ಇತರೆ

FDA ಪರೀಕ್ಷೆ ಅಕ್ರಮ ಪ್ರಕರಣ: ಕಿಂಗ್​ಪಿನ್ ಆರ್.ಡಿ ಪಾಟೀಲ್ ಕೊನೆಗೂ ಅರೆಸ್ಟ್​

Views: 0

ಬೆಂಗಳೂರು: ಇಷ್ಟು ದಿನಗಳಿಂದ ತಲೆ ಮರೆಸಿಕೊಂಡಿದ್ದ ಎಫ್​ಡಿಎ ಪರೀಕ್ಷೆ ಅಕ್ರಮದ ಕಿಂಗ್​ಪಿನ್ ಆರ್​.ಡಿ ಪಾಟೀಲ್ ಅವರನ್ನು ಪೊಲೀಸರು ಕೊನೆಗೂ ಅರೆಸ್ಟ್​ ಮಾಡಿದ್ದಾರೆ.

ಪರೀಕ್ಷಾ ಕಳ್ಳಾಟದ ಕಿಂಗ್​ಪಿನ್ ಆರ್​.ಡಿ ಪಾಟೀಲ್ ಮಹಾರಾಷ್ಟ್ರದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಸದ್ಯ ಆರ್​ಡಿ ಪಾಟೀಲ್​​ನನ್ನು ಕಲಬುರಗಿಗೆ ಪೊಲೀಸರು ಕರೆ ತರುತ್ತಿದ್ದಾರೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪರೀಕ್ಷೆಯ ಪ್ರಮುಖ ಆರೋಪಿ ಆರ್.​ಡಿ ಪಾಟೀಲ್. ಈತನಿಗಾಗಿ ಪೊಲೀಸರು ಹಲವು ದಿನಗಳಿಂದ ಹುಡುಕಾಟ ನಡೆಸುತ್ತಿದ್ದರು. ಈತನಿಗೆ ಫ್ಲ್ಯಾಟ್ ಮಾಲೀಕ ಮತ್ತು ಮ್ಯಾನೇಜರ್ ಓರ್ವ ರಕ್ಷಣೆ ನೀಡಿದ್ದರು ಎನ್ನಲಾಗಿತ್ತು. ಇವರಿಬ್ಬರನ್ನು ಸಹ ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಈ ಬೆನ್ನಲ್ಲೇ ಮಹಾರಾಷ್ಟ್ರಕ್ಕೆ ತೆರಳಿ ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ.

Related Articles

Back to top button
error: Content is protected !!