ಅಕ್ಕನನ್ನು ಸೇರಿಸಿಕೊಂಡು ಪತಿಯ ಕೊಲೆ,ಪತ್ನಿ ಸೆರೆ

Views: 0
ಬಿಹಾರ ಮೂಲದ ಎಂಬಾತನನ್ನು ಶಕೀಲ್ ನನ್ನು ಭೀಕರ ಕೊಲೆ ಶೌಚ ಗುಂಡಿಗೆ ಮೊಟೆ ಕಟ್ಟಿ ಎಸೆದಿದ್ದ ಸವಾಲಾಗಿದ್ದ ಪ್ರಕರಣವನ್ನು ಭೇದಿಸಿರುವ ಸಂಪಿಗೆಹಳ್ಳಿ ಪೊಲೀಸರು ಪತ್ನಿಯೇ ತನ್ನ ಅಕ್ಕನ ಜತೆ ಸೇರಿ ಕೊಲೆ ಮಾಡಿರುವುದನ್ನು ಪತ್ತೆಹಚ್ಚಿದ್ದಾರೆ.ಪತಿ ಶಕೀಲ್ ಅಕ್ತಾರ್ ನನ್ನು ಕೊಲೆ ಮಾಡಿ ಆತ ಕಾಣೆಯಾಗಿದ್ದಾನೆಂದು ಪೊಲೀಸ್ ಠಾಣೆಗೆ ದೂರು ನೀಡಿದ್ದ ಎರಡನೇ ಪತ್ನಿ ನಜೀರ್ ಖಾಟುನ್ (25) ಹಾಗೂ ಆಕೆಯ ಅಕ್ಕ ಕಾಶ್ಮೀರಿ(೨೮) ಬಂಧಿತ ಆರೋಪಿಗಳಾಗಿದ್ದಾರೆ.
ಸಂಪಿಗೆಹಳ್ಳಿಯ ಶಕೀಲ್ ನಿವಾಸದಲ್ಲಿ ಕಳೆದ ಅ. 9ರಂದು ರಾತ್ರಿ ಆರೋಪಿಗಳು ಬಿಹಾರಿ ಶಕೀಲ್‌ನ ಕೊಲೆ ಮಾಡಿದ್ದರು. ಅಂದು ನಗರದಲ್ಲಿ ಭಾರಿ ಮಳೆಯಾಗುತ್ತಿತ್ತು. ಇದೇ ಸಂದರ್ಭವನ್ನು ಬಳಸಿಕೊಂಡ ಆರೋಪಿಗಳು, ಯಾರ ಗಮನಕ್ಕೂ ಬಾರದ ರೀತಿ ಕೊಲೆಗೆ ಖತರ್ನಾಕ್ ಸಂಚು ಮಾಡಿದ್ದಾರೆ. ಮಂಚದ ಮೇಲೆ ಮಲಗಿದ್ದ ಶಕೀಲ್ ಎದೆ ಮೇಲೆ ಕುಳಿತ ಎರಡನೇ ಪತ್ನಿ ನಜೀರ್, ಆತನ ಕತ್ತು ಹಿಸುಕಿದ್ದಳು.
ನಾದಿನಿ ಕಾಶ್ಮೀರಿ ಆತನ ಕೈಕಾಲುಗಳನ್ನು ಬಿಗಿಯಾಗಿ ಹಿಡಿದುಕೊಂಡಿದ್ದಳು. ಮಂಚದ ಮೇಲಿಂದ ಕೆಳಗೆ ಬಿದ್ದರೂ ಬಿಡದೆ ಕತ್ತು ಹಿಸುಕಿ ಇಬ್ಬರೂ ಕೊಲೆ ಮಾಡಿದ್ದರು.
ಹತ್ಯೆ ಬಳಿಕ ಬೆಡ್ ಶೀಟ್‌ನಲ್ಲಿ ಶವವನ್ನು ಕಟ್ಟಿ, ಮಧ್ಯರಾತ್ರಿ ಭಾರಿ ಮಳೆಯ ನಡುವೆ ಶವ ಸಾಗಿಸಿ ಮನೆಯಿಂದ ಸ್ವಲ್ಪ ದೂರದಲ್ಲೇ ಇದ್ದ ಶೌಚ ಗುಂಡಿಗೆ ಹಾಕಿ ಬಂದಿದ್ದರು. ಎರಡು ದಿನ ಬಿಟ್ಟು, ಪತಿ ಕಾಣೆಯಾಗಿದ್ದಾನೆಂದು ಆಕೆಯೇ ಠಾಣೆಗೆ ಬಂದು ದೂರು ನೀಡಿದ್ದಳು. ಶೌಚ ಗುಂಡಿಯಿಂದ ಅ.15ರಂದು ಕೆಟ್ಟವಾಸನೆ ಬರುತ್ತಿದ್ದ ಮಾಹಿತಿಯ ಹಿನ್ನೆಲೆಯಲ್ಲಿ ಪರಿಶೀಲನೆ ಮಾಡಿದಾಗ ಪಿಟ್‌ನಲ್ಲಿ ಮೃತದೇಹ ಪತ್ತೆಯಾಗಿತ್ತು. ತನಿಖೆ ಕೈಗೊಂಡಿದ್ದ ಸಂಪಿಗೇಹಳ್ಳಿ ಪೊಲೀಸರು ಸಹೋದರಿಯರನ್ನು ಬಂಧಿಸಿದ್ದಾರೆ.






