ಇತರೆ

ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ, ಅತ್ಯಾಚಾರವೆಸಗಿದ ಯುವತಿಗೆ 2 ಕೋಟಿ ವಂಚನೆ

Views: 0

ಚಿತ್ರದುರ್ಗ: ಅಮೆರಿಕದ ಮಲ್ಟಿನ್ಯಾಷನಲ್ ಕಂಪನಿಯೊಂದರಲ್ಲಿ ಉನ್ನತ ಹುದ್ದೆ ಕೊಡಿಸುವುದಾಗಿ ಯುವತಿಯನ್ನು ನಂಬಿಸಿ, ಕೋಟಿಗಟ್ಟಲೆ ಹಣ ಪಡೆದು ವಂಚಿಸಿದ್ದಲ್ಲದೇ ಸತತ 4 ವರ್ಷಗಳಿಂದ ಪ್ರೀತಿಸುವ ನಾಟಕವಾಡಿ, ಅತ್ಯಾಚಾರವೆಸಗಿದ್ದಾನೆಂದು ಆರೋಪಿಸಿರುವ ಘಟನೆ ಚಿತ್ರದುರ್ಗದಲ್ಲಿ ಬೆಳಕಿಗೆ ಬಂದಿದೆ.

ಉದ್ಯೋಗದ ಆಸೆಗೆ ಯುವಕನಿಂದ ಮೋಸ ಹೋಗಿ ನ್ಯಾಯಕ್ಕಾಗಿ ಚಿತ್ರದುರ್ಗದ ಯುವತಿ ಅಲೆದಾಡುತ್ತಿದ್ದಾರೆ. 2019 ರಲ್ಲಿ ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಚಿತ್ರದುರ್ಗ ಮೂಲದ ಸೌರಭ್ ಎಂಬ ಯುವಕನ ಪರಿಚಯವಾಗಿದ್ದು, ಇಬ್ಬರ ಮಧ್ಯೆ ಪರಸ್ಪರ ಸ್ನೇಹ, ಆತ್ಮೀಯತೆ ಬೆಳೆದಿತ್ತು.

ಆಗ ಅಮೆರಿಕ ಸೇರಿದಂತೆ ಮತ್ತಿತರ ವಿದೇಶದ ಮಲ್ಟಿನ್ಯಾಷನಲ್ ಕಂಪನಿಗಳಲ್ಲಿ ನಿನಗೆ ಕೆಲಸ ಕೊಡಿಸ್ತೀನಿ ಅಂತ ಯುವತಿಯನ್ನು ನಂಬಿಸಿದ್ದ ಸೌರಭ್.ಸುಳ್ಳು ಆಫರ್ ಲೆಟರ್ ಕೊಟ್ಟು, ಈಕೆಯಿಂದ ಉದ್ಯೋಗದ ನೆಪದಲ್ಲಿ ಕೋಟಿಗಟ್ಟಲೆ ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಪ್ರತಿದಿನ ಮೊಬೈಲ್ ಸಂಭಾಷಣೆಯಲ್ಲಿ ತೊಡಗಿದ್ದ ಅಸಾಮಿ ಸಾಕಷ್ಟು ಬಾರಿ ಆಕೆಯನ್ನು ಹೊರ ದೇಶಕ್ಕೆ ಹೋಗಬೇಕು, ರೆಡಿಯಾಗಿರು ಎಂದು ಹೇಳಿ, ಲಾಡ್ಜ್‌ಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ. ಉದ್ಯೋಗವಂತು ಕೊಡಿಸಲಿಲ್ಲ, ಮದುವೆಯಾಗಿ ಬದುಕಾದರೂ ಕೊಟ್ಟು ಕರುಣೆ ತೋರು ಎಂದು ಕೇಳಿದರೂ ಸೊಪ್ಪು ಹಾಕಿಲ್ಲ. ನಮ್ಮಿಂದ ಪಡೆದ ಎರಡು ಕೋಟಿ ರೂ. ಹಣವಾದರೂ ವಾಪಸ್ ಕೊಟ್ಟುಬಿಡು ಎಂದು ಯುವತಿ ಹಾಗೂ ಆಕೆಯ ಕುಟುಂಬ ಅಂಗಲಾಚಿದರೂ ಸಹ ಕಿಂಚಿತ್ ಅನುಕಂಪವಿಲ್ಲದೇ ಕೊಲೆ ಬೆದರಿಕೆ ಹಾಕಿದ್ದಾನೆಂದು ಆರೋಪಿಸಲಾಗಿದೆ

ಈ ಸಂಬಂಧ ಚಿತ್ರದುರ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಲ್ಲದೇ 2 ತಿಂಗಳ ಹಿಂದೆ ನೊಂದ ಯುವತಿಯ ತಂದೆ ಕೂಡ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನ ಆಧಾರದ ಮೇಲೆ ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Related Articles

Back to top button
error: Content is protected !!