ಇತರೆ
ವಿಶ್ವೇಶ್ವರಯ್ಯ ನಾಲೆಗೆ ಉರುಳಿ ಬಿದ್ದ ಕಾರು– ಮಗು ಸೇರಿ ಐವರು ಸಾವು

Views: 0
ಕನ್ನಡ ಕರಾವಳಿ ಈ ಕ್ಷಣದ ಸುದ್ಧಿ,
ಮಂಡ್ಯ: ಪಾಂಡವಪುರ ತಾಲ್ಲೂಕು ಬನಘಟ್ಟ ಬಳಿ ಮಂಗಳವಾರ ಕಾರೊಂದು ವಿಶ್ವೇಶ್ವರಯ್ಯ ನಾಲೆಗೆ ಉರುಳಿ ಬಿದ್ದು ಮಗುಸೇರಿ ಐವರು ಮೃತಪಟ್ಟಿದ್ದಾರೆ.
ತುಂಬಿ ಹರಿಯುತ್ತಿದ್ದ ನಾಲೆಗೆ ಕಾರು ಉರಿಳಿದ್ದು ಸಂಪೂರ್ಣವಾಗಿ ಮುಳುಗಿದೆ. ಮೃತಪಟ್ಟವರ ಗುರುತು ಪತ್ತೆಯಾಗಿಲ್ಲ.
ಕಾರು ಮೈಸೂರಿನಿಂದ ನಾಗಮಂಗಲ ಕಡೆಗೆ ಹೊರಟಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ವಿವರ ಇನ್ನಷ್ಟೇ ತಿಳಿಯಬೇಕಾಗಿದೆ.






