ಧಾರ್ಮಿಕ

ಹಬ್ಬದ ಮೆರವಣಿಗೆಯಲ್ಲಿ 60 ಅಡಿ ಎತ್ತರದ ದೇವಾಲಯದ ರಥ ಅಚಾನಕ್ ಕುಸಿದು ಬಿದ್ದು ಹಲವರಿಗೆ ಗಾಯ

Views: 23

ಕನ್ನಡ ಕರಾವಳಿ ಸುದ್ದಿ: ತಮಿಳುನಾಡಿನ ವೆಲ್ಲೂರು ಜಿಲ್ಲೆಯಲ್ಲಿ ಮಯಾನ ಕೊಳ್ಳಿ ಹಬ್ಬದ ಸಂದರ್ಭದಲ್ಲಿ ಭಾರಿ ಅವಘಡ ಸಂಭವಿಸಿದೆ.

ನಿನ್ನೆ ರಾತ್ರಿ ನಡೆದ ಮೆರವಣಿಗೆಯ ವೇಳೆ ಸುಮಾರು ಅರವತ್ತು ಅಡಿ ಎತ್ತರದ ದೇವಾಲಯದ ರಥ ಅಚಾನಕ್ ಕುಸಿದು ಬಿದ್ದ ಪರಿಣಾಮ ಕನಿಷ್ಠ ಏಳು ಮಂದಿ ಗಾಯಗೊಂಡಿದ್ದಾರೆ.

ಸಾವಿರಾರು ಭಕ್ತರು ಹಬ್ಬ ವೀಕ್ಷಿಸಲು ಸೇರಿದ್ದ ವೇಳೆ ಈ ಘಟನೆ ನಡೆದಿದ್ದು, ಕ್ಷಣಾರ್ಧದಲ್ಲಿ ಸಂಭ್ರಮ ಭೀತಿಯ ವಾತಾವರಣಕ್ಕೆ ತಿರುಗಿತು. ಗಾಯಾಳುಗಳಿಗೆ ತಕ್ಷಣವೇ ಪೊಲೀಸರು, ರಕ್ಷಣಾ ಸಿಬ್ಬಂದಿ ಹಾಗೂ ಸ್ಥಳೀಯರು ನೆರವಾಗಿದ್ದು, ಪರಿಸ್ಥಿತಿಯನ್ನು ಶೀಘ್ರದಲ್ಲೇ ನಿಯಂತ್ರಣಕ್ಕೆ ತರಲಾಗಿದೆ.

Related Articles

Back to top button
error: Content is protected !!