ಆತ್ಮಹತ್ಯೆ ಮಾಡಿಕೊಳ್ಳುವಂತೆ ನಾಟಕ ಮಾಡಿದ ಬಾಲಕ ಕುತ್ತಿಗೆಗೆ ಹಗ್ಗದ ಕುಣಿಕೆ ಸಿಕ್ಕಿ ಸಾವು ;ಮಗ ಸಾಯುತ್ತಿದ್ದರೂ ಅಸಹಾಯಕಳಾದ ಕುರುಡು ತಾಯಿ!

Views: 0
13 ವರ್ಷದ ಬಾಲಕ ತನ್ನ ಸಹೋದರಿಯರೊಂದಿಗೆ ಆಡುತ್ತಿದ್ದ ವೇಳೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ನಾಟಕ ಮಾಡಿದ್ದಾನೆ. ಆದರೆ ಮೇಜಿನ ಮೇಲಿಂದ ಕಾಲು ಜಾರಿ ಬಿದ್ದು ಕುತ್ತಿಗೆಗೆ ಹಗ್ಗದ ಕುಣಿಕೆಗೆ ಸಿಲುಕಿ ಬಾಲಕ ಸಾವನ್ನಪ್ಪಿದ್ದಾನೆ. ನೇಣು ಬಿಗಿದುಕೊಂಡಿದ್ದ ಬಾಲಕನನ್ನು ನೋಡಿ ಸಹೋದರಿಯರು ಕಿರುಚಿಕೊಂಡಿದ್ದಾರೆ. ಸದ್ದು ಕೇಳಿದ ತಾಯಿ ಕೋಣೆಗೆ ಓಡಿ ಬಂದಿದ್ದಾರೆ. ಆದರೆ ಆಕೆ ಕುರುಡಿಯಾಗಿದ್ದರಿಂದ ಮಗನನ್ನು ಉಳಿಸುವ ಪ್ರಯತ್ನ ವಿಫಲವಾಗಿದೆ ಎಂದು ತಿಳಿದುಬಂದಿದೆ.
ದೇವರು ನನ್ನ ದೃಷ್ಟಿಯನ್ನು ತೆಗೆದುಕೊಳ್ಳದಿದ್ದರೆ, ನನ್ನ ಮಗನನ್ನು ನಾನು ಉಳಿಸಿಕೊಳ್ಳುತ್ತಿದ್ದೆ. ನಾನು ಕಣ್ಣೆದುರೇ ಇದ್ದಾಗ ಮಗ ಸಾಯುತ್ತಿದ್ದರೂ ನಾನೇನೂ ಮಾಡಲಾಗಲಿಲ್ಲ ಎಂದು ಅಂಧ ತಾಯಿ ಕಣ್ಣೀರುಡುತ್ತಿದ್ದ ದೃಶ್ಯ ಎಂಥವರ ಮನಸ್ಸನ್ನು ಕರಗಿಸುವಂತಿತ್ತು.
ಜಲೌನ್ ಜಿಲ್ಲೆಯ ಒರೈಯ ಕಾನ್ಶಿರಾಮ್ ಕಾಲೋನಿಯಲ್ಲಿ ವಾಸವಾಗಿರುವ 50 ವರ್ಷದ ಸಂಗೀತಾ ಹುಟ್ಟಿನಿಂದಲೇ ಅಂಧೆ. ಘಟನೆ ವೇಳೆ ಅವರು ಕೋಣೆಯಲ್ಲಿ ಮಲಗಿದ್ದರು ಎಂದು ಪೊಲೀಸ್ ಅಧಿಕಾರಿ ಮೊಹಮ್ಮದ್ ಆರೀಫ್ ತಿಳಿಸಿದ್ದಾರೆ.






