ಇತರೆ

ನಾಲೆಗೆ ಬಿದ್ದ ಮಗಳನ್ನು ರಕ್ಷಿಸಲು ಹೋಗಿ ತಂದೆ-ತಾಯಿ ನೀರುಪಾಲು

Views: 18

ಮೈಸೂರು: ನಾಲೆಗೆ ಬಿದ್ದ ಮಗಳನ್ನು ರಕ್ಷಿಸಲು ಹೋಗಿ ತಂದೆ ತಾಯಿ ನೀರುಪಾಲಾದ ಘಟನೆ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಚಂಗೌಡನಹಳ್ಳಿ ಗ್ರಾಮದಲ್ಲಿ ನಡದಿದೆ.

ತಂದೆ ಮಹಮ್ಮದ್ ಕಪೀಲ್ (42), ತಾಯಿ ಶಾವರ ಭಾನು (35),ಮಗಳು ಶಾಹೀರಾ ಭಾನು (20) ಮೃತ ದುರ್ದೈವಿಗಳು.

ಆಕಸ್ಮಿಕವಾಗಿ ಕಾಲು ಜಾರಿ ನಾಲೆಗೆ ಬಿದ್ದ ಮಗಳನ್ನು ಕಾಪಾಡಲು ಹೋಗಿ ಅಪ್ಪ, ಅಮ್ಮ ಹಾಗೂ ಪುತ್ರಿ ಮೂವರೂ ಸಾವನ್ನಪ್ಪಿದ್ದಾರೆ. ನುಗು ಜಲಾಶಯ ಬಲದಂಡೆ ನಾಲೆಯಲ್ಲಿ ಕೈ ಕಾಲು ತೊಳೆಯಲು ಹೋದಾಗ ಘಟನೆ ನಡೆದಿದೆ. ಶಾಹೀರಾ ಭಾನು ಮೊದಲಿಗೆ ಕಾಲು ಜಾರಿ ಬಿದ್ದಿದ್ದು, ರಕ್ಷಣೆಗೆ ಹೋದ ಅಪ್ಪ, ಅಮ್ಮ ಸೇರಿ ಮೂವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಭೇಟಿ ನೀಡಿದ್ದು, ಮೂವರ ಮೃತ ದೇಹವನ್ನು ನೀರಿನಿಂದ ಹೊರತೆಗೆದಿದ್ದಾರೆ. ಸರಗೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದ್ದು, ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Related Articles

Back to top button
error: Content is protected !!