ಮೂವರು ಮಕ್ಕಳು ಸೇರಿ ಒಂದೇ ಕುಟುಂಬದ 7 ಮಂದಿ ಸಾಮೂಹಿಕ ಆತ್ಮಹತ್ಯೆ

Views: 0
ಸೂರತ್: ಗುಜರಾತ್ನ ಸೂರತ್ನಲ್ಲಿನ ಮನೆಯೊಂದರಲ್ಲಿ ಶನಿವಾರ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬ ಏಳು ಮಂದಿ ಶವಗಳಾಗಿ ಪತ್ತೆಯಾಗಿದ್ದಾರೆ. ಪೊಲೀಸರಿಗೆ ಸ್ಥಳದಲ್ಲಿ ಆತ್ಮಾಹತ್ಯಾ ಚೀಟಿ ಕೂಡ ದೊರಕಿದೆ. ಹಣಕಾಸಿನ ಸಂಕಷ್ಟದ ಕಾರಣದಿಂದ ಕುಟುಂಬವು ಈ ಆಘಾತಕಾರಿ ನಿರ್ಧಾರ ತೆಗೆದುಕೊಂಡಿದೆ ಎಂದು ಪೊಲೀಸರು ಹೇಳಿದ್ದಾರೆ.
ಕುಟುಂಬದ ಆರು ಮಂದಿ ವಿಷ ಸೇವಿಸಿ ಜೀವ ಕಳೆದುಕೊಂಡಿಡುವುದು ದೃಢಪಟ್ಟಿದೆ. ಒಬ್ಬ ವ್ಯಕ್ತಿ ಮಾತ್ರ ನೇಣು ಬಿಗಿದುಕೊಂಡು ಸಾವಿಗೀಡಾಗಿದ್ದಾರೆ.
“ಒಬ್ಬ ವ್ಯಕ್ತಿ, ಆತನ ಪತ್ನಿ ಹಾಗೂ ಪೋಷಕರು, ದಂಪತಿಯ ಆರು ವರ್ಷದ ಮಗ, 10 ಮತ್ತು 13 ವರ್ಷದ ಇಬ್ಬರು ಹೆಣ್ಣುಮಕ್ಕಳು ಸೂರತ್ನ ಪಾಲನಪುರ ಜಕತ್ನಾಕ್ ರಸ್ತೆಯ ಸಿದ್ದೇಶ್ವರ ಅಪಾರ್ಟ್ಮೆಂಟ್ನಲ್ಲಿನ ತಮ್ಮ ನಿವಾಸದಲ್ಲಿ ಶನಿವಾರ ಬೆಳಿಗ್ಗೆ ಸತ್ತು ಬಿದ್ದಿರುವುದು ಪತ್ತೆಯಾಗಿದೆ. ಅವರ ಸಾವಿಗೆ ನಿಖರ ಕಾರಣ ತಿಳಿಯಲು ನಾವು ಪ್ರಯತ್ನಿಸುತ್ತಿದ್ದೇವೆ” ಎಂದು ವಲಯ 5ರ ಡಿಸಿಪಿ ಆರ್ಪಿ ಬರೋತ್ ತಿಳಿಸಿದರು.
ಮೃತರನ್ನು ಕನುಭಾಯ್ ಸೋಲಂಕಿ, ಅವರ ಪತ್ನಿ ಶೋಭಾಬೆನ್, ಮಗ ಮನೀಶ್ ಸೋಲಂಕಿ, ಅವರ ಪತ್ನಿ ರೀತಾ ಹಾಗೂ ಅವರ ಮೂವರು ಮಕ್ಕಳಾದ ದಿಶಾ, ಕಾವ್ಯ ಹಾಗೂ ಕುಶಾಲ್ ಎಂದು ಗುರುತಿಸಲಾಗಿದೆ.
ಮನೆ ನಿರ್ವಹಿಸುತ್ತಿದ್ದ ಮನೀಶ್, ಮನೆಯ ಸೀಲಿಂಗ್ಗೆ ನೇಣು ಹಾಕಿಕೊಂಡು ಮೃತಪಟ್ಟಿದ್ದಾರೆ. ಕುಟುಂಬದ ಉಳಿದ ಆರು ಮಂದಿ ಸದಸ್ಯರ ದೇಹಗಳು ಹಾಸಿಗೆ ಹಾಗೂ ಮನೆಯ ನೆಲದ ಮೇಲೆ ಬಿದ್ದಿದ್ದವು. ಈ ಆರು ಮಂದಿ ವಿಷಕಾರಿ ಪದಾರ್ಥ ಸೇವಿಸಿ ಜೀವ ಕಳೆದುಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ಹೇಳಿದರು.






