಮುಂದ್ರಾ ಬಂದರಿನ ಎಲ್‌ಪಿಜಿ ಟರ್ಮಿನಲ್‌ಗೆ ಸುರಕ್ಷಿತವಾಗಿ ಆಗಮಿಸಿದ್ದು, 26,000 ಮೆಟ್ರಿಕ್ ಟನ್ ಎಲ್‌ಪಿಜಿ ಹೇರಿಕೊಂಡು ಮಂಗಳೂರಿಗೆ ಹೊರಡುವ ಸಿದ್ಧತೆಯಲ್ಲಿದೆ.
ಭಾರತೀಯ ತೈಲ ನಿಗಮ ಲಿಮಿಟೆಡ್ ನೇತೃತ್ವದಲ್ಲಿ ‘ಶಿವಾಲಿಕ್’ ಹೆಸರಿನ ಹಡಗಿನ ಮೂಲಕ ಎಲ್‌ಪಿಜಿ ಸಾಗಾಟವಾಗುತ್ತಿದೆ.
ಹಾರ್ಮುಜ್ ಜಲಮಾರ್ಗವಾಗಿ ಬಂದ ಈ ಹಡಗಿನಲ್ಲಿ ಒಟ್ಟು 46,000ಮೆಟ್ರಿಕ್ ಟನ್ ಎಲ್‌ಪಿಜಿ ಸಾಗಾಣಿಕೆ ಮಾಡಲಾಗಿದೆ. ಇದರಲ್ಲಿ ಸುಮಾರು 20,000 ಮೆಟ್ರಿಕ್ ಟನ್ ಎಲ್‌ಪಿಜಿಯನ್ನು ಮುಂದ್ರಾ ಬಂದರಿನಲ್ಲಿ ಇಳಿಸಲಾಗುವುದು. ಉಳಿದ 26,000 ಮೆಟ್ರಿಕ್ ಟನ್ ಎಲ್‌ಪಿಜಿಯನ್ನು ನ್ಯೂ ಮಂಗಳೂರು ಬಂದರಿನ ಸಮುದ್ರದಲ್ಲಿರುವ ಸಿಂಗಲ್ ಪಾಯಿಂಟ್ ಮೂರಿಂಗ್ ಸೌಲಭ್ಯದಲ್ಲಿ ಇಳಿಸಲು ಯೋಜಿಸಲಾಗಿದೆ.






