ಇತರೆ

ದೀಪಾವಳಿಗೆ ಸ್ಪೆಷಲ್ ಬಸ್ ಸೇವೆ ಘೋಷಿಸಿದ KSRTC 

Views: 0

ಬೆಂಗಳೂರು:KSRTC ವಿಶೇಷ ಬಸ್‌ಗಳು ನವೆಂಬರ್ 10 ರಿಂದ 12 ರವರೆಗೆ ಬೆಂಗಳೂರಿನಿಂದ ವಿವಿಧ ಊರುಗಳಿಗೆ ಸಂಚರಿಸಲಿವೆ.

ನವೆಂಬರ್ 14 ರಿಂದ 15 ರವರೆಗೆ ವಿವಿಧ ಊರುಗಳಿಂದ ಮತ್ತು ಅಂತರ್ ರಾಜ್ಯಗಳಿಂದ ಬೆಂಗಳೂರಿಗೆ ವಾಪಸ್ ಬಸ್ ಸೇವೆ ಇರಲಿದೆ ಎಂದು KSRTC ಮಾಹಿತಿ ನೀಡಿದೆ.

ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್ ಮುಂತಾದೆಡೆಗೆ ವಿಶೇಷ ಬಸ್‌ಗಳು ಕಾರ್ಯನಿರ್ವಹಿಸಲಿವೆ.

ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ವಿಶೇಷ ಬಸ್ಗಳು ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರಕ್ಕೆ ಬಸ್ಗಳು ಇರಲಿದೆ

BMTC ಬಸ್ ನಿಲ್ದಾಣ ಶಾಂತಿನಗರದಿಂದ ಮಧುರೈ, ಕುಂಭಕೋಣಂ, ಚೆನ್ನೈ, ಕೊಯಮತ್ತೂರು ಮತ್ತು ತಮಿಳುನಾಡು ಮತ್ತು ಕೇರಳದ ಇತರ ಸ್ಥಳಗಳಿಗೆ ವಿಶೇಷ ಬಸ್ ಳನ್ನು ಒದಗಿಸಲಾಗಿದೆ.

ದೀಪಾವಳಿ ಸಮಯದಲ್ಲಿ ಪ್ರಯಾಣಿಕರಿಗೆ ತೊಂದರೆ-ಮುಕ್ತ ಸೇವೆಗಳನ್ನು ಒದಗಿಸುವ ಪ್ರಯತ್ನದಲ್ಲಿ, KSRTC ಶನಿವಾರ ಹಬ್ಬದ ಸೀಸನ್ಗಾಗಿ ಹೆಚ್ಚುವರಿ 2,000 ಬಸ್ ಸೇವೆಗಳನ್ನು ಘೋಷಿಸಿದೆ.

Related Articles

Back to top button
error: Content is protected !!