ಇತರೆ

ಕೋಟ:ಮಹಿಳೆಯರ ಮೇಲೆ ಹಲ್ಲೆ ನಡೆಸಿದ ಪಿಎಸ್ಐ ವಜಾಗೊಳಿಸುವಂತೆ ಪ್ರತಿಭಟನೆ

Views: 0

ಉಡುಪಿ:  ಕೂಲಿ ಕೆಲಸ ಮಾಡಿಕೊಂಡಿರುವ ಆಶಾ ಮತ್ತು ಸುಜಾತ ಎನ್ನುವರ ಮೇಲೆ ಹಲ್ಲೆ ಮಾಡಿದ ಪೊಲೀಸ್ ಉಪನಿರೀಕ್ಷಕಿ ದೌರ್ಜನ್ಯ‌ ಎಸಗಿದ್ದಾರೆಂದು ಆರೋಪಿಸಿ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿ ಶನಿವಾರ ಕೋಟ ಪೊಲೀಸ್ ಠಾಣೆ ಎದುರು ದಲಿತ ಸಂಘರ್ಷ ಸಮಿತಿ ಹಾಗೂ ವಿವಿಧ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ ಮಾಸ್ತರ್ ಮಾತನಾಡಿ, ಕೂಲಿಕಾರ್ಮಿಕ ಮಹಿಳೆಯರ ಮೇಲೆ ನಡೆದ ಪೊಲೀಸ್ ದೌರ್ಜನ್ಯ ಖಂಡನೀಯ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ದೂರಿಗೆ ಪ್ರತಿಸ್ಪಂದನೆ ಸಿಗಲಿಲ್ಲ ಈ ಕುರಿತು ನಿಸ್ಪಕ್ಷಪಾತ ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಎಂದರು.

ದಸಂಸ ರಾಜ್ಯ ಮಹಿಳಾ ಸಂಘಟನಾ ಸಂಚಾಲಕಿ ವಸಂತಿ ಶಿವಾನಂದ, ಉಡುಪಿ ಜಿಲ್ಲಾ ದಸಂಸ ಸಂಘಟನಾ ಸಂಚಾಲಕರಾದ ಶ್ಯಾಮಸುಂದರ್ ತೆಕ್ಕಟ್ಟೆ, ಪರಮೇಶ್ವರ ಉಪ್ಪೂರು, ಅಖಿಲ ಭಾರತ ಜನವಾದಿ ಮಹಿಳಾ‌ಸಂಘಟನೆ ಜಿಲ್ಲಾ ಕಾರ್ಯದರ್ಶಿ ಶೀಲಾವತಿ, ಬೈಂದೂರು ತಾಲೂಕು ಅಧ್ಯಕ್ಷೆ ನಾಗರತ್ನಾ, ಕುಂದಾಪುರ ತಾಲೂಕು ಅಧ್ಯಕ್ಷೆ ಬಲ್ಕಿಷ್, ಸಾಲಿಗ್ರಾಮ ಘಟಕಾಧ್ಯಕ್ಷೆ ಶಾರದಾ, ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಪ್ರ.ಕಾರ್ಯದರ್ಶಿ ವೆಂಕಟೇಶ ಕೋಣಿ, ಸಿಐಟಿಯು ಜಿಲ್ಲಾ ಮುಖಂಡ ಚಂದ್ರಶೇಖರ್, ದಸಂಸ ಕುಂದಾಪುರ ತಾಲೂಕು ಸಂಚಾಲಕ ರಾಜು ಬೆಟ್ಟಿನಮನೆ, ಬೈಂದೂರು ತಾ| ಸಂಚಾಲಕ ನಾಗರಾಜ್ ಉಪ್ಪುಂದ, ಬ್ರಹ್ಮಾವರ ತಾ| ಸಂಚಾಲಕ ಶ್ರೀನಿವಾಸ ವಡ್ಡರ್ಸೆ, ಕಾಪು ತಾ| ಸಂಚಾಲಕ ವಿಠ್ಠಲ್, ಹೆಬ್ರಿ ಸಂಚಾಲಕ ದೇವಣ್ಣ ಹೆಬ್ರಿ, ಬೈಂದೂರು ತಾ| ಮಹಿಳಾ ಸಂಘಟನೆಯ ವಿನಯಾ ಮಾಸ್ತಿಕಟ್ಟೆ, ದಸಂಸ ಸಂಘಟನೆ ಕೋಟ ಸಂಚಾಲಕ ನಾಗರಾಜ ಪಡುಕೆರೆ, ಪ್ರಮುಖರಾದ ಸುರೇಶ್ ಹಕ್ಲಾಡಿ, ಗೋಪಾಲಕೃಷ್ಣ ನಾಡ, ವಿಜಯ ಗಿಳಿಯಾರು, ಗೋವಿಂದ, ಶ್ರೀಧರ್ ಕುಂಜಿಬೆಟ್ಟು, ಕೀರ್ತಿಕುಮಾರ್, ಲಕ್ಷ್ಮಣ್ ಬೈಂದೂರು, ಮಂಜುನಾಥ ಹಳಗೇರಿ, ಶ್ರೀನಿವಾಸ ಮಲ್ಯಾಡಿ, ಭಾಸ್ಕರ ಕೆರ್ಗಾಲು, ಕುಮಾರ ಕೋಟ, ಸುರೇಶ್ ಅಂಪಾರು, ಸತೀಶ್ ರಾಮನಗರ, ಶಿವಾನಂದ, ಮೋಹನ್ ಮೂಡುಬೆಟ್ಟು ಇನ್ನಿತರರು ಉಪಸ್ಥಿತರಿದ್ದರು.

Related Articles

Back to top button
error: Content is protected !!