ಇತರೆ

ಪ್ರಮುಖ ಬೇಡಿಕೆ ಅಗ್ರಹಿಸಿ ಇಂದಿನಿಂದ ಅತಿಥಿ ಉಪನ್ಯಾಸಕರ ಅಹೋರಾತ್ರಿ ಧರಣಿ ಸತ್ಯಾಗ್ರಹ

Views: 0

ತಮ್ಮ ಬೇಡಿಕೆಗಳ ಈಡೇರಿಕೆಗೆ ಅಗ್ರಹಿಸಿ ರಾಜ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಹಕ್ಕುಗಳ ಹೋರಾಟ ಸಮಿತಿಯಿಂದ ಮಂಗಳವಾರ ಸೆಪ್ಟೆಂಬರ್ 5 ರಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ.

ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ 4,000 ದಿಂದ 5,000 ಅತಿಥಿ ಉಪನ್ಯಾಸಕರು ಶಿಕ್ಷಕರ ದಿನದಂದೇ ಅನಿರ್ದಿಷ್ಟಾವಧಿ ವರೆಗೆ ಪ್ರತಿಭಟನೆ ನಡೆಸಲಿದ್ದಾರೆ. ಎಂದು ಅತಿಥಿ ಉಪನ್ಯಾಸಕರ ಹಕ್ಕುಗಳ ಹೋರಾಟ ಸಮಿತಿಯ ಅಧ್ಯಕ್ಷ ಡಾ.ನೂರ್ ಅಹಮದ್ ಎಂ.ಬಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 436 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅನೇಕ ವರ್ಷಗಳಿಂದ ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯ ಸರ್ಕಾರದ ಇತರೆ ಇಲಾಖೆಯ ನೌಕರರಂತೆ ಸೇವೆ ಕಾಯಂ ಸಿಗದೆ ನಿರಂತರವಾಗಿ ನಾನಾ ರೀತಿಯ ವಂಚನೆಗೆ ಒಳಗಾಗಿ ಶೋಷಣೆಯಿಂದ ಕೂಡಿದ ಉದ್ಯೋಗ ಮಾಡುವಂತಾಗಿದೆ. ಸೇವಾ ಅಭದ್ರತೆ ಸೃಷ್ಟಿಯಾಗಿದೆ. ಆದ್ದರಿಂದ ಭದ್ರತೆ ಕಲ್ಪಿಸುವವರೆಗೂ ಅಹೋರಾತ್ರಿ ಧರಣಿ ಸತ್ಯಾಗ್ರಹದ ಮೂಲಕ ಸರ್ಕಾರಕ್ಕೆ ಹಕ್ಕೋತ್ತಾಯ ಮಾಡುತ್ತೇವೆ ಎಂದರು.

ಪ್ರಮುಖ ಬೇಡಿಕೆಗಳು

ಎಲ್ಲಾ ಅತಿಥಿ ಉಪನ್ಯಾಸಕರ ಸೇವೆ ಕಾಯಂಗೊಳಿಸಬೇಕು.

ವರ್ಷದ ಎಲ್ಲಾ ತಿಂಗಳು ವೇತನ ಮತ್ತು ತಿಂಗಳಿಗೊಂದು ರಜೆ ಸೌಲಭ್ಯ ನೀಡಬೇಕು.

ಅವೈಜ್ಞಾನಿಕ ವಿವಿ ಕ್ಯಾಲೆಂಡರ್ ಆಫ್ ಇವೆಂಟ್ ರದ್ದುಗೊಳಿಸಿ ಅತಿಥಿ ಉಪನ್ಯಾಸಕರಿಗೆ ಗೌರವಧನ

ನೇಮಕಾತಿ ಆದೇಶದಲ್ಲಿ ಶೋಷಣೆಗೆ ಕಾರಣವಾಗಿರುವ ಷರತ್ತುಗಳನ್ನು ತೆಗೆಯಬೇಕು.

ಕಾರ್ಯಭಾರ ಲಭ್ಯವಾಗುವವರೆಗೂ ಉಪನ್ಯಾಸಕರನ್ನು ಸೇವೆಯಲ್ಲಿ ಮುಂದುವರಿಸಬೇಕು.

ಪದೇ ಪದೇ ದಾಖಲೆಗಳ ಪರಿಶೀಲಿಸುವುದನ್ನು ಬಿಟ್ಟು ಶಾಶ್ವತವಾಗಿ ಒಂದೇ ಭಾರಿ ನೈಜ್ಯತೆ ಪರಿಶೀಲಿಸಬೇಕು.

Related Articles

Back to top button
error: Content is protected !!